ಉತ್ತರಪ್ರದೇಶ : ಪಟಾಕಿ ತಯಾರಿಸುವ ಗನ್ ಪೌಡರ್ ಗೆ ಬೆಂಕಿ ತಗುಲಿ ಸ್ಫೋಟ ಸಂಭವಿಸಿದ ಪರಿಣಾಮ ಮನೆಯ ಛಾವಣಿ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದು, ಯುವಕ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ.
ಭಕ್ತರೇ ಗಮನಿಸಿ : ಸೂರ್ಯ ಗ್ರಹಣವಿದ್ದರೂ ನಾಳೆ ಈ ದೇವಸ್ಥಾನಗಳಲ್ಲಿ ದೇವರ ‘ದರ್ಶನ ಭಾಗ್ಯ’ ಲಭ್ಯ
ಸ್ಫೋಟದಿಂದಾಗಿ ಮನೆಯ ಛಾವಣಿ ಕುಸಿದಿದ್ದು, ಪಕ್ಕದಲ್ಲಿದ್ದ ಮತ್ತೊಂದು ಮನೆಗೆ ಹಾನಿಯಾಗಿದೆ. ಇನ್ನು ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಮತ್ತು ಆಡಳಿತಾಧಿಕಾರಿಗಳು ಧಾವಿಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಗಾಯಗೊಂಡ ವ್ಯಕ್ತಿಯನ್ನು ಅವರನ್ನು ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
BIGG NEWS : 28 ವರ್ಷಗಳ ಸುದೀರ್ಘ ಅವಧಿ ಬಳಿಕ ಭರ್ತಿಯಾದ ಬೆಂಗಳೂರಿನ ‘ಹೆಸರಘಟ್ಟ ಕೆರೆ’