ಶಿವಮೊಗ್ಗ: ನಗರದಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಗ್ಗಾನ್ ಆಸ್ಪತ್ರೆಗೆ ಸಂತೋಷ್ ಗುರೂಜಿ ಭೇಟಿ ನೀಡಿ ಪ್ರೇಮ್ ಸಿಂಗ್ ಆರೋಗ್ಯವನ್ನು ವಿಚಾರಿಸಿದ್ರು. ಚಾಕು ಇರಿತದಿಂದ ಗಾಯಗೊಂಡ ಪ್ರೇಮ್ ಸಿಂಗ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಂತೋಷ ಗುರೂಜಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಗರದಲ್ಲಿ ಹಿಂದುಗಳಿಗೆ ರಕ್ಷಣೆಯೇ ಇಲ್ಲ. ಇನ್ಮುಂದೆ ಅವರು ಓಡಾಡುವಾಗ ವೆಪನ್ ಗಳನ್ನ ಇಟ್ಟುಕೊಂಡು ಹೋಗಬೇಕು. ಮಂಗಳೂರು ಮಾದರಿಯನ್ನು ಶಿವಮೊಗ್ಗ ಯುವಕರು ಅನುಸರಿಸಬೇಕಿದೆ ಎಂದರು.
ಇಂತಹ ವಿವಾದಗಳೆಲ್ಲ ತಪ್ಪಬೇಕು. ಯಾವುದೇ ಸರ್ಕಾರವಾದ್ರು ಹಿಂದೂಗಳ ರಕ್ಷಣೆ ಮಾಡುವವರನ್ನು ಬೆಂಬಲಿಸಿ ಎಂದು ಹೇಳಿದ್ದಾರೆ.ಈ ಪ್ರಕರಣದಲ್ಲಿ ಶಿವಮೊಗ್ಗದ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ದಕ್ಷ ಎಸ್ಪಿ ಮತ್ತು ಡಿಸಿ ಶಿವಮೊಗ್ಗ ಜಿಲ್ಲೆಯಲ್ಲಿದ್ದಾರೆ. ಹಿಂದೂಗಳು ಅನಿವಾರ್ಯವಾಗಿ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು.