ಗದಗ : ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ..? ಪಿಎಫ್ಐ ಸಂಘಟನೆ ಸಿದ್ದರಾಮಯ್ಯರ ಕೂಸು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಗದಗದಲ್ಲಿ ಮಾನಾಡಿದ ಕಟೀಲ್ ‘ ಎಸ್. ಸಿ , ಎಸ್ ಟಿ ಮೀಸಲಾತಿ ನಮ್ಮ ಕೂಸು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಕಟೀಲ್ ತಿರುಗೇಟು ನೀಡಿದ್ದು, ಈ ಹಿಂದೆ ಸಿದ್ದರಾಮಯ್ಯಅಧಿಕಾರದಲ್ಲಿದ್ದಾಗ ಏನು ಮಾಡಿದರು. ಎಸ್ ಸಿ , ಎಸ್ ಟಿಗೆ ಮೀಸಲಾತಿ ಹೆಚ್ಚಳ ಮಾಡಬಹುದಿತ್ತಲ್ವಾ ? ಎಂದು ಪ್ರಶ್ನಿಸಿದ್ದಾರೆ.
ಇಂದು ಎಸ್. ಸಿ , ಎಸ್ ಟಿ ಬೇಡಿಕೆಗೆ ಗೌರವ ನೀಡಿದ್ದೇ ಸಿಎಂ ಬೊಮ್ಮಾಯಿ ಸರ್ಕಾರ, ಐದು ವರ್ಷ ಸಿಎ ಆಗಿದ್ದರು. ಅಂದು ಆ ಕೆಲಸ ಮಾಡದೇ ಕಾಲಹರಣ ಮಾಡಿದರು,ಯಾರೋ ಹುಟ್ಟಿಸಿದ ಮಗುವಿಗೆ ಇವರು ಹೇಗೆ ಅಪ್ಪ ಆಗುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಟೀಲ್ ವಾಗ್ಧಾಳಿ ನಡೆಸಿದರು.
ಸಿದ್ದರಾಮಯ್ಯರದ್ದು ಅನೈತಿಕ ಸಂಬಂಧದ ರಾಜಕಾರಣ ಮಾಡಿದ್ದಾರೆ. H.D.ದೇವೇಗೌಡರಿಗೆ ಸಿದ್ದರಾಮಯ್ಯ ಅನ್ಯಾಯ ಮಾಡಿದರು. ಗುರುಗಳನ್ನೇ ಮೆಟ್ಟಿ ಸಿದ್ದರಾಮಯ್ಯ ಕಾಂಗ್ರೆಸ್ಗೆ ಹೋದರು ಎಂದು ವಾಗ್ಧಾಳಿ ನಡೆಸಿದರು.
BREAKING NEWS: ಕಾಂಗ್ರೆಸ್ ಮಾಜಿ ಶಾಸಕ ಎನ್ಟಿ ಬೊಮ್ಮಣ್ಣ ನಿಧನ; ಗಣ್ಯರ ಸಂತಾಪ