ಕೋಲಾರ: ಗುತ್ತಿಗೆಯಲ್ಲಿ ಕಮೀಷನ್ ಆರೋಪ ಮಾಡಿರುವಂತ ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರಿಗೆ ಇಂದು ವಕೀಲರ ಮೂಲಕ ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಲಾಗುವುದು ಎಂಬುದಾಗಿ ಸಚಿವ ಮುನಿರತ್ನ ( Minister Munirathna ) ಹೇಳಿದ್ದಾರೆ.

ಕಾಂಗ್ರೆಸ್ ಹೊಸ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಘೋಷಣೆ: ಸೆ.24ರಿಂದ ನಾಮಪತ್ರ ಸಲ್ಲಿಕೆ ಆರಂಭ, ಆ.17ಕ್ಕೆ ಮತದಾನ, 19ಕ್ಕೆ ಫಲಿತಾಂಶ ಪ್ರಕಟ

ಈ ಬಗ್ಗೆ ಮಾತನಾಡಿರುವಂತ ಅವರು, ಇಂದು ಗುತ್ತಿಗೆದಾರರ ಸಂಘದ ಎಲ್ಲಾ ಸದಸ್ಯರಿಗೆ ನೋಟಿಸ್ ನೀಡಲಾಗುತ್ತದೆ. ನೋಟಿಸ್ ನಲ್ಲಿ ಪ್ರಸ್ತಾಪಿಸಿರುವ ಅಂಶಗಳಂತೆ 7 ದಿನಗಳಲ್ಲಿ ನಡೆದುಕೊಳ್ಳದೇ ಇದ್ದರೇ ಕ್ರಿಮಿನಲ್ ಮಾನನಷ್ಟ ಮೊಕದ್ದಮ್ಮೆ ದಾಖಲಿಸುತ್ತೇನೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

BIG NEWS: ರಾಮಮಂದಿರ ಕೆಲಸ ಶೇ.40ರಷ್ಟು ಪೂರ್ಣ: 2023ರ ಡಿಸೆಂಬರ್ ಗೆ ಭಕ್ತರಿಗೆ ಮುಕ್ತ

ಇಂದು ಬೆಳಿಗ್ಗೆ 11 ಗಂಟೆಗೆ ಗುತ್ತಿಗೆದಾರರ ಎಲ್ಲಾ ಕಚೇರಿಗಳಿಗೂ ನೋಟಿಸ್ ಕಳುಹಿಸಲಾಗುತ್ತದೆ. ಪತ್ರ ತಲುಪಿದ 7 ದಿನಗಳಲ್ಲಿ ಮಾಧ್ಯಮಗಳ ಮೂಲಕ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಆರೋಪಕ್ಕೆ ತಕ್ಕಂತೆ ಪೂರಕ ದಾಖಲೆ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.

BIG NEWS: ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಿಜಾಬ್‌ ಮೇಲ್ಮನವಿ ವಿಚಾರಣೆ | Hijab Row Suprem court

Share.
Exit mobile version