ದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) PO ನೇಮಕಾತಿ 2022 ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಪ್ರೊಬೇಷನರಿ ಆಫೀಸರ್ಸ್ (Probationary Officers) ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯು ಸೆಪ್ಟೆಂಬರ್ 22, 2022 ರಂದು ಅಂದ್ರೆ, ಇಂದಿನಿಂದ ಪ್ರಾರಂಭವಾಗುತ್ತದೆ. ಅಭ್ಯರ್ಥಿಗಳು SBI ನ ಅಧಿಕೃತ ಸೈಟ್ sbi.co.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 12, 2022 ಕೊನೆಯ ದಿನಾಂಕವಾಗಿದೆ.
ಈ ನೇಮಕಾತಿ ಡ್ರೈವ್ 1673 ಪೋಸ್ಟ್ಗಳನ್ನು ಭರ್ತಿ ಮಾಡುತ್ತದೆ.
SBI PO Recruitment 2022: ಖಾಲಿಯಿರುವ ಹುದ್ದೆಗಳ ವಿವರ
ನಿಯಮಿತ ಹುದ್ದೆ: 1600 ಪೋಸ್ಟ್ಗಳು
ಬ್ಯಾಕ್ಲಾಗ್ ಹುದ್ದೆ: 73 ಪೋಸ್ಟ್ಗಳು
ಅರ್ಹತೆ ಮಾನದಂಡ
* ಅಭ್ಯರ್ಥಿಯು ಪದವೀಧರರಾಗಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು
* ವಯಸ್ಸು 21 ರಿಂದ 30 ವರ್ಷಗಳ ನಡುವೆ ಇರಬೇಕು
ಆಯ್ಕೆಯ ಮೂರು ಹಂತ
ಹಂತ 1: SBI PO ಪ್ರಿಲಿಮ್ಸ್ ಪರೀಕ್ಷೆ
ಹಂತ 2: SBI PO ಮುಖ್ಯ ಪರೀಕ್ಷೆ
ಹಂತ 3: SBI PO ಸೈಕೋಮೆಟ್ರಿಕ್ ಪರೀಕ್ಷೆ
ಅರ್ಜಿ ಶುಲ್ಕ
ಅರ್ಜಿ ಶುಲ್ಕವು ಸಾಮಾನ್ಯ/ EWS/ OBC ಅಭ್ಯರ್ಥಿಗಳಿಗೆ ₹750 ಮತ್ತು SC/ ST/ PwBD ಅಭ್ಯರ್ಥಿಗಳಿಗೆ ‘ನಿಲ್’. ಒಮ್ಮೆ ಪಾವತಿಸಿದ ಅರ್ಜಿ ಶುಲ್ಕವನ್ನು ಯಾವುದೇ ಖಾತೆಯಲ್ಲಿ ಮರುಪಾವತಿಸಲಾಗುವುದಿಲ್ಲ ಅಥವಾ ಯಾವುದೇ ಪರೀಕ್ಷೆ ಅಥವಾ ಆಯ್ಕೆಗಾಗಿ ಅದನ್ನು ಕಾಯ್ದಿರಿಸಲಾಗುವುದಿಲ್ಲ.
ಅಭ್ಯರ್ಥಿಗಳು ಇತ್ತೀಚಿನ ವಿವರ ಮತ್ತು ಅಪ್ಡೇಟ್ಸ್ಗಾಗಿ ಎಸ್ಬಿಐ ಅಧಿಕೃತ ವೆಬ್ಸೈಟ್ www.sbi.co.in/careers ಗೆ ಭೇಟಿ ನೀಡಬಹುದು.
BREAKING NEWS : ಕಲಬುರಗಿಯಲ್ಲೂ `NIA’ ದಾಳಿ : `PFI’ ಜಿಲ್ಲಾಧ್ಯಕ್ಷ ಸೇರಿ ಇಬ್ಬರ ಬಂಧನ