ತುಮಕೂರು: ರಾಜ್ಯದಲ್ಲಿ ಸಾವರ್ಕರ್ ಸಂಘರ್ಷ ದಿನಕ್ಕೊಂದು ಸ್ವರೂಪವನ್ನು ಪಡೆಯುತ್ತಿದೆ. ಈ ವಿಚಾರವಾಗಿಯೇ ಜಿಲ್ಲಾ ಪ್ರವಾಸ ಕೈಗೊಂಡಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಕೊಡಗಿನಲ್ಲಿ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದಿದ್ದಾರೆ. ಚಿಕ್ಕಮಗಳೂರು ಪ್ರವಾಸದ ವೇಳೆಯಲ್ಲಿಯೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಈ ನಡುವೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿಯೇ ಸಾವರ್ಕರ್ ಉದ್ಯಾನವನ ಉದ್ಘಾಟನೆ ಮಾಡಿದ್ದಂತ ಶಿಲಾನ್ಯಸದ ಪೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
BIG NEWS: ಪ್ರಚೋದನಕಾರಿ ಹೇಳಿಕೆ ಹಿನ್ನಲೆ: ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ದೂರು ದಾಖಲು
ಶಿವಮೊಗ್ಗ, ತುಮಕೂರು ಜಿಲ್ಲೆಯಲ್ಲಿ ಸಾವರ್ಕರ್ ಪೋಟೋ ಹಾಕಿದ್ದನ್ನು ವಿರೋಧಿಸಿ ಅನೇಕರು ಪ್ಲೆಕ್ಸ್ ಹರಿದು ಹಾಕಿದ್ದರು. ಇದರಿಂದ ರಾಜ್ಯದಲ್ಲಿ ಸಾವರ್ಕರ್ ಫ್ಲೆಕ್ಸ್ ಸಂಘರ್ಷಕ್ಕೆ ಕಾರಣವಾಗಿತ್ತು. ಅಲ್ಲದೇ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕೆ ಸಾವರ್ಕರ್ ಕೊಡುಗೆ ಏನು ಎಂಬುದಾಗಿ ಪ್ರಶ್ನಿಸಿದ್ದರು. ಜೊತೆಗೆ ಸ್ವಾತಂತ್ರ್ಯ ಸಂದರ್ಭದಲ್ಲಿ ಸಾವರ್ಕರ್ ಪೋಟೋ ಬಳಕೆ ಬಗ್ಗೆಯೂ ವಿರೋಧ ವ್ಯಕ್ತ ಪಡಿಸಿದ್ದರು.
ಈ ಬೆನ್ನಲ್ಲೇ ಈಗ ಸೋಷಿಯಲ್ ಮೀಡಿಯಾದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಂತ ಸಂದರ್ಭದಲ್ಲಿ, ತುಮಕೂರಿನಲ್ಲಿ ವಿ ಡಿ ಸಾವರ್ಕರ್ ಉದ್ಯಾನವನದ ಶಿಲಾನ್ಯಸ ನೆರವೇರಿಸಿದ್ದಂತ ಪೋಟೋ ವೈರಲ್ ಆಗಿದೆ.
‘ಬೆಸ್ಕಾಂ ಗ್ರಾಹಕ’ರಿಗೆ ಬಹುಮುಖ್ಯ ಮಾಹಿತಿ: ನಾಳೆ 8 ಜಿಲ್ಲೆಗಳ ‘ಗ್ರಾಮೀಣ ಪ್ರದೇಶ’ಗಳಲ್ಲಿ ‘ವಿದ್ಯುತ್ ಅದಾಲತ್’
ಈ ಪೋಟೋ ಗಮನಿಸಿದಂತ ನೆಟ್ಟಿಗರು, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಡಾ.ಜಿ ಪರಮೇಶ್ವರ್, ರೋಷನ್ ಬೇಗ್ ತುಮಕೂರಿನ ವಿನಾಯಕ ದಾಮೋದರ್ ಸಾವರ್ಕರ್ ಉದ್ಯಾನವನ್ನು ಉದ್ಘಾಟಿಸಿದ್ದರು. ಆಗ ಸಿದ್ಧರಾಮಯ್ಯವರು ನಿದ್ದೆಯಲ್ಲಿದ್ದರೇ ಎಂಬುದಾಗಿ ವಿಪಕ್ಷ ನಾಯಕರನ್ನು ಕುಟುಕಿದ್ದಾರೆ.
Janmashtami Special : ಕೃಷ್ಣ ಭಕ್ತರೇ, ವಿಶ್ವದ ಅತಿ ದೊಡ್ಡ ‘ಶ್ರೀಕೃಷ್ಣ ದೇವಾಲಯ’ ಎಲ್ಲಿದೆ.? ಹೇಗಿದೆ ಗೊತ್ತಾ.?
ಅಂದಹಾಗೇ ವೈರಲ್ ಆಗಿರುವಂತ ಶಿಲಾನ್ಯಾಸದ ಪೋಟೋದಲ್ಲಿ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಾರ್ಡ್ ನಂ 15ರ ಸ್ವಾತಂತ್ರ್ಯ ವೀರ ಶ್ರೀ ವಿ.ದಾ.ಸಾವರ್ಕರ್ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ. ದಿನಾಂಕ 06-08-2016, ಉಪಸ್ಥಿತಿ ಟಿಬಿ ಜಯಚಂದ್ರ, ಕಾನೂನು, ಸಂಸದೀಯ ಸಚಿವರು, ಡಾ.ಜಿ ಪರಮೇಶ್ವರ್, ಗೃಹಸಚಿವರು, ಆರ್ ಶೋಷನ್ ಬೇಗ್ ನಗರಾಭಿವೃದ್ಧಿ ಸಚಿವರು ಸೇರಿದಂತೆ ವಿವಿಧ ಕಾಂಗ್ರೆಸ್ ನಾಯಕರ ಹೆಸರಿದೆ.