Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ.ಆರ್ ನೇಮಿಸಿ ಸರ್ಕಾರ ಆದೇಶ

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’27 ತಹಶೀಲ್ದಾರ್’ಗಳನ್ನು ವರ್ಗಾವಣೆ | Tahashildar Transfer

​ತಾಂತ್ರಿಕ ದೋಷ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅರ್ಧದಾರಿಯಲ್ಲೇ ವಾಪಸ್

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಹದೇವ್ ಕೆಲವಡಿಗೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್ ಪುಳಕ!
FILM

ಸಹದೇವ್ ಕೆಲವಡಿಗೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್ ಪುಳಕ!

By ಅವಿನಾಶ್‌ ಆರ್‌ ಭೀಮಸಂದ್ರ

ಕೆಎನ್‌ಡಿಜಿಟಲ್‌ಡೆಸ್ಕ್‌:ಮೊದಲ ಹೆಜ್ಜೆಯಲ್ಲಿಯೇ `ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ ಪಾಲಿಗೆ ರೋಮಾಂಚಕ ಗೆಲುವು ಸಿಕ್ಕಿದೆ. ಸಿನಿಮಾವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಈ ಸಿನಿಮಾ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್ ಗೆ ಪ್ರವೇಶ ಪಡೆದಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಇದೀಗ ಮತ್ತೊಂದು ಸಂಭ್ರಮದ ಸಂಗತಿಯನ್ನು ಚಿತ್ರ ತಂಡ ಹಂಚಿಕೊಂಡಿದೆ. ಈ ಚಿತ್ರಕ್ಕೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಜ್ಯೂರಿ ಅವಾರ್ಡ್ ಲಭಿಸಿದೆ. ಈ ಮೂಲಕ ಸಹದೇವ್ ಕೆಲವಡಿ ಮೊದಲ ಪ್ರಯತ್ನದಲ್ಲಿಯೇ ತಮ್ಮ ನಿರ್ದೇಶನದ ಕಸುವನ್ನು ಸಾಬೀತುಪಡಿಸಿದ್ದಾರೆ. ಈ ಸುದ್ದಿಯೊಂದಿಗೆ ಕೆಂಡದ ಸುತ್ತ ಹಬ್ಬಿಕೊಂಡಿರುವ ನಿರೀಕ್ಷೆಗಳಿಗೆ ಮತ್ತೊಂದಷ್ಟು ಆವೇಗ ಬಂದಂತಾಗಿದೆ.

 

ದೆಹಲಿಯಲ್ಲಿ ನಡೆಯಲಿರುವ 14ನೇ ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್-24ಕ್ಕೆ ಕೆಂಡ ಪ್ರವೇಶ ಪಡೆದುಕೊಂಡಿತ್ತು. ಈ ಹಂತದಲ್ಲಿ ಅಟತ್ಯಂತ ಕ್ಲಿಷ್ಟಕರ ಸ್ಪರ್ಧೆಯನ್ನು ದಾಟಿಕೊಂಡಿದ್ದ `ಕೆಂಡ’ ಚಿತ್ರ ಕಡೆಗೂ ಅತ್ಯುತ್ತಮ ಚೊಚ್ಚಲ ನಿರ್ದೇಶನ ವಿಭಾಗದ ಜ್ಯೂರಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಸುತ್ತಿನಲ್ಲಿ ನಾನಾ ಭಾಷೆಗಳ: ಚಿತ್ರಗಳ ನಡುವೆ ಕನ್ನಡ ಚಿತ್ರ ಕೆಂಡ ಸ್ಪರ್ಧೆಗೆ ಒಡ್ಡಿಕೊಂಡಿತ್ತು. ಅಂತಿಮವಾಗಿ ಈ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆರ ಮತ್ತೊಂದು ಗರಿ ಮೂಡಿಸಿರೋದಂತೂ ಸತ್ಯ.

 

ಈ ಫಿಲಂ ಫೆಸ್ಟಿವಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಘನತೆ ಪ್ರತಿಷ್ಠೆಯನ್ನು ಉಳಿಸಿಕೊಂಡಿದೆ. ಇದಕ್ಕೆ ಪ್ರವೇಶ ಪಡೆದುಕೊಳ್ಳೋದೇ ದೊಡ್ಡ ಸಂಗತಿ ಎಂಬಂಥಾ ವಾತಾವರಣವಿಒದೆ. ಹಾಗೊಂದು ವೇಳೆ ಪ್ರವೇಶ ಸಿಕ್ಕರೂ ಕೂಡಾ ಸ್ಪರ್ಧೆಯಲ್ಲಿ ಉಳಿದುಕೊಳ್ಳುವುದು ಸಾಮಾನ್ಯದ ಸಂಗತಿಯಲ್ಲ. ಅದೆಲ್ಲವನ್ನೂ ದಾಟಿಕೊಂಡು ಸದರಿ ಮಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿರೋದೇ ಕೆಂಡದ ಅಸಲೀ ಕಸುವಿಗೊಂದು ಸಾಕ್ಷಿ. ಅದರಲ್ಲಿಯೇ ನಿರ್ದೇಶನದಲ್ಲಿ ಮೊದಲ ಹೆಜ್ಜೆಯಲ್ಲಿಯೇ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಸಹದೇವ್ ಕೆಲವಡಿ ಅಚ್ಚರಿ ಮೂಡಿಸಿದ್ದಾರೆ.

ಹೀಗೆ ಸದ್ದು ಮಾಡುತ್ತಿರುವ ಈ ಚಿತ್ರವನ್ನು ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಇದೇ ಜೂನ್ ತಿಂಗಳಿನಲ್ಲಿ ತೆರೆಗಾಣಲಿದೆ. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಕೆಂಡವನ್ನು ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.

Sahdev Kelavadi wins best debut director award
Share. Facebook Twitter LinkedIn WhatsApp Email

Related Posts

BIG UPDATE: ಬಾಲಿವುಡ್ ನಟ ರಣವೀರ್ ಸಿಂಗ್ ಬ್ಯಾನ್ ಆಗಿಲ್ಲ, ಅದು ‘ನಾನ್-ಕೋಆಪರೇಷನ್’ ಮಾತ್ರ: FWICE ಸ್ಪಷ್ಟನೆ

1 Min Read

ಲವ್ ಸೀಸನ್ಸ್ ಚಿತ್ರದ ‘ಹೊಸದೊಂದು ಪ್ರೀತಿಯಾನ’ ಲಿರಿಕಲ್ ಸಾಂಗ್ ಬಿಡುಗಡೆ!

2 Mins Read

ಪತ್ನಿಯಿಂದ ಡಿವೋರ್ಸ್ ಸಿಗೋವರೆಗೂ ನಾನು ಯಾವುದೇ ಸಿನಿಮಾ ಮಾಡಲ್ಲ: ನಟ ಜಯಂ ರವಿ ಕಣ್ಣೀರು

2 Mins Read
Recent News

ಸಾಗರದ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ.ಆರ್ ನೇಮಿಸಿ ಸರ್ಕಾರ ಆದೇಶ

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’27 ತಹಶೀಲ್ದಾರ್’ಗಳನ್ನು ವರ್ಗಾವಣೆ | Tahashildar Transfer

​ತಾಂತ್ರಿಕ ದೋಷ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅರ್ಧದಾರಿಯಲ್ಲೇ ವಾಪಸ್

ರಾಜ್ಯದ ಶಾಲಾ ವಿದ್ಯಾರ್ಥಿಗಳ ಗಮನಕ್ಕೆ: ಮೇ.29ರಿಂದ ‘KSRTC ಬಸ್ ಪಾಸ್’ಗೆ ಅರ್ಜಿ ಸಲ್ಲಿಕೆ ಆರಂಭ, ಜೂನ್.1ರಿಂದ ವಿತರಣೆ

State News
KARNATAKA

ಸಾಗರದ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ.ಆರ್ ನೇಮಿಸಿ ಸರ್ಕಾರ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಸಾಗರ ತಾಲ್ಲೂಕಿಗೆ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ.ಆರ್ ಅವರನ್ನು…

BREAKING: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ: ’27 ತಹಶೀಲ್ದಾರ್’ಗಳನ್ನು ವರ್ಗಾವಣೆ | Tahashildar Transfer

ರಾಜ್ಯದ ಶಾಲಾ ವಿದ್ಯಾರ್ಥಿಗಳ ಗಮನಕ್ಕೆ: ಮೇ.29ರಿಂದ ‘KSRTC ಬಸ್ ಪಾಸ್’ಗೆ ಅರ್ಜಿ ಸಲ್ಲಿಕೆ ಆರಂಭ, ಜೂನ್.1ರಿಂದ ವಿತರಣೆ

ಸಾಗರದಲ್ಲಿ ಜೂನ್.1ರ ಶಾಲಾ ಆಚರಣೆಗೆ ಭರ್ಜರಿ ಸಿದ್ಧತೆ: ಮಕ್ಕಳ ಶೈಕ್ಷಣಿಕ ಹಕ್ಕಿಗೆ ಚ್ಯುತಿ ಬಂದರೆ ಸಹಿಸಲ್ಲ ಎಂದ ಬಿಇಒ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.