ಬ್ರಿಟನ್: ದೇಶದ ಪ್ರಧಾನಿ ಹುದ್ದೆಗೆ ಏರಿದಂತ 6 ತಿಂಗಳಿನಲ್ಲಿಯೇ ತಮ್ಮ ಪ್ರಧಾನಿ ಹುದ್ದೆಗೆ ಲಿಜ್ ಟ್ರಸ್ಟ್ ಅವರು ರಾಜೀನಾಮೆ ನೀಡಿ ಕೆಳಗಿಳಿದಿದ್ದರು. ಇದೀಗ ಬ್ರಿಟನ್ ಪ್ರಧಾನಿ ಹುದ್ದೆಗೆ ಯಾರು ಏರಲಿದ್ದಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಈ ಕುತೂಹಲಕ್ಕೆ ಇಂದು ಸಂಜೆ 6.30ಕ್ಕೆ ತೆರೆ ಬೀಳಲಿದೆ. ಯಾಕೆಂದ್ರೇ ನೂತನ ಪ್ರಧಾನಿಯ ಹೆಸರನ್ನು ಇಂದು ಸಂಜೆ 6.30ಕ್ಕೆ ಘೋಷಣೆ ಮಾಡಲಾಗುತ್ತದೆ.
BREAKING NEWS : ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ದಿನವೇ ದುರಂತ : ಫ್ಲೈಓವರ್ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ಹೌದು.. ಬ್ರಿಟನ್ ಪ್ರಧಾನಿಯಾಗಿದ್ದಂತ ಲಿಜ್ ಟ್ರಸ್ಟ್ ಅವರ ರಾಜೀನಾಮೆಯ ಬಳಿಕ, ನೂತನ ಬ್ರಿಟನ್ ಪ್ರಧಾನಿಯಾರು ಆಗಲಿದ್ದಾರೆ ಎಂಬುದರ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ರಿಷಿ ಸುನಕ್ ಅವರು ಬ್ರಿಟನ್ ನೂತನ ಪ್ರಧಾನಿಯಾಗಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ರಿಷಿ ಸುನಕ್ ಅವರು 180ಕ್ಕೂ ಹೆಚ್ಚು ಸಂಸದರಿಂದ ಬೆಂಬಲವನ್ನು ಹೊಂದಿದ್ದಾರೆ. ಈ ಕುರಿತು ಬ್ರಿಟನ್ ಮಾಧ್ಯಮಗಳು ಸಹ ವರದಿಯನ್ನು ಮಾಡಿವೆ. ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರ ಅಳಿಯ ಆಗಿರುವಂತ ರಿಷಿ ಸುನಕ್, ಬ್ರಿಟನ್ ಪ್ರಧಾನಿ ಹುದ್ದೆಯಾಗುವುದು ಘೋಷಣೆಯೊಂದೆ ಬಾಕಿ. ಆ ಬಗ್ಗೆ ಇಂದು ಸಂಜೆ 6.30ಕ್ಕೆ ಅಧಿಕೃತ ಮಾಹಿತಿ ಹೊರ ಬೀಳಲಿದೆ.
ಅಂಜನೇಯನ ಮೂರ್ತಿ ಮೇಲೆ ಕಾಲಿಟ್ಟು ಪೂಜೆ : ಅದೊಂದು ಸಂಪ್ರದಾಯ ಎಂದು ಮಾಡಿದ್ದೆ,ಕ್ಷಮಿಸಿ ಎಂದ ಅರ್ಚಕ