ಬೆಳಗಾವಿ: ಈಗಾಗಲೇ ಅನೇಕ ಬಾರಿ ವಿ.ಡಿ ಸಾರ್ವರ್ಕರ್ ಪೋಟೋ ಹಾಗೂ ಪಠ್ಯಕ್ರಮದ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರು ಸಿಡಿದೆದ್ದಿದ್ದರು. ಈಗ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಹಾಕಿರೋ ಬಗ್ಗೆ ವಿವಾದದ ಎದ್ದಿದೆ. ಈ ಬಗ್ಗೆ ಕಲಾಪದಲ್ಲಿಯೇ ನಾಳೆ ಕಾಂಗ್ರೆಸ್ ಪಕ್ಷದ ಸದಸ್ಯರಿಂದ ಪ್ರತಿಭಟನೆಗೆ ಇಳಿಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ವಿ.ಡಿ ಸಾರ್ವರ್ಕರ್ ಅವರ ಪೋಟೋವನ್ನು ಆಡಳಿತಾರೂಢ ಬಿಜೆಪಿ ಸರ್ಕಾರದಿಂದ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಈ ಪೋಟೋವನ್ನು ನಾಳೆ ಕಲಾಪ ಆರಂಭಕ್ಕೂ ಮುನ್ನಾ ಬಿಜೆಪಿ ನಾಯಕರಿಂದ ಅನಾವರಣಗೊಳಿಸಲಾಗುತ್ತಿದೆ ಎನ್ನಲಾಗಿದೆ. ಹೀಗೆ ಸಾರ್ವರ್ಕರ್ ಪೋಟೋ ಅನಾವರಣಕ್ಕೆ ಕಾಂಗ್ರೆಸ್ ವಿರೋಧ ಫಿಕ್ಸ್ ಎಂದೇ ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ಬೆಳಗಾವಿಯ ಸುವರ್ಣಸೌಧದಲ್ಲಿ ಸಾರ್ವರ್ಕರ್ ಪೋಟೋ ಅಳವಡಿಸಲಾಗಿದೆ ಎಂದು ಈಗಷ್ಟೇ ತಿಳಿದು ಬಂದಿದೆ. ನಾನು ಇನ್ನೂ ನೋಡಿಲ್ಲ. ನಾಳೆ ನೋಡಿದ ನಂತ್ರವೇ ಆ ಬಗ್ಗೆ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕಲಾಪ ಆರಂಭಕ್ಕೂ ಮುನ್ನವೇ ಈಗ ಸಾರ್ವರ್ಕರ್ ಪೋಟೋ ಅಳವಡಿಕೆ ಕಿಚ್ಚು ಹೊತ್ತಿದೆ. ಪೋಟೋ ತೆರವಿಗಾಗಿ ನಾಳೆ ಸದನದ ಬಾವಿಗಿಳಿದು ವಿಪಕ್ಷ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನೆಗೂ ಇಳಿಯೋ ಸಾಧ್ಯತೆ ಇದೆ. ಆ ಬಗ್ಗೆ ಏನಾಗಲಿದೆ ಎಂಬುದನ್ನು ನಾಳೆಯವರೆಗೆ ಕಾದು ನೋಡಬೇಕಿದೆ.
ರೈಲ್ವೆ ಪ್ರಯಾಣಿಕರೇ ಎಚ್ಚರ: ನೀವು ಇದನ್ನು ಮಾಡಿದ್ರೆ ಜೈಲಿಗೆ ಹೋಗುವಿರಿ ಹುಶಾರ್….!