ಬೆಂಗಳೂರು : ರೂಪ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ 5ನೇ ACMM ನ್ಯಾಯಾಲಯದಲ್ಲಿ ಇಂದು ವಿಚಾರಣೆ ನಡೆಯಿತು. ಹಾಗಾಗಿ ಇಂದು ರೋಹಿಣಿ ಸಿಂಧೂರಿಗೆ ಕೋರ್ಟಿಗೆ ಹಾಜರಾಗಿದ್ದರು. ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರಾದ ವಿಜಯಕುಮಾರ್ ಜಾಟ್ಲ ಅವರು ಇಬ್ಬರು ಅಧಿಕಾರಿಗಳಿಗೆ ONE MINUTE APAOLOGY ಪುಸ್ತಕ ಓದುವಂತೆ ಜಡ್ಜ್ ಸಲಹೆ ನೀಡಿದರು.
ಇಂದು ಬೆಂಗಳೂರಿನ 5ನೇ ACMM ಕೋರ್ಟ್ ನಲ್ಲಿ ಸಾಕ್ಷಿ ವಿಚಾರಣೆ ನಡೆಯಿತು. ರೋಹಿಣಿ ಸಿಂಧೂರಿ ಮತ್ತು ರೂಪಾ ಕೋರ್ಟಿಗೆ ಹಾಜರಾಗಿದ್ದಾರೆ. ರೂಪಾ ಪರ ವಕೀಲ ಪ್ರಸನ್ನ ಕುಮಾರ್ ಅವರಿಂದ ಪಾಟೀಸವಾಲು ಹಾಕಿದ್ದು, 45 ನಿಮಿಷಗಳ ಕಾಲ ರೋಹಿಣಿ ಸಿಂಧೂರಿ ಪಾಟೀಸವಾಲು ಹಾಕಿದ್ದಾರೆ.
ಈ ವೇಳೆ ಅಧಿಕಾರಿಗಳಿಗೆ ನ್ಯಾಯಾಧೀಶರು ವಿಜಯಕುಮಾರ್ ಜಾಟ್ಲ ಸಲಹೆ ನೀಡಿದ್ದು. ಇಬ್ಬರು ಉತ್ತಮ ಹೆಸರು ಗಳಿಸಿದ ಹಿರಿಯ ಅಧಿಕಾರಿಗಳಾಗಿದ್ದೀರಿ. ನಿಮ್ಮ ಸಮಯ ಸಮಾಜಕ್ಕಾಗಿ ಮೀಸಲಿಡಬೇಕು. ಕೋರ್ಟ್ ಕಲಾಪದಲ್ಲಿ ಸಮಯ ವ್ಯರ್ಥ ಮಾಡುವ ಬದಲು ರಾಜಿ ಸಾಧ್ಯವೇ ಎನ್ನುವುದನ್ನು ಯೋಚಿಸಿ. ಒನ್ ಮಿನಿಟ್ ಅಪೋಲಜಿ ಪುಸ್ತಕ ಓದಲು ನ್ಯಾಯಾಧೀಶರು ಸಲಹೆ ನೀಡಿದರು.ಇಬ್ಬರೂ ಅಧಿಕಾರಿಗಳಿಗೆ ಜಡ್ಜ್ ವಿಜಯ್ ಕುಮಾರ್ ಜಾಟ್ಲ ಸಲಹೆ ನೀಡಿದರು. ಬಳಿಕ ವಿಚಾರಣೆಯನ್ನು ಫೆಬ್ರುವರಿ 12ಕ್ಕೆ ಮುಂದೂಡಿತು.ಸುಪ್ರೀಂ ಕೋರ್ಟ್ ಕೂಡ ರಜೆಯಾಗಲು ಇಬ್ಬರು ಅಧಿಕಾರಿಗಳಿಗೆ ಸಲಹೆ ನೀಡಿತ್ತು.