ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( Karnataka Secondary Education Examination Board ) ಪ್ರಕಟಿಸಿರುವಂತ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ( Karnataka SSLC Main Exam 2023 ) ತಾತ್ಕಾಲಿಕ ವೇಳಾಪಟ್ಟಿಯನ್ನು ಮರು ಪರಿಷ್ಕರಣೆ ಮಾಡುವಂತೆ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ (Karnataka State High School Associate Teachers’ Association ) ಶಿಕ್ಷಣ ಇಲಾಖೆಗೆ ( Education Department ) ಮನವಿ ಮಾಡಿದೆ.
ರಾಜ್ಯದ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಿಗೆ ಮಹತ್ವದ ಮಾಹಿತಿ: ‘ಸಹ-ಪಠ್ಯಚಟುವಟಿಕೆ ಸ್ಪರ್ಧೆ’ಗೆ ವೇಳಾಪಟ್ಟಿ ಪ್ರಕಟ
ಈ ಕುರಿತಂತೆ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರು ಮನವಿ ಪತ್ರವನ್ನು ಸಲ್ಲಿಸಿದೆ. ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ಬಂದ ನಂತ್ರ ಅಕ್ಟೋಬರ್ 3ರಿಂದ 31ರವರೆಗೆ ದಸರಾ ರಜೆ ಹಾಗೂ ಏಪ್ರಿಲ್ 11ರಿಂದ ಮೇ.28ರವರೆಗೆ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದ್ರೇ ಇತ್ತೀಚಿಗೆ ದಸರಾ ರಜೆಯನ್ನು 29 ದಿನಗಳಿಂದ 14 ದಿನಗಳಿಗೆ ಕಡಿತಗೊಳಿಸಲಾಗಿದೆ ಎಂದಿದ್ದಾರೆ.
ಈ ‘ಗೂಗಲ್ ಸೇವೆ’ ಶಾಶ್ವತವಾಗಿ ಬಂದ್ ; ನಿಮ್ಮ ಅಮೂಲ್ಯ ‘ಡೇಟಾ’ ತಕ್ಷಣವೇ ಡೌನ್ಲೋಡ್ ಮಾಡ್ಕೊಳ್ಳಿ
2022-23ರ ಶೈಕ್ಷಣಿಕ ವರ್ಷವನ್ನು ಮೇ.16ರಿಂದಲೇ ಆರಂಭಿಸಲಾಗಿದೆ. ಈಗ ಶಾಲಾ ದಿನಗಳ ಸಂಖ್ಯೆ 260ಕ್ಕೂ ಹೆಚ್ಚಳವಾಗಿದೆ. ಈ ಹಿಂದೆ 230 ಶಾಲಾ ದಿನಗಳಿದ್ದವು. ಶಿಕ್ಷಕರಿಗೆ ಹತ್ತು ಗಳಿಕೆ ರಜೆಗಳನ್ನು ಮಾತ್ರ ನೀಡಲಾಗುತ್ತಿತ್ತು. ಆದ್ರೇ ರಜಾರಹಿತ ಇಲಾಖೆಯವರಿಗೆ 20 ಅರ್ಧ ವೇತನ ರಜೆ, ಮೂವತ್ತು ಗಳಿಕೆ ರಜೆಗಳನ್ನು ನೀಡಲಾಗುತ್ತಿದೆ. ಅಲ್ಲದೇ ಪ್ರೌಢ ಶಾಲಾ ಶಿಕ್ಷಕರು ಏಪ್ರಿಲ್ ತಿಂಗಳಲ್ಲಿ 10ನೇ ತರಗತಿ ಪರೀಕ್ಷೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೆಲಸಗಳಲ್ಲಿ ನಿರತರಾಗಿರುವುದರಿಂದ ಬೇಸಿಗೆ ರಜೆ ಸೌಲಭ್ಯದಿಂದ ವಂಚಿತರಾಗಿರುವುದು ತಾರತಮ್ಯ ವಿಷಯವಾಗಿದೆ ಎಂದು ಹೇಳಿದ್ದಾರೆ.
BIGG NEWS : ಮಾಜಿ ಸಂಸದ ‘ಮುದ್ದ ಹನುಮೇಗೌಡ ‘ನಾಳೆ ಅಧಿಕೃತವಾಗಿ ‘ಬಿಜೆಪಿ’ ಸೇರ್ಪಡೆ
ಈ ಎಲ್ಲಾ ಹಿನ್ನಲೆಯಲ್ಲಿ ವಿವಿಧ ರಜೆಗಳನ್ನು ಕಡಿತಗೊಳಿಸಿರುವ ಕ್ರಮ ಮನೋವೈಜ್ಞಾನಿಕ ಆಧಾರದಲ್ಲಿ ಅವೈಜ್ಞಾನಿಕವಾಗಿದ್ದು, ಶಿಕ್ಷಕರ ಒತ್ತಡರಹಿತ ಕಾರ್ಯನಿರ್ವಹಣೆಗೆ ಅನುಕೂಲ ಮಾಡಿಕೊಡಲು 2023ರ ಎಸ್ ಎಸ್ ಎಲ್ ಸಿ ವಾರ್ಷಿಕ ಮುಖ್ಯ ಪರೀಕ್ಷೆಯನ್ನು ಮಾರ್ಚ್ 30ರೊಳಗೆ ಹಾಗೂ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಏಪ್ರಿಲ್ 15ರೊಳಗೆ ಮುಗಿಯುವಂತೆ ವೇಳಾಪಟ್ಟಿಯನ್ನು ಮರು ಪರಿಷ್ಕರಣೆ ಮಾಡಿಕೊಡಬೇಕೆಂದು ವಿನಂತಿಸಿದ್ದಾರೆ.
BIGG NEWS ; ಈ ‘ಪೋರ್ಟಲ್’ನಲ್ಲಿ ನಿಮ್ಮ ದೂರಿನ ಸ್ಥಿತಿ ಪರಿಶೀಲಿಸಿ, ನಾಳೆ ‘ಪ್ರಧಾನಿ ಮೋದಿ’ ಚಾಲನೆ