ಶಿವಮೊಗ್ಗ: ಇಂದು ಸಾಗರ ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಯಿತು. ಸದ್ಗುರು ವರ್ಸಸ್ ಸ್ವಾಭಿಮಾನಿ ಶಿಕ್ಷಕರ ತಂಡದ ನಡುವೆ ಜಿದ್ದಾ ಜಿದ್ದಿನ ಕಣದಲ್ಲಿ ಸದ್ಗುರು ತಂಡವು ಜಯಭೇರಿ ಭಾರಿಸಿದೆ. ಚುನಾವಣಾಧಿಕಾರಿಗಳು ನೀಡಿದಂತ ಅಧಿಕೃತ ಮಾಹಿತಿಯ ಅನುಸಾರವಾಗಿ ಮಾಲತೇಶಪ್ಪ ಅವರ ಸದ್ಗುರು ತಂಡದ ಎಲ್ಲಾ ಸದಸ್ಯರು ಚುನಾವಣೆಯಲ್ಲಿ ಜಯಗಳಿಸಿದ್ದರೇ, ದೇವೇಂದ್ರಪ್ಪ ಅವರ ನೇತೃತ್ವದ ಸ್ವಾಭಿಮಾನಿ ಶಿಕ್ಷಕರ ತಂಡವು ಕ್ಲೀನ್ ಸ್ವೀಪ್ ಆಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 12 ಪದಾಧಿಕಾರಿಗಳ ಆಯ್ಕೆಗೆ ಉರ್ದು ಶಾಲೆಯ ಆವರಣದಲ್ಲಿ ಮತದಾನ ನಡೆಯಿತು. ಒಚ್ಚು 584 ಶಿಕ್ಷಕ ಮತದಾರರಲ್ಲಿ ಬರೋಬ್ಬರಿ 534 ಮಂದಿ ಮತದಾನವನ್ನು ಮಾಡಿದ್ದಾರೆ. 8 ಮಂದಿ ಪುರುಷರು, ನಾಲ್ವರು ಮಹಿಳೆಯ ಆಯ್ಕೆಗೆ ನಡೆದಂತ ಚುನಾವಣೆಯಲ್ಲಿ ಎರಡು ತಂಡಗಳಿಂದ 24 ಮಂದಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದರು.
ಇಂದು ನಡೆದಂತ ಮತದಾನದ ಬಳಿಕದ ಮತ ಏಣಿಕೆಯಲ್ಲಿ ಮೊದಲಿನಿಂದಲೂ ಸದ್ಗುರು ಶ್ರೀ ಸದ್ಗುರು ಶಿಕ್ಷಕರ ಬಳಗದ ಪದಾಧಿಕಾರಿಗಳು ಮುಂಚೂಣಿಯನ್ನು ಕಾಯ್ದುಕೊಂಡರೇ, ಸ್ವಾಭಿಮಾನಿ ಶಿಕ್ಷಕರ ಬಳಗದ ಪದಾಧಿಕಾರಿಗಳು ಹಿನ್ನಡೆಯಲ್ಲೇ ಹೋರಾಟವನ್ನು ಮುಂದುವರೆಸಿದ್ದರು.
ಹೀಗಿದೆ ಪುರುಷ ಅಭ್ಯರ್ಥಿಗಳ ಮತಗಳ ವಿವರ
| ಕ್ರ. ಸಂ. | ಅಭ್ಯರ್ಥಿಯ ಹೆಸರು | 1 | 2 | 3 | 4 | 5 | 6 | 7 | 8 | 9 | 10 | 11 | ಒಟ್ಟು ಮತಗಳು |
|---|---|---|---|---|---|---|---|---|---|---|---|---|---|
| 1 | ಆನಂದ ಹೆಚ್.ಇ. | 18 | 18 | 13 | 21 | 25 | 21 | 20 | 22 | 17 | 19 | 9 | 203 |
| 2 | ಚಂದ್ರಪ್ಪ | 25 | 22 | 26 | 30 | 21 | 21 | 22 | 31 | 25 | 21 | 18 | 262 |
| 3 | ದೇವೇಂದ್ರಪ್ಪ ಕೆ. | 22 | 26 | 16 | 23 | 27 | 20 | 25 | 24 | 23 | 31 | 15 | 252 |
| 4 | ದಿನೇಶ ಎಸ್.ಕೆ. | 19 | 22 | 11 | 23 | 25 | 24 | 25 | 22 | 17 | 17 | 12 | 217 |
| 5 | ಗವಿಯಪ್ಪ ಎಲ್.ಟಿ. | 15 | 11 | 15 | 16 | 22 | 15 | 18 | 16 | 15 | 13 | 11 | 177 |
| 6 | ಹಬೀಬುಲ್ಲಾ | 19 | 8 | 10 | 13 | 14 | 9 | 16 | 11 | 9 | 13 | 7 | 129 |
| 7 | ಜಗನ್ನಾಥ ಕೆ. | 24 | 24 | 22 | 25 | 26 | 23 | 21 | 20 | 23 | 26 | 15 | 249 |
| 8 | ಮಹೇಶ ಕೆ.ಬಿ. | 14 | 12 | 11 | 13 | 14 | 8 | 17 | 10 | 11 | 13 | 8 | 131 |
| 9 | ಮಾಲತೇಶಪ್ಪ | 39 | 39 | 38 | 35 | 39 | 41 | 37 | 37 | 42 | 41 | 27 | 415 |
| 10 | ಪ್ರವೀಣ | 28 | 27 | 30 | 30 | 22 | 23 | 21 | 28 | 27 | 29 | 20 | 285 |
| 11 | ರಾಜಪ್ಪ ಎಸ್.ಬಿ. | 32 | 23 | 24 | 24 | 27 | 24 | 24 | 24 | 27 | 25 | 20 | 274 |
| 12 | ರಾಜಪ್ಪ ರಸ್ತೆಪಳ್ಳಿ | 28 | 27 | 31 | 32 | 30 | 34 | 30 | 29 | 34 | 32 | 24 | 331 |
| 13 | ರಮೇಶ ಜೆ. | 29 | 27 | 27 | 30 | 26 | 26 | 30 | 24 | 25 | 25 | 20 | 289 |
| 14 | ಶಂಕರ ಬಿ.ಕೆ. | 26 | 22 | 24 | 23 | 23 | 27 | 28 | 31 | 27 | 25 | 19 | 275 |
| 15 | ಶಿವಪ್ಪ ಕೆ.ಎನ್. | 12 | 17 | 6 | 16 | 14 | 16 | 17 | 10 | 14 | 12 | 9 | 143 |
| 16 | ಸೋಮಪ್ಪ ಹೆಚ್. | 32 | 31 | 34 | 30 | 29 | 31 | 28 | 28 | 36 | 31 | 25 | 335 |
| 17 | ಕುಲಗೆಟ್ಟ ಮತಗಳು | 2 | 3 | 3 | 1 | 1 | 0 | 0 | 2 | 1 | 2 | 0 | 15 |
ಈ ಮೇಲಿನ ಪಟ್ಟಿಯಂತೆ ಮಾಲತೇಶಪ್ಪ ಅವರು 415 ಮತಗಳನ್ನು ಪಡೆದಿದ್ದರೇ, ದೇವೇಂದ್ರಪ್ಪ.ಕೆ ಅವರು 244 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಶ್ರೀ ಸದ್ಗುರು ಶಿಕ್ಷಕರ ತಂಡದ ಮಾಲತೇಶಪ್ಪ ಅಂಡ್ ಟೀಂ ಇಂದಿನ ಸಾಗರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಸಾಗರ ತಾಲ್ಲೂಕು ಶಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಹಿಳಾ ಅಭ್ಯರ್ಥಿಗಳ ಮತಗಳ ವಿವರ ಹೀಗಿದೆ..
- ಚಂದ್ರಕಲಾ ಬಿ.ಆರ್ – 345 ಮತಗಳು
- ಗಾಯತ್ರಮ್ಮ ಬಿ.ಇ – 192 ಮತಗಳು
- ಮುಕ್ತಾ ರಾಮಚಂದ್ರ ಹೆಗಡೆ – 360
- ರಜನಿ.ಬಿ – 114 ಮತಗಳು
- ಶಾರದಾ. ಎ.ಎಸ್ – 243 ಮತಗಳು
- ಶೈಲಜಾ.ಎಂ.ಬಿ – 335 ಮತಗಳು
- ಸೋನಿಯ ರಾಣಿ ನಮೋನ -271
- ವಿಜಯಲಕ್ಷ್ಮಿ- 155 ಮತಗಳು
ಮಹಿಳಾ ಅಭ್ಯರ್ಥಿಗಳ ಆಯ್ಕೆಗಾಗಿ ನಡೆದಂತ ಮತದಾನದಲ್ಲಿ ಐದು ಮತಗಳು ಅಸಿಂಧು ಆಗಿದ್ದಾವೆ. ಇವರಲ್ಲಿ ಚಂದ್ರಕಲಾ ಬಿಆರ್, ಮುಕ್ತಾ ರಾಮಚಂದ್ರ ಹೆಗಡೆ, ಶೈಲಜಾ.ಎಂ.ಬಿ ಹಾಗೂ ಸೋನಿಯ ರಾಣಿ ನಮೋನ ಅವರು ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ ಎಂಬುದಾಗಿ ಚುನಾವಣಾಧಿಕಾರಿ ಎಸ್.ಬಸವರಾಜಪ್ಪ ಘೋಷಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








