ಬೆಂಗಳೂರು: ನೈರುತ್ಯ ರೈಲ್ವೆಯು ( South Western Railway ) ರೈಲು ಸಂಖ್ಯೆ 07385/07386 ವಿಜಯಪುರ – ಕೊಟ್ಟಾಯಮ್ – ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 07387/07388 ಎಸ್.ಎಸ್.ಎಸ್ ಹುಬ್ಬಳ್ಳಿ – ವಿಜಯಪುರ – ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲಗಳನ್ನು ಓಡಿಸಲು ನಿರ್ಧರಿಸಿದೆ.
ಈ ಕುರಿತು ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 11 ಟ್ರಿಪ್ ಗಳಿಗೆ ಮಾತ್ರ ಅನ್ವಯಿಸುವಂತೆ ವಿಜಯಪುರ – ಕೊಟ್ಟಾಯಮ್ ಮತ್ತು ಎಸ್.ಎಸ್.ಎಸ್ ಹುಬ್ಬಳ್ಳಿ – ವಿಜಯಪುರ ನಡುವೆ ವಿಶೇಷ ರೈಲುಗಳ ಸಂಚಾರ ನಡೆಸಲಿದೆ ಎಂದು ತಿಳಿಸಿದೆ.
ಬರಲ್ಲಾ ಅಂದ್ರೂ ವಧುವಿನ ಕೈ-ಕಾಲು ಹಿಡಿದು ಮನೆಗೆ ಹೊತ್ಕೊಂಡೋದ ಅತ್ತೆ ಮನೆಯವ್ರು | WATCH VIDEO
1. ರೈಲು ಸಂಖ್ಯೆ. 07385/07386 ವಿಜಯಪುರ – ಕೊಟ್ಟಾಯಮ್ – ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ (ಹನ್ನೊಂದು ಸೇವೆಗಳು)
ರೈಲು ಸಂಖ್ಯೆ 07385 ವಿಜಯಪುರ – ಕೊಟ್ಟಾಯಮ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ( Vijayapura – Kottayam – Vijayapura Weekly Special Express ) 21 ನವೆಂಬರ್ 2022 ರಿಂದ 30 ಜನವರಿ 2023 ರ ವರೆಗೆ ವಿಜಯಪುರದಿಂದ ಪ್ರತಿ ಸೋಮವಾರದಂದು ರಾತ್ರಿ 11.00 ಗಂಟೆಗೆ ಹೊರಡಲಿದ್ದು, ಮೂರನೇ ದಿನ (ಬುಧವಾರ) ಬೆಳಗಿನ ಜಾವ 02.20 ಗಂಟೆಗೆ ಕೊಟ್ಟಾಯಮ್ ತಲುಪಲಿದೆ.
ಈ ರೈಲು ಬಸವನ ಬಾಗೇವಾಡಿ ರೋಡ (11.36/11.37 PM), ಆಲಮಟ್ಟಿ (11.57/11.58 PM), ಬಾಗಲಕೋಟ (12.50/12.52 AM), ಬಾದಾಮಿ (01.14/01.15 AM), ಹೊಳೆ ಆಲೂರು (01.35/01.36 AM), ಗದಗ (02.55/03.00 AM), ಎಸ್.ಎಸ್.ಎಸ್ ಹುಬ್ಬಳ್ಳಿ (05.00/05.10 AM), ರಾಣಿಬೆನ್ನೂರು (07.07/07.08 AM), ಹರಿಹರ (07.29/07.30 AM), ದಾವಣಗೆರೆ (07.43/07.45 AM), ಬೀರೂರು (09.10/09.12 AM), ಅರಸೀಕೆರೆ (09.35/09.40 AM), ತಿಪಟೂರು (10.26/10.27 AM), ತುಮಕೂರು (11.30/11.32 AM), ಯಲಹಂಕ (01.30/02.00 PM), ಕೃಷ್ಣರಾಜಪುರಂ (02.23/02.25 PM), ಬಂಗಾರಪೇಟ (03.13/03.15 PM), ಸೇಲಂ (05.22/05.25 PM), ಈರೋಡ (06.20/06.25 PM), ತಿರುಪ್ಪೂರ್ (06.58/07.00 PM), ಕೊಯಮತ್ತೂರು (08.07/08.10 PM), ಪಾಲಕ್ಕಾಡ್ (09.35/09.40 PM), ತ್ರಿಶೂರ್ (11.22/11.25 PM) ಮತ್ತು ಎರ್ನಾಕುಲಂ ಟೌನ್ (12.40/12.45 AM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07386 ಕೊಟ್ಟಾಯಮ್ – ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು 23 ನವೆಂಬರ್ 2022 ರಿಂದ 1 ಫೆಬ್ರುವರಿ 2023 ರ ವರೆಗೆ ಕೊಟ್ಟಾಯಮ್ ನಿಲ್ದಾಣದಿಂದ ಪ್ರತಿ ಬುಧವಾರದಂದು ಮಧ್ಯಾಹ್ನ 03.30 ಗಂಟೆಗೆ ಹೊರಡಲಿದ್ದು, ಮರುದಿನ ರಾತ್ರಿ 08:30 ಗಂಟೆಗೆ ವಿಜಯಪುರ ನಿಲ್ದಾಣ ತಲುಪಲಿದೆ.
ಈ ರೈಲು ಎರ್ನಾಕುಲಂ ಟೌನ್ (05.10/05.15 PM), ತ್ರಿಶೂರ್ (06.27/06.30 PM), ಪಾಲಕ್ಕಾಡ್ (09.37/09.40 PM), ಕೊಯಮತ್ತೂರು (11.17/11.20 PM), ತಿರುಪ್ಪೂರ್ (12.03/12.05 AM), ಈರೋಡ್ (12.50/12.55 AM), ಸೇಲಂ (01.47/01.50 AM), ಬಂಗಾರಪೇಟೆ (04.40/04.42 AM), ಕೃಷ್ಣರಾಜಪುರಂ (05.38/05.40 AM), ಯಲಹಂಕ (06.55/07.00 AM), ತುಮಕೂರು (08.10/08.12 AM), ತಿಪಟೂರು (09.34/09.35 AM), ಅರಸೀಕೆರೆ (10.15/10.20 AM), ಬೀರೂರು (11.05/11.07 AM), ದಾವಣಗೆರೆ (12.25/12.27 PM), ಹರಿಹರ (12.39/12.40 PM), ರಾಣಿಬೆನ್ನೂರು (01.00/01.01 PM), ಎಸ್.ಎಸ್.ಎಸ್ ಹುಬ್ಬಳ್ಳಿ (02.50/03.00 PM), ಗದಗ (04.15/04.20 PM), ಹೊಳೆ ಆಲೂರು (05.07/05.08 PM), ಬಾದಾಮಿ (05.27/05.28 PM), ಬಾಗಲಕೋಟ (06.00/06.02 PM), ಆಲಮಟ್ಟಿ (06.42/06.43 PM) ಮತ್ತು ಬಸವನ ಬಾಗೇವಾಡಿ ರೋಡ (07.09/07.10 PM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
BIGG NEWS : ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್ : ನ್ಯಾಯಬೆಲೆ ಅಂಗಡಿಗಳಲ್ಲೇ ಸಿಗಲಿವೆ ಈ ಎಲ್ಲಾ ಸೇವೆಗಳು!
ಈ ವಿಶೇಷ ರೈಲುಗಳು ಒಟ್ಟು ಹದಿನೈದು ಬೋಗಿಗಳನ್ನು ಹೊಂದಿರುತ್ತದೆ, ಒಂದು 2ನೇ ಹವಾನಿಯಂತ್ರಿತ ದರ್ಜೆ, ಎರಡು 3ನೇ ಹವಾನಿಯಂತ್ರಿತ ದರ್ಜೆ, ಹತ್ತು ಸ್ಲೀಪರ್ ಕ್ಲಾಸ್ ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟ್ ಗಳಿಂದ ಕೂಡಿದ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ ಗಳನ್ನು ಒಳಗೊಂಡಿರುತ್ತದೆ.
2. ರೈಲು ಸಂಖ್ಯೆ 07387/07388 ಎಸ್.ಎಸ್.ಎಸ್ ಹುಬ್ಬಳ್ಳಿ – ವಿಜಯಪುರ – ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ (ಹನ್ನೊಂದು ಸೇವೆಗಳು):-
ರೈಲು ಸಂಖ್ಯೆ 07387 ಎಸ್.ಎಸ್.ಎಸ್ ಹುಬ್ಬಳ್ಳಿ – ವಿಜಯಪುರ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು 21 ನವೆಂಬರ್ 2022 ರಿಂದ 30 ಜನವರಿ 2023 ರ ವರೆಗೆ ಎಸ್.ಎಸ್.ಎಸ್ ಹುಬ್ಬಳ್ಳಿಯಿಂದ ಪ್ರತಿ ಸೋಮವಾರದಂದು ಮಧ್ಯಾಹ್ನ 03.00 ಗಂಟೆಗೆ ಹೊರಡಲಿದ್ದು, ಅದೇ ದಿನ ರಾತ್ರಿ 08:30 ಗಂಟೆಗೆ ವಿಜಯಪುರ ತಲುಪಲಿದೆ.
ಈ ರೈಲು ಗದಗ (04.15/04.20 PM), ಹೊಳೆ ಆಲೂರು (05.07/05.08 PM), ಬಾದಾಮಿ (05.27/05.28 PM), ಬಾಗಲಕೋಟ (06.00/06.02 PM), ಆಲಮಟ್ಟಿ (06.42/06.43 PM) ಮತ್ತು ಬಸವನ ಬಾಗೇವಾಡಿ ರೋಡ (07.09/07.10 PM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 07388 ವಿಜಯಪುರ – ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು 24 ನವೆಂಬರ್ 2022 ರಿಂದ 2 ಫೆಬ್ರುವರಿ 2023 ರ ವರೆಗೆ ವಿಜಯಪುರ ನಿಲ್ದಾಣದಿಂದ ಪ್ರತಿ ಗುರುವಾರದಂದು ರಾತ್ರಿ 09.00 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗಿನ ಜಾವ 02:45 ಗಂಟೆಗೆ ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.
ಈ ರೈಲು ಬಸವನ ಬಾಗೇವಾಡಿ ರೋಡ (09.36/09.37 PM), ಆಲಮಟ್ಟಿ (09.56/09.57 PM), ಬಾಗಲಕೋಟ (11.10/11.12 PM), ಬಾದಾಮಿ (11.36/11.37 PM), ಹೊಳೆ ಆಲೂರು (12.04/12.05 AM) ಮತ್ತು ಗದಗ (01.25/01.30 AM) ನಿಲ್ದಾಣಗಳಲ್ಲಿ ನಿಲುಗಡೆ ಇದೆ.
ಈ ವಿಶೇಷ ರೈಲುಗಳ ಸಂಯೋಜನೆಯು ಹತ್ತು ಸ್ಲೀಪರ್ ಬೋಗಿಗಳು ಮತ್ತು ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್ ಮೆಂಟ್ ಗಳಿಂದ ಕೂಡಿದ ಲಗೇಜ್-ಕಮ್-ಬ್ರೇಕ್ ವ್ಯಾನ್ ಗಳನ್ನು ಹೊಂದಿರಲಿದೆ.