ಅಹಮದಾಬಾದ್: ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಒಂದೇ ಓವರ್ನಲ್ಲಿ 7 ಸಿಕ್ಸ್ (Six) ಸಿಡಿಸಿ ಮಹಾರಾಷ್ಟ್ರ (Maharashtra) ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ನೂತನ ದಾಖಲೆ ಬರೆದಿದ್ದಾರೆ.
BREAKING NEWS : ರೌಡಿ ಶೀಟರ್ ‘ಸೈಲೆಂಟ್ ಸುನಿ’ ಪತ್ತೆಗೆ ‘CCB’ ಪೊಲೀಸರ ತೀವ್ರ ಶೋಧ
ಉತ್ತರ ಪ್ರದೇಶ (Uttar Pradesh) ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯಕ್ವಾಡ್ 49ನೇ ಓವರ್ನಲ್ಲಿ 7 ಸಿಕ್ಸ್ ಸಹಿತ 43 ರನ್ ಚಚ್ಚಿದ್ದಾರೆ. 48ನೇ ಓವರ್ನ 4ನೇ ಎಸೆತ ನೋಬಾಲ್ ಎಸೆದ ಕಾರಣ ಫ್ರೀ ಹಿಟ್ ಎಸೆತವನ್ನು ಸಿಕ್ಸ್ ಚಚ್ಚಿದರು. ಬಳಿಕ ಮುಂದಿನ 3 ಎಸೆತಗಳನ್ನು ಸಿಕ್ಸ್ ಸಿಡಿಸಿ ಒಟ್ಟು 43 ರನ್ ಚಚ್ಚಿ ಬಿಸಾಡಿದರು.
6⃣,6⃣,6⃣,6⃣,6⃣nb,6⃣,6⃣
Ruturaj Gaikwad smashes 4⃣3⃣ runs in one over! 🔥🔥
Follow the match ▶️ https://t.co/cIJsS7QVxK…#MAHvUP | #VijayHazareTrophy | #QF2 | @mastercardindia pic.twitter.com/j0CvsWZeES
— BCCI Domestic (@BCCIdomestic) November 28, 2022
ಈ ಹಿಂದೆ ಯುವರಾಜ್ ಸಿಂಗ್ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ತಂಡದ ಸ್ಟುವರ್ಟ್ ಬ್ರಾಡ್ ಅವರ 6 ಎಸೆತಗಳಿಗೆ 6 ಸಿಕ್ಸ್ ಚಚ್ಚಿ ದಾಖಲೆ ಬರೆದಿದ್ದರು. ಇದೀಗ ಗಾಯಕ್ವಾಡ್ 7 ಸಿಕ್ಸ್ ಸಿಡಿಸಿ ನೂತನ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
BREAKING NEWS : ರೌಡಿ ಶೀಟರ್ ‘ಸೈಲೆಂಟ್ ಸುನಿ’ ಪತ್ತೆಗೆ ‘CCB’ ಪೊಲೀಸರ ತೀವ್ರ ಶೋಧ