ಬಳ್ಳಾರಿ: ಮಾಜಿ ಸಚಿವ ಸಂತೋಷ್ ಲಾಡ್ ( Farmer Minister Santhosh Lad ) ನೀಡಿರುವಂತ ಹೇಳಿಕೆ, ಈಗ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಬೆಂಕಿ ಬಿರುಗಾಳಿ ಏಳಿಸುವಂತೆ ಮಾಡಿದೆ. ಅದೇ ಮುಂದಿನ ಚುನಾವಣೆಯಲ್ಲಿ ( Karnataka Assembly Election 2023 ) ಸಿದ್ಧರಾಮಯ್ಯ ( Siddaramaiah ) ಸ್ಪರ್ಧಿಸದೇ ರಾಜ್ಯ ಪ್ರವಾಸ ಮಾಡುವುದೇ ಒಳಿತು ಎಂಬುದಾಗಿದೆ.
ಶ್ರದ್ಧಾ ವಾಕರ್ ಹತ್ಯೆ ಮಾದರಿಯಲ್ಲೇ ಬಾಂಗ್ಲಾದಲ್ಲೊಂದು ಘಟನೆ: ಪ್ರೇಯಸಿಯನ್ನು ತುಂಡರಿಸಿ ಚರಂಡಿಗೆ ಎಸೆದ ಪಾಪಿ
ಈ ಬಗ್ಗೆ ಮಾತನಾಡಿರುವಂತ ಮಾಜಿ ಸಚಿವ ಸಂತೋಷ್ ಲಾಡ್ ಅವರು, ಮುಂದಿನ ಚುನಾವಣೆಯಲ್ಲಿ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ( DK Shivakumar ) ಸ್ಪರ್ಧಿಸದೇ ಇರೋದು ಒಳ್ಳೆಯದು ಎಂಬುದಾಗಿ ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಸಿದ್ಧರಾಮಯ್ಯ, ಡಿಕೆಶಿ ಸ್ಪರ್ಧಿಸದೇ ರಾಜ್ಯ ಪ್ರವಾಸ ಮಾಡಲಿ. ಈ ಇಬ್ಬರು ನಾಯಕರು ಪ್ರವಾಸ ಮಾಡಿದಷ್ಟು ಒಳ್ಳೆಯದು. ಅವರು ಸ್ಪರ್ಧೆ ಮಾಡಿದಿದ್ದರೇ ಇನ್ನೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ಅಮೆಜಾನ್ ನಿಂದ ಈ ವಾರ 10000 ಸಿಬ್ಬಂದಿ ವಜಾ : ಸಿಇಒ ಆಂಡಿ ಜಾಸ್ಸಿ ಘೋಷಣೆ | Amazon laying off nearly 10,000
ಸಂತೋಷ್ ಲಾಡ್ ಅವರ ಮುಂದಿನ ಚುನಾವಣೆ ಸಿದ್ಧರಾಮಯ್ಯ ಸ್ಪರ್ಧಿಸದೇ ಇದ್ದರೇ ಸೂಕ್ತ ಹೇಳಿಕೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವಂತ ವಿಪಕ್ಷ ನಾಯಕ ಸಿದ್ಧರಾಮಯ್ಯ, ನಾನು ಸಹ ಅವರ ಮಾತನ್ನು ಪರಿಗಣಿಸುತ್ತೇನೆ. ಅಂತಿಮವಾಗಿ ಎಲ್ಲಿ ಸ್ಪರ್ಧಿಸಬೇಕು ಎಂದು ಪಕ್ಷ ತೀರ್ಮಾನಿಸುತ್ತದೆ ಎಂಬುದಾಗಿ ಹೇಳಿದ್ದಾರೆ.