ಬೆಂಗಳೂರು: ವಿವಿಧ ಉದ್ಯೋಗಾವಕಾಶವನ್ನು ಮಹಿಳೆಯರಿಗೆ ಕಲ್ಪಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಮಹತ್ವದ ಹೆಜ್ಜೆಯನ್ನು ಇರಿಸಲಾಗುತ್ತಿದೆ. ಈ ಸಲುವಾಗಿ ಗ್ರಾಮಾಣ ಪ್ರದೇಶದ ಮಹಿಳೆಯರಿಗೆಗೆ ಗೌರಿ-ಗಣೇಶ ಹಬ್ಬದಂದು ಬಾಗಿನ ಅರ್ಪಿಸೋದಕ್ಕೆ ಮುಂದಾಗಿದೆ. ಇದರ ಭಾಗವಾಗಿ ಪಂಚಾಯ್ತಿ ಮಟ್ಟದಲ್ಲಿ 30 ಸಾವಿರ ಮಹಿಳೆಯರಿಗೆ ಸಖಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸೋ ನಿರ್ಧಾರ ಕೈಗೊಂಡಿದೆ.

BIG NEWS: ವೊಡಾಪೋನ್ ಐಡಿಯಾದ 2 ಕೋಟಿ ಗ್ರಾಹಕರ ದತ್ತಾಂಶ ಸೋರಿಕೆ

ಹೌದು.. ಸಖಿ ಪರಿಕಲ್ಪನೆ ಮೂಲಕ ವಿವಿಧ ಉದ್ಯೋಗಾವಕಾಶ ಕಲ್ಪಿಸಿ, ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸೋ ಹೊಸ ಯೋಜನೆಯನ್ನು ಸರ್ಕಾರ ಗೌರಿ-ಗಣೇಶ ಹಬ್ಬದಂದು ಜಾರಿಗೊಳಿಸುತ್ತಿದೆ. ಈ ಯೋಜನೆಯ ಅಂಗವಾಗಿ ಕೃಷಿ ಸಖಿ, ಹೈನುಗಾರಿಕೆ ಸಖಿ, ವನ ಸಖಿ, ಬ್ಯಾಂಕ್ ವಹಿವಾಟು ಸಖಿ, ಡಿಜಿಟಲ್ ಪಾವತಿ ಸಖಿ ರೂಪದಲ್ಲಿ ಮಹಿಳೆಯರಿಗೆ ಉದ್ಯೋಗ ತರಬೇತಿ ನೀಡಿ, ಸ್ವಾಲಂಬಿಯನ್ನಾಗಿಸೋ ನಿಟ್ಟಿನಲ್ಲಿ, ಸರ್ಕಾರ ಕ್ರಮ ಕೈಗೊಳ್ಳಲಿದೆ.

BIG NEWS: ರಾಮಮಂದಿರ ಕೆಲಸ ಶೇ.40ರಷ್ಟು ಪೂರ್ಣ: 2023ರ ಡಿಸೆಂಬರ್ ಗೆ ಭಕ್ತರಿಗೆ ಮುಕ್ತ

ಈ ಕುರಿತು ಮಾಹಿತಿ ಹಂಚಿಕೊಂಡಿರುವಂತ ಜೀವನೋಪಾಯ ಅಭಿಯಾನ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಅವರು, ಗ್ರಾಮೀಣ ಜನರ ಜೀವನೋಪಾಯ ವೃದ್ಧಿ ಹಾಗೂ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸೋ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಅದಕ್ಕೆ ತಕ್ಕಂತೆ ಕೌಶಲ್ಯ ತರಬೇತಿ ನೀಡೋ ಸಲುವಾಗಿ ಗಮನ ಹರಿಸಲಾಗುತ್ತಿದೆ. ಆ ಭಾಗವಾಗಿಯೇ ಪಂಚಾಯ್ತಿಗೆ 5 ಜನ ಸಖಿಯರನ್ನು ನೇಮಕ ಮಾಡಲಾಗುತ್ತಿದೆ. ಕೃಷಿ ಸಖಿಯರ ತರಬೇತಿಯನ್ನು ಸೆಪ್ಟೆಂಬರ್ 5ರಂದು ಆರಂಭಿಸಲಾಗುತ್ತದೆ ಎಂದು ಹೇಳಿದರು.

ಗುತ್ತಿಗೆದಾರರ ಸಂಘಕ್ಕೆ ಬಿಗ್ ಶಾಕ್: ಇಂದು ಎಲ್ಲಾ ಸದಸ್ಯರಿಗೆ ಸಚಿವ ಮುನಿರತ್ನರಿಂದ ಮಾನನಷ್ಟ ಮೊಕದ್ದಮ್ಮೆ ನೋಟಿಸ್

ಅಂದಹಾಗೇ ಮಹಿಳಾ ಸ್ವಸಹಾಯ ಗುಂಪುಗಳಲ್ಲಿ ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ, ಮಾರುಕಟ್ಟೆಗೆ ಸಂಬಂಧಿಸಿದಂತೆ ಮಾಹಿತಿ ನೀಡೋ ಕೆಲಸವನ್ನು ಗ್ರಾಮಪಂಚಾಯ್ತಿಗೆ ನೇಮಕಗೊಳ್ಳುವಂತ ಇಬ್ಬರು ಸಖಿಯರು ಮಾಡಲಿದ್ದಾರೆ. ಈ ಕಾರಣದಿಂದಾಗಿಯೇ ತರಬೇತಿ ನೀಡಿದ ಬಳಿಕ ಇಬ್ಬರು ಸಖಿಯರನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ನೇಮಕ ಮಾಡಲಾಗುತ್ತಿದೆ. ಈ ಮೂಲಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಗೌರಿ ಹಬ್ಬದಂದು ಬಾಗಿನದ ರೀತಿಯಲ್ಲಿ ಸಖಿ ಭಾಗ್ಯವನ್ನು ಅನುಷ್ಠಾನಗೊಳಿಸುತ್ತಿದೆ.

BIG NEWS: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಮೇಲ್ಮನವಿ ವಿಚಾರಣೆ | Hijab Row Suprem court

Share.
Exit mobile version