ದಕ್ಷಿಣ ಕನ್ನಡ: ಕೇಂದ್ರ ಸರ್ಕಾರದಿಂದ ( Union Government ) ಪಾಪುಲರ್ ಫ್ರಂಟ್ ಆಫ್ ಇಂಡಿಯಾ ( Popular Front of India – PFI) ಸಂಘಟನೆಯನ್ನು ನಿಷೇಧಿಸಲಾಗಿತ್ತು. ಈ ಬಳಿಕ ಸಂಘಟನೆಯನ್ನು ವಿಸರ್ಜನೆಕೂಡ ಗೊಳಿಸಲಾಗಿತ್ತು. ಈ ಬೆನ್ನಲ್ಲೇ ಚಡ್ಡಿಗಳೇ ಎಚ್ಚರ, ಪಿಎಫ್ಐ ನಾವು ಮರಳಿಬರುತ್ತೇವೆ ಎಂಬುದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಸ್ತೆಯೊಂದರ ಮೇಲೆ ಎಚ್ಚರಿಕೆಯನ್ನು ಬರೆಯಲಾಗಿದೆ.
ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ( Dakshina Kannada district ) ಬಂಟ್ವಾಳ ತಾಲೂಕಿನ ಪಿಲಾತಾ ಬೆಟ್ಟ ಗ್ರಾಮದ ಸ್ನೇಹಗಿರಿ ಎಂಬಲ್ಲಿ, ನಿಷೇಧಿತ ಪಿಎಫ್ಐ ಸಂಘಟನೆಯಿಂದ ಬಿಜೆಪಿ ಸರ್ಕಾರದ ವಿರುದ್ಧ ಎಚ್ಚರಿಕೆಯ ಬರಹವನ್ನು ರಸ್ತೆಯ ಮೇಲೆ ಬರೆಯಲಾಗಿದೆ.
ಸ್ನೇಹಗಿರಿ ಗ್ರಾಮದ ರಸ್ತೆಯ ಮೇಲೆ ಚಡ್ಡಿಗಳೇ ಎಚ್ಚರ ಪಿಎಫ್ಐ ನಾವು ಮರಳಿ ಬರುತ್ತೇವೆ ಎಂಬುದಾಗಿ ರಸ್ತೆಯ ಮೇಲೆ ಬರೆದು ಎಚ್ಚರಿಸಲಾಗಿದೆ. ಈ ಮೂಲಕ ಕರಾವಳಿ ಜಿಲ್ಲೆಯ ಜನರು ಬೆಚ್ಚಿ ಬೀಳುವಂತೆ ಮಾಡಿದೆ.
ಇನ್ನೂ ರಸ್ತೆಯ ಮೇಲೆ ಎಚ್ಚರಿಕೆಯ ಬರಹದ ಬಗ್ಗೆ ವಿಶ್ವ ಹಿಂದೂ ಪರಿಷತ್ ನಿಂದ ಕೋಮುಗಲಭೆಯ ಸೃಷ್ಠಿಸೋ ಹುನ್ನಾರ ಈ ಬರವಣಿಗೆಯ ಹಿಂದೆ ಇದೆ. ಈ ಎಚ್ಚರಿಕೆಯ ಬರವಣಿಗೆ ಬಗ್ಗೆ ಕ್ರಮ ಕೈಗೊಳ್ಳಬೇಕು. ರಸ್ತೆಯ ಮೇಲೆ ಬರೆದಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.