ಶಿವಮೊಗ್ಗ: ಭಾಗಶಃ ಹಾನಿಯಾದ ಮನೆಯ ಮಾಲೀಕರಿಗೆ 10 ಸಾವಿರ ರೂ. ಹಣ ನೀಡಲಾಗುವುದು, ಸಂಪೂರ್ಣವಾಗಿ ಹಾನಿಯಾಗಿದ್ದರೆ ಮನೆಯವರಿಗೆ 1 ಲಕ್ಷ ರೂ. ಅನ್ನು ತಕ್ಷಣವಾಗಿ ನೀಡಲಾಗುವುದು. ನಂತರ ಅವರಿಗೆ 5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಸಚಿವ ಕೆ.ಸಿ. ನಾರಾಯಣ ಗೌಡ ಅವರು ಹೇಳಿದ್ದಾರೆ. ಅವರು ಇಂದು ಇಂದು ಜಿಲ್ಲಾ ಪ್ರವಾಸ ಕೈಗೊಂಡು ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಇದೇ ವೇಳೇ ಅವರು ಮಾತನಾಡಿ, ಇದೇ ವೇಳೆ ಅವರು ಸಂಪೂರ್ಣ ಬಿದ್ದ ಮನೆಗಳಿಗೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗುವುದು. ಜೊತೆಗೆ ಬೆಳೆಹಾನಿಯ ಬಗ್ಗೆ ಸರ್ವೆ ನಡೆಸಲಾಗುತ್ತದೆ. ಮಳೆ ಇನ್ನೂ ಬರುತ್ತಿದೆ. ಇದರಿಂದ ಸಮೀಕ್ಷೆ ನಡೆಸಿದ ಬಳಿಕ ಪರಿಹಾರ ಒದಗಿಸಲಾಗುವುದು. ಪ್ರತಿ ಜಿಲ್ಲೆಗೆ ಪ್ರವಾಹ ಹಾಗೂ ಪರಿಹಾರಕ್ಕಾಗಿ ಸಿಎಂ ಹಣ ನೀಡಿದ್ದಾರೆ ಎಂದು ಅಂತ ಹೇಳಿದರು.