ಧಾರವಾಡ : ನಿಜಾಮುದ್ದೀನ್ ರೈಲಿಗೆ ‘ಸವಾಯಿ ಗಂಧರ್ವ’ ಹೆಸರಿಡಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರಹ್ಲಾದ್ ಜೋಶಿ ಮಾತನಾಡಿದ್ದು ‘ 20 ಕೋಟಿ ರೂ. ವೆಚ್ಚದಲ್ಲಿ ಧಾರವಾಡ ನಿಲ್ದಾಣ ಅಭಿವೃದ್ಧಿ ಮಾಡಿದ್ದೇವೆ. ಟೆಕ್ನಾಲಜಿಯನ್ನು ನಾವು ರೈಲ್ವೆಯಲ್ಲಿ ಬಳಸಿಕೊಳ್ಳುತ್ತಿದ್ದೇವೆ. ನಿಜಾಮುದ್ದೀನ್ ಟ್ರೈನಿಗೆ ಸವಾಯಿ ಗಂಧರ್ವ ಹೆಸರು ಇಡಲು ಮನವಿ ಮಾಡಿದ್ದೇವೆ. ಈ ರೈಲು ವಾರಕ್ಕೆ ಒಂದು ಬಾರಿ ಬರುತ್ತದೆ.ಅದನ್ನು ಎರಡು ಬಾರಿ ಬರುವಂತೆ ಮಾಡಿ ಎಂದು ಮನವಿ ಸಲ್ಲಿಸಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಈ ಕುರಿತು ಟ್ವೀಟ್ ಮಾಡಿದ ಜೋಶಿ ಸಾಂಸ್ಕೃತಿಕ ನಗರಿ, ವಿದ್ಯಾ ಕಾಶಿ ಎಂದೇ ಕರೆಯಲ್ಪಡುವ ಧಾರವಾಡದ ಜನರ ಬಹುದಿನದ ಬೇಡಿಕೆಯಾಗಿದ್ದ ರೈಲು ನಿಲ್ದಾಣ ಪುನರಾಭಿವೃದ್ಧಿ ಪೂರ್ಣಗೊಂಡು, ಇಂದಿನಿಂದ ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ. ವೈಯಕ್ತಿಕವಾಗಿ ಕೂಡ ಮನಸ್ಸಿಗೆ ತುಂಬಾ ಹತ್ತಿರವಾಗಿದ್ದು ಈ ಯೋಜನೆಯ ಲೋಕಾರ್ಪಣೆಯಲ್ಲಿ ಪಾಲ್ಗೊಂಡಿದ್ದು ಸಂತಸ ನೀಡಿದೆ ಎಂದಿದ್ದಾರೆ.
ಮದ್ರಾಸ್ ದಕ್ಷಿಣ ಮರಾಠಾ ರೈಲ್ವೆ ವತಿಯಿಂದ ನಿರ್ಮಿಸಲಾಗಿದ್ದ ಧಾರವಾಡದ ಈ ರೈಲ್ವೆ ನಿಲ್ದಾಣವಕ್ಕೆ 2018ರಲ್ಲಿ 20 ಕೋಟಿ ರೂ. ಅನುದಾನ ನೀಡಿ, ನವೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಹೊಸ ಕಟ್ಟಡವು, ಭಾರತೀಯ ರೈಲ್ವೇ ವಿನೂತನ ಕಲ್ಪನೆ ಅಡಿಯಲ್ಲಿ `ಬಯೋಫಿಲಿಕ್ ವಾಸ್ತುಶಿಲ್ಪ’ ಆಧರಿಸಿ ನಿರ್ಮಿಸಲಾಗಿದೆ ಎಂದಿದ್ದಾರೆ.
ಲೋಕಾರ್ಪಣೆಗೊಂಡ ಧಾರವಾಡ ರೈಲು ನಿಲ್ದಾಣ
ಕೇಂದ್ರ ರೈಲ್ವೆ ಸಚಿವರಾದ ಶ್ರೀ @AshwiniVaishnaw ಅವರು ಇಂದು ಪುನರಾಭಿವೃದ್ಧಿಗೊಂಡ ಧಾರವಾಡದ ರೈಲು ನಿಲ್ದಾಣವನ್ನು ಲೋಕಾರ್ಪಣೆ ಮಾಡಿದರು. 1/7 pic.twitter.com/qbkcB6cBca
— Pralhad Joshi (@JoshiPralhad) October 11, 2022
ಕಾಂಗ್ರೆಸ್ ನಾಯಕ ವಿರುದ್ಧ ಗುಡುಗಿದ BSY: ತನಿಖೆ ಮಾಡಿಸಿ, ನಿಮ್ಮ ಹಗರಣ ಬಯಲು ಮಾಡುತ್ತೇವೆಂದು ಎಚ್ಚರಿಕೆ