Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘KPSC’ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ಆರೋಪ : ಆಂತರಿಕೆ ತನಿಖೆ ಆರಂಭ

05/03/2026 1:04 PM

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

05/03/2026 12:56 PM

ಉಜಿರೆ ‘ರುಡ್‌ಸೆಟ್‌’ನಿಂದ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ ತರಬೇತಿ’ಗೆ ಅರ್ಜಿ ಆಹ್ವಾನ

05/03/2026 12:53 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘108 ಸಿಬ್ಬಂದಿ’ಗಳ ‘ವೇತನ ಬಾಕಿ’ ಉಳಿಸಿಕೊಂಡಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
KARNATAKA

‘108 ಸಿಬ್ಬಂದಿ’ಗಳ ‘ವೇತನ ಬಾಕಿ’ ಉಳಿಸಿಕೊಂಡಿಲ್ಲ: ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

By kannadanewsnow0906/05/2024 7:58 PM

ಬೆಂಗಳೂರು: 108 ಆರೋಗ್ಯ ಕವಚದ ಅಂಬ್ಯುಲೆನ್ಸ್ ಚಾಲಕರಿಗೆ ಸರ್ಕಾರದ ಕಡೆಯಿಂದ ಯಾವುದೇ ವೇತನ ಬಾಕಿ ಉಳಿಸಿಕೊಂಡಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅಂಬ್ಯುಲೆನ್ಸ್ ಚಾಲಕರಿಗೆ ನ್ಯಾಯಯುತವಾಗಿ ಸಿಗಬೇಕಾದ ವೇತನವನ್ನ ಸರ್ಕಾರ ನೀಡುತ್ತಿದೆ ಎಂದರು.

ಸರ್ಕಾರದಲ್ಲಿ ಯಾವುದೇ ಹಣಕಾಸಿನ ತೊಂದರೆ ಇಲ್ಲ. 108 ಅಂಬ್ಯುಲೆನ್ಸ್ ಯೋಜನೆ ಸುಗಮವಾಗಿ ನಡೆಸಲು ಆರ್ಥಿಕ ವರ್ಷ 2023-24 ನೇ ಸಾಲಿನಲ್ಲಿ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 210.33 ಕೋಟಿಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು, ಸದರಿ ಅನುದಾನದಲ್ಲಿ ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ನಿಗದಿಯಾದ ರೂ. 162.40 ಕೋಟಿಗಳ ಪೂರ್ಣ ಅನುದಾನವನ್ನು ಸೇವಾದಾರರಿಗೆ ಬಿಡುಗಡೆಗೊಳಿಸಲಾಗಿದೆ. 2024-25 ನೇ ಸಾಲಿನಲ್ಲಿ 108-ಆರೋಗ್ಯ ಕವಚ ಯೋಜನೆಗೆ ಆರ್ಥಿಕ ಇಲಾಖೆಯಿಂದ ಆರೋಗ್ಯ ಇಲಾಖೆಗೆ ರೂ. 260.33 ಕೋಟಿಗಳ ಅನುದಾನವನ್ನು ಆಯವ್ಯಯದಲ್ಲಿ ಅನುಮೋದನೆಯಾಗಿದ್ದು ಸೇವಾದಾರರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ವಾರ್ಷಿಕ ರೂ. 162.40 ಕೋಟಿಗಳ ಅನುದಾನವನ್ನು ಬಿಡುಗಡೆಗೊಳಿಸಬೇಕಾಗಿರುತ್ತದೆ. ಆರೋಗ್ಯ ಇಲಾಖೆ ಹಾಗೂ ಇ.ಎಂ.ಆರ್‌.ಐ ಗ್ರೀನ್‌ ಹೆಲ್ತ್‌ ಸಂಸ್ಥೆಯವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ವಯ 711 ಆಂಬ್ಯುಲೆನ್ಸ್‌ಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಸೇವೆ ಒದಗಿಸಿದ್ದಲ್ಲಿ ಪ್ರತಿ ತ್ರೈಮಾಸಿಕಕ್ಕೆ ರೂ. 40.60 ಕೋಟಿಗಳಂತೆ ವಾರ್ಷಿಕ ರೂ. 162.40 ಕೋಟಿಗಳ ಅನುದಾನವು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.

ವಿಪಕ್ಷಗಳ ನಾಯಕರು ಅನಗತ್ಯವಾಗಿ ಗ್ಯಾರಂಟಿ ಯೋಜನೆಯಿಂದ ಹಣಕಾಸಿನ ತೊಂದರೆಯಾಗಿದೆ ಎಂದು 108 ಆರೋಗ್ಯ ಕವಚ ಯೋಜನೆಗೆ ತಳುಕು ಹಾಕುವುದರಲ್ಲಿ ಯಾವುದೇ ಹುರುಳಿಲ್ಲ ಎಂದು‌ ಸ್ಪಷ್ಟಪಡಿಸಿದರು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 108 ವ್ಯವಸ್ಥೆಯಲ್ಲಿ ಒಂದಿಷ್ಟು ಲೋಪದೋಷಗಳು ಆಗಿರುವುದು ನಿಜ. 108 ಸಿಬ್ಬಂದಿಗಳಿಗೆ ಕನಿಷ್ಠಿ ವೇತನದ ಜಾರಿಗೊಳಿಸಿದ್ದಲ್ಲದೇ ಸರ್ಕಾರದ ಅನುಮತಿ ಇಲ್ಲದೇ ನಿಯಮಬಾಹಿರವಾಗಿ ಶೇ 45 ರಷ್ಟು ವೇತನ ಹೆಚ್ಚಳ ಮಾಡಲಾಗಿತ್ತು. ಇದೀಗ 108 ಸಿಬ್ಬಂದಿಗಳು ಶೇ 45 ರಷ್ಟು ವೇತನ ಹೆಚ್ಚಳ ಮಾಡಿರುವುದನ್ನ ಕಡಿತಗೊಳಿಸದಂತೆ ಬೇಡಿಕೆ ಇಡುತ್ತಿದ್ದಾರೆ ಎಂದರು.

ನಮ್ಮ ಸರ್ಕಾರ ನಿಯಮಾನುಸಾರ ಕನಿಷ್ಠ ವೇತನ ನೀಡಲು ಬದ್ಧವಾಗಿದ್ದು, ಅದರಂತೆ ಅನುದಾನವನ್ನ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ಅಂಬ್ಯುಲೆನ್ಸ್ ಚಾಲಕರಿಗೆ 35 ಸಾವಿರಕ್ಕೂ ಹೆಚ್ವು ವೇತನ ದೊರೆಯುತ್ತಿದೆ. ಇದರ ಮೇಲೂ ಮೂಲ ವೇತನದಲ್ಲಿ ಶೇ 45 ರಷ್ಟು ಹೆಚ್ಚಳ ಮಾಡುವ ಬಗ್ಗೆ ಸಿಬ್ಬಂದಿಗಳು ಬೇಡಿಕೆ ಇಟ್ಟಿದ್ದು, ನಿಯಮಬಾಹಿರವಾಗಿ ಈ ಕ್ರಮ ಕೈಗೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಈ ಬಗ್ಗೆ 108 ಸಿಬ್ಬಂದಿಗಳನ್ನ ಕರೆದು ಚರ್ಚಿಸಿ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೇ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬದಲಾವಣೆ ಮಾಡಲು ಅವಕಾಶವಿಲ್ಲ ಎಂದು ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ನ್ಯಾಯಯುತವಾಗ ಕನಿಷ್ಢ ವೇತನ ಸರ್ಕಾರ ನೀಡುತ್ತಿದ್ದು, ಸರ್ಕಾರದಲ್ಲಿ ಯಾವುದೇ ಹಣಕಾಸಿನ ಕೊರತೆಯಿಲ್ಲ ಎಂದರು.

ಅಲ್ಲದೇ ಜಿವಿಕೆ ಇಎಂಆರ್ ಸಂಸ್ಥೆ ಹಾಗೂ ಚಾಲಕರ ನಡುವಿನ ವೇತನ ಪಾವತಿ ಸಮಸ್ಯೆಗಳ ಬಗ್ಗೆಯೂ ಸಂಸ್ಥೆಯವರೊಂದಿಗೆ ಇಲಾಖೆ ಆಯುಕ್ತರು ಚರ್ಚಿಸಿ, ವೇತನ ಬಾಕಿ ಉಳಿಸಿಕೊಳ್ಳದಂತೆ ಆದೇಶಿಸಿದ್ದಾರೆ. ಇದಕ್ಕೂ ಮೀರಿ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು ಮುಷ್ಕರಕ್ಕೆ ಮುಂದಾದರೆ ಪರ್ಯಾಯ ವ್ಯವಸ್ಥೆಗೆ ಸರ್ಕಾರ ಸಿದ್ಧವಿದೆ. 108 ಅಂಬ್ಯುಲೆನ್ಸ್ ಸೇವೆಯನ್ನ ನಿಲ್ಲಿಸಲು ಸಾಧ್ಯವಿಲ್ಲ. ಅನಿವಾರ್ಯವಾಗಿ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಮುಂದಾಗಬೇಕಾಗಲಿದೆ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.

ಹಿಂದಿನ ಸರ್ಕಾರವಿದ್ದ ವೇಳೆ ವ್ಯವಸ್ಥೆಯಲ್ಲಾದ ಲೋಪವನ್ನ ನಮ್ಮ ಸರ್ಕಾರ ಸರಿಪಡಿಸುತ್ತಿದೆ. ಟೆಂಡರ್ ಗಳನ್ನ ಕರೆಯದೇ ಜಿವಿಕೆ ಇಎಂಆರ್ ಸಂಸ್ಥೆಯೊಂದಿಗೆ ಒಡಂಬಡಿಕೆಯ ಮೂಲಕವೇ 108 ವ್ಯವಸ್ಥೆಯನ್ನ ಮುಂದುವರಿಸಿಕೊಂಡು ಬರಲಾಗಿದೆ. ನಮ್ಮ ಸರ್ಕಾರ ಬಂದ ಬಳಿಕ ನಿಯಮನುಸಾರ ಟೆಂಡರ್ ಕರೆಯಲು ಕ್ರಮ ಕೈಗೊಳ್ಳುತ್ತಿದೆ. ವ್ಯವಸ್ಥೆಯಲ್ಲಾದ‌ ಲೋಪಗಳನ್ನ ಸರಿಪಡಿಸುತ್ತಿರುವಾಗ ಸಿಬ್ಬಂದಿಗಳು ಸಹಕರಿಸಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಮನವಿ ಮಾಡಿದ್ದಾರೆ.

ಎಚ್ಚರ.! ನಿಮ್ಮ ಬಳಿ ‘ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ’ ಇಟ್ಟುಕೊಳ್ಳುವುದು ‘ಅಪರಾಧ’ | Prajwal Revanna

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆ ವೇಳೆ ಅಕ್ರಮ ಮತದಾನ : MLC ಎಂಟಿಬಿ ನಾಗರಾಜ್ ಗಂಭೀರ ಆರೋಪ

Share. Facebook Twitter LinkedIn WhatsApp Email

Related Posts

BIG NEWS : ‘KPSC’ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ಆರೋಪ : ಆಂತರಿಕೆ ತನಿಖೆ ಆರಂಭ

05/03/2026 1:04 PM2 Mins Read

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

05/03/2026 12:56 PM2 Mins Read

ಉಜಿರೆ ‘ರುಡ್‌ಸೆಟ್‌’ನಿಂದ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ ತರಬೇತಿ’ಗೆ ಅರ್ಜಿ ಆಹ್ವಾನ

05/03/2026 12:53 PM2 Mins Read
Recent News

BIG NEWS : ‘KPSC’ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ಆರೋಪ : ಆಂತರಿಕೆ ತನಿಖೆ ಆರಂಭ

05/03/2026 1:04 PM

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

05/03/2026 12:56 PM

ಉಜಿರೆ ‘ರುಡ್‌ಸೆಟ್‌’ನಿಂದ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ ತರಬೇತಿ’ಗೆ ಅರ್ಜಿ ಆಹ್ವಾನ

05/03/2026 12:53 PM

ರಾಜ್ಯದ ರೈತರೇ ಗಮನಿಸಿ : `ಸೌರ ಪಂಪ್ ಸೆಟ್’ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ 80% ಸಬ್ಸಿಡಿ !

05/03/2026 12:43 PM
State News
KARNATAKA

BIG NEWS : ‘KPSC’ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ಆರೋಪ : ಆಂತರಿಕೆ ತನಿಖೆ ಆರಂಭ

By kannadanewsnow0505/03/2026 1:04 PM KARNATAKA 2 Mins Read

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಗೆಜೆಟೆಡ್ ಪ್ರೊಬೇಷನರ್ಸ್ (Group A & B) ಹುದ್ದೆಗಳ ಮುಖ್ಯ…

ರಾಜ್ಯದ ರೈತರೇ ಗಮನಿಸಿ : ಕಚೇರಿಗೆ ಅಲೆಯುವಂತಿಲ್ಲ, ಮೊಬೈಲ್‌ ನಲ್ಲೇ ಪಡೆಯಿರಿ `ಸೆಂಟ್ರಲ್ ಫಾರ್ಮರ್ ಐಡಿ’  

05/03/2026 12:56 PM

ಉಜಿರೆ ‘ರುಡ್‌ಸೆಟ್‌’ನಿಂದ 10 ದಿನಗಳ ಉಚಿತ ‘ಆಹಾರ ಸಂಸ್ಕರಣಾ ಉದ್ಯಮಿ ತರಬೇತಿ’ಗೆ ಅರ್ಜಿ ಆಹ್ವಾನ

05/03/2026 12:53 PM

ರಾಜ್ಯದ ರೈತರೇ ಗಮನಿಸಿ : `ಸೌರ ಪಂಪ್ ಸೆಟ್’ ಅಳವಡಿಕೆಗೆ ಸರ್ಕಾರದಿಂದ ಸಿಗಲಿದೆ 80% ಸಬ್ಸಿಡಿ !

05/03/2026 12:43 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.