ಬೆಂಗಳೂರು : ಬಿಬಿಎಂಪಿ ( BBMP ) ಮೀಸಲಾತಿ ಪಟ್ಟಿಯ ಬಗ್ಗೆ ವಿರೋಧವನ್ನು ಕಾಂಗ್ರೆಸ್ ( Congress ) ನ್ಯಾಯಾಲಯದಲ್ಲಿ ಆಕ್ಷೇಪ ಸಲ್ಲಿಸಲು ಅವಕಾಶವಿದೆ. ಇದನ್ನು ಬಿಟ್ಟು ರೌಡಿಸಂ ಮಾಡಿ ವಿಕಾಸಸೌಧಕ್ಕೆ ನುಗ್ಗಿರುವುದು ಎಷ್ಟು ಸರಿ. ಕಾಂಗ್ರೆಸ್ ಸಂಸ್ಕೃತಿಯನ್ನು ಇದು ತೋರಿಸುತ್ತದೆ. ಇದನ್ನು ಎಲ್ಲರೂ ಖಂಡಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ತಿಳಿಸಿದರು.
ಇಂದು ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ಇವರ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಆಯೋಜಿಸಿರುವ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ನ ಸೆಂಟರ್ ಆಫ್ ಎಕ್ಸಲೆನ್ಸ್ ಬಿಲ್ಡಿಂಗ್ ನ ಭೂಮಿ ಪೂಜಾ ಕಾರ್ಯವನ್ನು ನೆರವೇರಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಇಂದು ವಿಕಾಸಸೌಧದಲ್ಲಿ ಪ್ರತಿಭಟನೆ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿ ಮೀಸಲಾತಿಯನ್ನು 2015 ರ ಉಚ್ಛ ನ್ಯಾಯಾಲಯದ ತೀರ್ಪಿನ ಅನ್ವಯ ನಿಯಮಗಳನ್ನು ಅನುಸರಿಸಿ ಮಾಡಲಾಗಿದೆ. ಕಾಂಗ್ರೆಸ್ ಸಹ ಹಿಂದೆ ಇದನ್ನು ಮಾಡಿದ್ದಾಗ ಏನಾಗಿತ್ತು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ. ಎಲ್ಲಾ ಶಾಸಕರ ಕ್ಷೇತ್ರದಲ್ಲಿ ಏನಾಗಿತ್ತು ಎನ್ನುವುದು ಗೊತ್ತೇ ಇದೆ ಎಂದರು.