ಶಿವಮೊಗ್ಗ : ಸ್ಥಳೀಯರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ರಾಯಲ್ ಬಿಲ್ಡರ್ಸ್ ನಿಂದ ಸಾಗರದಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಮಾರಾಟ ಮಳಿಗೆಯನ್ನು ಆರಂಭಿಸಲಾಗುತ್ತಿದೆ. ಅಕ್ಟೋಬರ್.10ರಂದು ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶೋ ರೂಂ ಉದ್ಘಾಟಿಸಲಿದ್ದಾರೆ ಎಂಬುದಾಗಿ ರಾಯಲ್ ಬಿಲ್ಡರ್ಸ್ ನ ಆರ್ ಬಿ ಡಿ ಮಹೇಶ್ ತಿಳಿಸಿದರು.
ಇಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎನ್ನುವ ಉದ್ದೇಶಕ್ಕೆ ಸ್ಥಾಪಿಸಿದ್ದು ರಾಯಲ್ ಬಿಲ್ಡರ್ಸ್ ಸಂಸ್ಥೆಯಾಗಿದೆ. ಇದು ದಶಮಾನೋತ್ಸವ ಪೂರೈಸಿದ್ದು, ಈತನಕ ಸಾಗರ, ಬೆಂಗಳೂರು ಭಾಗದಲ್ಲಿ 200ಕ್ಕೂ ಹೆಚ್ಚು ಯುವಜನರಿಗೆ ನಮ್ಮ ಸಂಸ್ಥೆ ಉದ್ಯೋಗ ನೀಡಿದೆ. ರಾಯಲ್ ಬಿಲ್ಡರ್ಸ್ ಗ್ರೂಪ್ ರಾಜ್ಯದಾದ್ಯಂತ ತನ್ನ ಚಟುವಟಿಕೆ ವಿಸ್ತರಿಸಿಕೊಂಡಿದೆ ಎಂದು ಹೇಳಿದರು.
ಬಡವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ನೀಡಬೇಕು ಎನ್ನುವ ಉದ್ದೇಶದಿಂದ ನಮ್ಮ RBD ಸಂಸ್ಥೆ ಹತ್ತು ವರ್ಷದ ಹಿಂದೆ ಪ್ರಾರಂಭಿಸಲಾಯಿತು. ಈ ಸಂಸ್ಥೆ ವತಿಯಿಂದ ಕಾನೂನುಬದ್ದವಾಗಿ ಭೂಪರಿವರ್ತನೆ ಮಾಡಿ ನಿವೇಶನಗಳನ್ನು ಜನಸಾಮಾನ್ಯರಿಗೂ ಕೈಗೆಟುಕುವ ಬೆಲೆಯಲ್ಲಿ ನೀಡಿದ ಹೆಗ್ಗಳಿಕೆ ಪಾತ್ರವಾಗಿದೆ. ಬೆಂಗಳೂರಿನಲ್ಲಿ ಸಹ ನಮ್ಮ ಶಾಖಾ ಕಚೇರಿ ತೆರೆಯಲಾಗಿದೆ. ಇದೀಗ 1905ರಲ್ಲಿ ಪ್ರಾರಂಭಗೊಂಡಿದ್ದ ರಾಯಲ್ ಎನ್‌ಫಿಲ್ಡ್ ಮೋಟಾರ್ ಬೈಕ್ ಉದ್ಯಮವನ್ನು ಸಾಗರದ ಜೋಗ ರಸ್ತೆಯಲ್ಲಿ ಪ್ರಾರಂಭಿಸುವ ಮೂಲಕ ಇನ್ನಷ್ಟು ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗುತ್ತಿದೆ ಎಂದರು.
ನಮ್ಮ ನೂತನ ಆರ್ ಬಿ ಡಿ ಮೋಟಾರ್ಸ್ ಸಂಸ್ಥೆಯ ರಾಯಲ್ ಎನ್ ಫೀಲ್ಡ್ ಬೈಕ್ ಶೋ ರೂಂ ಅನ್ನು ಅಕ್ಟೋಬರ್ 10ರಂದು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು, ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ನಾವು ಗಳಿಸಿದ್ದರಲ್ಲಿ ಒಂದು ಭಾಗವನ್ನು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದ ಕಾರ್ಯಚಟುವಟಿಕೆಗಳಿಗೆ ನೀಡುತ್ತಾ ಬರುತ್ತಿದ್ದೇವೆ. ನಾವು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದ್ದೇವೆ ಎಂಬ ಹೆಮ್ಮ ನಮಗಿದೆ ಎಂದು ತಿಳಿಸಿದರು.
RBD ಸಂಸ್ಥೆಯ ಇನ್ನೋರ್ವ ಮುಖ್ಯಸ್ಥ ಜಲೀಲ್ ಸಾಗರ್ ಮಾತನಾಡಿ, ರಾಯಲ್ ಬಿಲ್ಡರ್ಸ್ ಗ್ರೂಪ್ ದಶಮಾನೋತ್ಸಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ವಹಿವಾಟಿನ ಜೊತೆಗೆ ಆರ್.ಬಿ.ಡಿ. ಸಹಕಾರಿ ಸಂಸ್ಥೆಯನ್ನು ಮುಂದಿನ ಎರಡು ತಿಂಗಳಿನಲ್ಲಿ ಸ್ಥಾಪಿಸಲಾಗುತ್ತಿದೆ. ಸಹಕಾರಿ ಸಂಸ್ಥೆ ಮೂಲಕ ಜನರಿಗೆ ನಿವೇಶನ ಖರೀದಿ, ಮನೆ ನಿರ್ಮಾಣಕ್ಕೆ ಸಾಲ ಸೌಲಭ್ಯ ಕಲ್ಪಿಸಲಾಗುತ್ತದೆ. ಇದರ ಜೊತೆಗೆ ಸಾರಿಗೆ ಕ್ಷೇತ್ರಕ್ಕೂ ನಮ್ಮ ಸಂಸ್ಥೆ ಪಾದಾರ್ಪಣೆ ಮಾಡುತ್ತಿದೆ. ನಮ್ಮ ಸಂಸ್ಥೆಯ ಶ್ರೇಯೋಭಿವೃದ್ದಿಯಲ್ಲಿ ಸಾಗರದ ಜನರ ಸಹಕಾರವಿದೆ. ನಮ್ಮೂರಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಬೇರೆಬೇರೆ ಯೋಜನೆಯನ್ನು ದಶಮಾನೋತ್ಸವ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಸುದ್ದಿಗೋಷ್ಟಿಯಲ್ಲಿ ರಾಘವೇಂದ್ರ, ಗಣೇಶ್, ಮಂಜುನಾಥ್ ಹಾಜರಿದ್ದರು.
ಹಾಸನಾಂಬ ಜಾತ್ರೆ ಪ್ರಯುಕ್ತ ಹೆಚ್ಚುವರಿ ಬಸ್ ಗಳನ್ನು ನಿಯೋಜನೆ: ಸಚಿವ ರಾಮಲಿಂಗಾರೆಡ್ಡಿ