ಬೆಂಗಳೂರು: ಕಾಂಗ್ರೆಸ್ನ ಸತೀಶ್ ಜಾರಕಿಹೊಳಿಯ ಹೇಳಿಕೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ತಿಳಿಸಿದರು.
ಇಂಡಿ ಪಟ್ಟಣದಲ್ಲಿ ಇಂದು ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಸತೀಶ ಜಾರಕಿಹೊಳಿ ಹಿಂದೂ ಎಂಬ ಶಬ್ದ ಪರ್ಶಿಯನ್ ಭಾಷೆಯಿಂದ ಬಂದುದಾಗಿ ಹೇಳಿದ್ದಾರೆ. ಸತೀಶ ಜಾರಕಿಹೊಳಿ ಅವರೇ ಗೂಗಲ್ ನೋಡಿ ಏನೆಲ್ಲ ಹೇಳಬೇಡಿ. ಎಲ್ಲ ಕಾಂಗ್ರೆಸ್ ನಾಯಕರೂ ಹಿಂದೂಗಳನ್ನು ಟೀಕೆ ಮಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಇತ್ತು ಅವಾಗ ಗೋವುಗಳ ಹತ್ಯೆ ಮಾತ್ರವಲ್ಲದೆ ಹಿಂದೂಗಳ ಹತ್ಯೆಯಾಗುತ್ತಿತ್ತು. ಯಡಿಯೂರಪ್ಪ ಸರ್ಕಾರ ಬಂದ ಮೇಲೆ ನಾವು ಗೋ ಹತ್ಯಾ ನಿಷೇಧವನ್ನು ಜಾರಿಗೊಳಿಸಿದೆವು ಎಂದು ಮೆಚ್ಚುಗೆ ಸೂಚಿಸಿದರು.
‘ಜಿಎಸ್ಟಿ ತೆರಿಗೆದಾರ’ರ ಗಮನಕ್ಕೆ: ‘ರಿಟರ್ನ್ ಫೈಲಿಂಗ್ ಪ್ರಕ್ರಿಯೆ’ಯಲ್ಲಿ ಮಹತ್ವದ ಬದಲಾವಣೆ | GST Taxpayers
ಸತೀಶ ಜಾರಕಿಹೊಳಿಯವರೇ ಹಿಂದೂ ಎಂದರೆ ಏನು ಎಂದು ನಿಮಗೆ ಜನ್ಮ ನೀಡಿದವರಿಗೆ ಕೇಳಿ; ಗೂಗಲ್ ಕೇವಲ ಹತ್ತಾರು ವರ್ಷಗಳ ಕೆಳಗೆ ಬಂದಿದೆ. ನಾವು ಅದರಲ್ಲಿ ಏನು ಬರೆಯುತ್ತೇವೋ ಅದನ್ನೇ ಹೇಳುತ್ತದೆ ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ನಾಯಕರ ಇಂಥ ಹೇಳಿಕೆ ಮತ್ತು ವರ್ತನೆಯಿಂದಾಗಿಯೇ ದೇಶದಲ್ಲಿ ಕೇವಲ 2 ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ. ಬಿಜೆಪಿ 18 ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದೆ. ಎಲ್ಲ ರಾಜ್ಯಗಳ ಚುನಾವಣೆಯಲ್ಲೂ ಬಿಜೆಪಿ ಗೆಲುವು ದಾಖಲಿಸುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದರ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಗಳನ್ನು ಅವಮಾನಿಸುವ ಹೇಳಿಕೆ ಸಹಿಸಲಸಾಧ್ಯ – ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ
ಬಿಜೆಪಿಗೆ ಗೆಲುವಿನ ಟ್ರೆಂಡ್ ಇದೆ. ಕಾಂಗ್ರೆಸ್ ಗೆ ಸೋಲಿನ ಟ್ರೆಂಡ್ ಇದೆ. 150 ವಿಧಾನಸಭೆ ಸದಸ್ಯರಲ್ಲಿ ಇಂಡಿ ಮತಕ್ಷೇತ್ರದಿಂದ ಒಬ್ಬ ಬಿಜೆಪಿ ಶಾಸಕರು ಇರಬೇಕು. ತಾವು ಎಲ್ಲರೂ ಕೈ ಜೋಡಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ವಿಜಯಪುದಲ್ಲಿ 2024 ಕ್ಕೆ ನಲ್ಲಿನೀರು ಇಲ್ಲದ ಯಾವುದೇ ಮನೆ ಇರುವುದಿಲ್ಲ. ಕಾಂಗ್ರೆಸ್ ದೇಶದಲ್ಲಿ ಆರು ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ಮಾಡಿದೆ. ಆದರೆ ದೇಶದಲ್ಲಿ ಸಾಕಷ್ಟು ಗ್ರಾಮಗಳು ವಿದ್ಯುತ್ ಸಂಪರ್ಕ ಹೊಂದಿರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಬಂದ ಮೇಲೆ 10 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರಿಸಿದರು.