ತುಮಕೂರು: ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ಆಂಬುಲೆನ್ಸ್ ಸೇವೆಯಲ್ಲಿ ಯಾವುದೇ ಕೊರತೆ ಇರದೇ ಇದ್ದರೂ, ಕೃತಕ ಸಮಸ್ಯೆ ಉಂಟಾಗುತ್ತಿತ್ತು. ಅಲ್ಲದೇ ಕಳೆದ ಶನಿವಾರದಂದು ಇರಕಸಂದ್ರ ಕಾಲೋನಿಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡು, ಸಕಾಲದಲ್ಲಿ ಆಂಬುಲೆನ್ಸ್ ಸೇವೆ ಸಿಗದಿದ್ದಕ್ಕೆ ಸಾರ್ವಜನಿಕರಿಂದ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಈ ಕಾರಣದಿಂದಾಗಿ ಸಾಂಗ್ಲಿಯಾನ ಸಿನಿಮಾ ಸ್ಟೈಲ್ ನಲ್ಲಿ ಸಮಸ್ಯೆ ಸರಿ ಪಡಿಸೋದಕ್ಕೆ ತಹಶೀಲ್ದಾರ್ ಮಾರುವೇಶದಲ್ಲಿ ಫೀಲ್ಡಿಗೆ ಇಳಿದರು. ಅದು ಎಲ್ಲಿ.? ಏನಾಯ್ತು ಅನ್ನೋ ಬಗ್ಗೆ ಮುಂದೆ ಓದಿ.
BREAKING NEWS: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ರಾಯಚೂರಿನಲ್ಲಿ ದೃಢ: ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ
ಕೊರಟಗೆರೆ ತಾಲೂಕಿನಲ್ಲಿ ಆಂಬುಲೆನ್ಸ್ ಸಕಾಲದಲ್ಲಿ ಸಿಗದೇ ತಾಲೂಕಿನ ಜನರು ಸಮಸ್ಯೆಗೆ ಸಿಲುಕುವಂತೆ ಆಗಿತ್ತು. ಅಲ್ಲದೇ ತಾಲೂಕು ಆಡಳಿತದ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದರು. ಹೀಗಾಗಿ ಕೊರಟಗೆರೆ ತಹಶೀಲ್ದಾರ್ ನಹೀದಾ ಸ್ಟಿಂಗ್ ಸಮಸ್ಯೆ ಏನಾಗಿದೆ ಎಂಬುದಾಗಿ ಪರೀಕ್ಷಿಸಲು ಸ್ಟಿಂಗ್ ಆಪರೇಷನ್ ಗೆ ಇಳಿದರು.
BREAKING NEWS: ರಾಜ್ಯದಲ್ಲೇ ಮೊದಲ ಝೀಕಾ ವೈರಸ್ ರಾಯಚೂರಿನಲ್ಲಿ ದೃಢ: ಇಂದು ಸಂಜೆ ಮಾರ್ಗಸೂಚಿ ಬಿಡುಗಡೆ
ಸಂಜೆ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ 5 ಗಂಟೆ 5 ನಿಮಿಷಕ್ಕೆ ರಾಮಕ್ಕ ಹೆಸರಿನಲ್ಲಿ 108ಗೆ ಕರೆ ಮಾಡಿದ್ದಾರೆ. ವಡ್ಡಗೆರೆ ಕ್ರಾಸ್ ಬಳಿ ಅಪಘಾತವಾಗಿದೆ. ಆಂಬುಲೆನ್ಸ್ ಬೇಕು ಬೇಗ ಕಳುಹಿಸಿ ಎಂದಿದ್ದಾರೆ. ಈ ಕರೆಯನ್ನು ಗ್ರಾಹಕ ಸೇವಾಕೇಂದ್ರದಿಂದ ಆಂಬುಲೆನ್ಸ್ ಚಾಲಕನಿಗೆ ವರ್ಗಾವಣೆ ಆಗಿದೆ. ಸಿಬ್ಬಂದಿ ಉಮಾದೇವಿ ಎಂಬುವರು 8 ನಿಮಿಷ ಮಾತನಾಡಿ, ಆಂಬುಲೆನ್ಸ್ ತೋವಿನಕೆರೆ ಬಳಿ ಇದೆ. ಅಲ್ಲಿಂದ ಬರೋದಕ್ಕೆ 1 ಗಂಟೆಯಾಗುತ್ತದೆ. ತಡವಾಗುವ ಕಾರಣ ಕಾಯಿರಿ ಇಲ್ಲವೇ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸುವಂತೆ ಉಡಾಫೆ ಉತ್ತರ ನೀಡಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ಬರೋದಕ್ಕೆ 15 ರಿಂದ 20 ನಿಮಿಷ ಸಾಕು. ಒಂದು ಗಂಟೆ ತಡವಾಗಲಿದೆ ಎಂಬುದಾಗಿ ಹೇಳಿದಂತ ಆಂಬುಲೆನ್ಸ್ ಸಿಬ್ಬಂದಿಯ ಉಡಾಫೆಯಿಂದ, ಇಂದು ಕೃತಕ ಸಮಸ್ಯೆ ಎಂಬುದಾಗಿ ಪತ್ತೆ ಹಚ್ಚಿದ್ದಾರೆ.
ಈ ಬಗ್ಗೆ ಆಂಬುಲೆನ್ಸ್ ಕೃತಕ ಸಮಸ್ಯೆ ಸೃಷ್ಠಿಸುತ್ತಿರುವಂತ ಸಿಬ್ಬಂದಿಗಳ ಬಗ್ಗೆ ಆಕ್ರೋಶಗೊಂಡಂತ ತಹಶೀಲ್ದಾರ್ ನಹೀದಾ ಅವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಮಾಡಿದ್ದಾರೆ. ಜೊತೆಗೆ ಆಂಬುಲೆನ್ಸ್ ಕೃತಕ ಸಮಸ್ಯೆ ಉಂಟುಮಾಡುತ್ತಿರುವಂತ ಸಿಬ್ಬಂದಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಮನವಿ ಮಾಡಿದ್ದಾರೆ.