ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾಗೆ ಕೋವಿಡ್-19 ನೆಗೆಟಿವ್ ಬಂದಿದೆ.
ಶಿಕ್ಷಕ ಪ್ರಶಸ್ತಿ: ಅರ್ಜಿ ಸಲ್ಲಿಕೆ ಅವಧಿ ಜು.10ರವರೆಗೆ ವಿಸ್ತರಣೆ
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದ ನಂತರ ಜೋಸ್ ಬಟ್ಲರ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಮೂರು ಏಕದಿನ ಮತ್ತು ಮೂರು ಟಿ 20 ಐ ಪಂದ್ಯಗಳನ್ನು ಆಡಲಿದೆ.
BIG NEWS: ವಿಜಯಪುರದಲ್ಲಿ ಕಲುಷಿತ ನೀರು ಕುಡಿದು 70ಕ್ಕೂ ಹೆಚ್ಚು ಜನರು ಅಸ್ವಸ್ಥ, ಆಸ್ಪತ್ರೆಗೆ ದಾಖಲು
ಬರ್ಮಿಂಗ್ಹ್ಯಾಮ್ ಟೆಸ್ಟ್ಗೂ ಮುನ್ನ ರೋಹಿತ್ಗೆ ಕೊರೊನಾವೈರಸ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಭಾರತ ತಂಡದ ನಾಯಕನಿಗೆ ಎರಡು ಬಾರಿ ನೆಗೆಟಿವ್ ವರದಿ ಬಂದಿದ್ದು, ಸೀಮಿತ ಓವರ್ಗಳ ಸರಣಿಗಾಗಿ ತರಬೇತಿಯನ್ನೂ ಆರಂಭಿಸಿದ್ದಾರೆ.
Hello #RohitSharma fans. Good news for you😊 Rohit batted today at Edgbaston nets. #CricketTwitter
— Vimal कुमार (@Vimalwa) July 3, 2022
ಭಾರತ ಇಂಗ್ಲೆಂಡ್ ಪ್ರವಾಸ 2022 ವೇಳಾಪಟ್ಟಿ
1 ಗುರುವಾರ 7 ನೇ ಜುಲೈ 1 ನೇ ಟಿ 20 ಐ ಸೌಥಾಂಪ್ಟನ್
2 ಶನಿವಾರ 9 ನೇ ಜುಲೈ 2 ನೇ ಟಿ 20 ಐ ಬರ್ಮಿಂಗ್ಹ್ಯಾಮ್
3 ಭಾನುವಾರ 10 ನೇ ಜುಲೈ 3 ನೇ ಟಿ 20 ಐ ನಾಟಿಂಗ್ಹ್ಯಾಮ್
4 ಮಂಗಳವಾರ 12 ನೇ ಜುಲೈ 1 ನೇ ಏಕದಿನ ಓವಲ್, ಲಂಡನ್
5 ಗುರುವಾರ 14ನೇ ಜುಲೈ 2ನೇ ಏಕದಿನ ಲಾರ್ಡ್ಸ್, ಲಂಡನ್
6 ಭಾನುವಾರ 17ನೇ ಜುಲೈ 3ನೇ ಏಕದಿನ ಮ್ಯಾಂಚೆಸ್ಟರ್
ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷ್ದೀಪ್ ಸಿಂಗ್, ಉಮ್ರಾನ್ ಮಲಿಕ್
2ನೇ ಮತ್ತು 3ನೇ ಟಿ20 ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್
ಏಕದಿನ ಪಂದ್ಯಕ್ಕೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ಜೆ ಬುಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್