ಉತ್ತರಪ್ರದೇಶ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮಮಂದಿರದ ಕಾಮಗಾರಿ ಶೇ.40ರಷ್ಟು ಪೂರ್ಣಗೊಂಡಿದೆ. ಹೀಗಾಗಿ 2023ರ ಡಿಸೆಂಬರ್ ವೇಳೆಗೆ ಮಂದಿರವು ಭಕ್ತರಿಗೆ ಸಂಪೂರ್ಣ ತೆರೆದುಕೊಳ್ಳಲಿದೆ ಎಂದು ರಾಮಜನ್ಮಭೂಮಿ ಟ್ರಸ್ಟ್ ಹೇಳಿದೆ.

IND vs PAK Asia Cup 2022: ಭಾರತ-ಪಾಕಿಸ್ತಾನ ಏಷ್ಯಾ ಕಪ್ ಪಂದ್ಯದ ಮುಖ್ಯಾಂಶಗಳು: ಪಾಕಿಸ್ತಾನವನ್ನು 5 ವಿಕೆಟ್ ಗಳಿಂದ ಸೋಲಿಸಿದ ಭಾರತ

ಪ್ರಧಾನಿ ನರೇಂದ್ರ ಮೋದಿಯವರು 2020ರ ಆಗಸ್ಟ್ 5ರಂದು ಅಯೋಧ್ಯೆ ರಾಮಮಂದಿರ ( ayodhya ram mandir ) ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ಮಾಡಿದ ಬಳಿಕ, ಈಗ ಶೇ.40ರಷ್ಟು ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹೀಗಾಗಿ 2023ರ ಡಿಸೆಂಬರ್ ವೇಳಎಗೆ ಮಂದಿರ ಪೂರ್ಣಗೊಂಡು ಭಕ್ತರಿಗೆ ಶ್ರೀರಾಮನ ದರ್ಶನ ಭಾಗ್ಯಸಿಗಲಿದೆ ಎಂದು ದೇಗುಲ ನಿರ್ಮಾಣ ಹೊಣೆ ಹೊತ್ತಿರುವಂತ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಾಸ ವ್ಯಕ್ತ ಪಡಿಸಿದೆ.

ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆ: ಸೆ.24ರಿಂದ ನಾಮಪತ್ರ ಸಲ್ಲಿಕೆ ಆರಂಭ, ಆ.17ಕ್ಕೆ ಮತದಾನ, 19ಕ್ಕೆ ಫಲಿತಾಂಶ ಪ್ರಕಟ

ಅಂದಹಾಗೇ ದೇಗುಲ ನಿರ್ಮಾಣ ಮತ್ತು ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ. ನಿರ್ಮಾಣಕ್ಕೆ ಹಣದ ಯಾವುದೇ ಕೊರತೆ ಇಲ್ಲ. ಮುಂದಿನ 1 ಸಾವಿರ ವರ್ಷ ಹಾಳಾಗದಂತೆ ದೇಗುಲಕ್ಕಾಗಿ ಗಟ್ಟಿಮುಟ್ಟಾದ ತಳಪಾಯ ಹಾಕಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.

Share.
Exit mobile version