ಬೆಂಗಳೂರು: ಈಗಾಗಲೇ ಪಂಚಮ ಸಾಲಿಗೆ 2ಎ ಸ್ಥಾನಮಾನಕ್ಕೆ ಒತ್ತಾಯ ಹೆಚ್ಚಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಮೀಸಲಾತಿಯ ಮಹಾಯುದ್ಧ ಶುರುವಾದಂತೆ ಕಾಣುತ್ತಿದೆ. ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು ಹೆಚ್ಚಳಕ್ಕಾಗಿ ರಾಜ್ಯ ಸರ್ಕಾರಕ್ಕೆ ನಂಜಾವಧೂತ ಸ್ವಾಮೀಜಿ ಡೆಡ್ ಲೈನ್ ಕೂಡ ಕೊಟ್ಟಿದ್ದಾರೆ.

ಇಂದು ಒಕ್ಕಲಿಗ ಸಮುದಾಯ ಮೀಸಲಾತಿ ಹೆಚ್ಚಳ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದಂತ ನಿರ್ಮಲಾನಂದನಾಥ ಶ್ರೀಗಳು, ಜನಸಂಖ್ಯೆ ಪ್ರಮಾಣ ಶೇ.19 ರಿಂದ 20ರಷ್ಟು ಒಕ್ಕಲಿಗ ಸಮುದಾಯವಿದೆ. ಇಷ್ಟು ದೊಡ್ಡ ಸಮುದಾಯಕ್ಕೆ ಕೇವಲ ಶೇ.4ರಷ್ಟು ಮೀಸಲಾತಿಯೇ ಎಂದು ಪ್ರಶ್ನಿಸಿದರು.

ಬೊಮ್ಮಾಯಿ ಅವರೇ, ನಿಮ್ಮವರದ್ದೇ ಈ ಆರೋಪದ ಬಗ್ಗೆ ತನಿಖೆ ಯಾವಾಗ? – ಕಾಂಗ್ರೆಸ್ ಪ್ರಶ್ನೆ

ನಮ್ಮ ಮನವಿಯನ್ನು ರಾಜ್ಯ ಸರ್ಕಾರ ಆದಷ್ಟು ಬೇಗ ಪರಿಗಣಿಸಬೇಕು. ಈ ಸಭೆಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಬಂದಿಲ್ಲ ಅಂದುಕೊಳ್ಳಬೇಡಿ. ಕುಮಾರಸ್ವಾಮಿ ಪಂಚರತ್ನ ರಥಯಾತ್ರೆಯಲ್ಲಿ ಇರೋದರಿಂದ ಬಂದಿಲ್ಲ. ಈಗಾಗಲೇ 3-4 ಬಾರಿ ಕುಮಾರಸ್ವಾಮಿ ಮೀಸಲಾತಿ ಸಂಬಂಧ  ಮಾತನಾಡಿದ್ದಾರೆ ಎಂದರು.

ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದಕ್ಕೆ ಸ್ವಾಗತ. ಶೇ.16ರಷ್ಟು ಜನ ಇರುವಂತ ನಮಗೆ ಶೇ.15ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು. ನಗರ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ ಒಕ್ಕಲಿಗ ಸಮುದಾಯವಾಗಿದೆ. ಜನಸಂಖ್ಯೆ ಆಧಾರದ ಮೇಲೆ ಒಕ್ಕಲಿಗ ಸಮುದಾಯದವರಿಗೆ ಮೀಸಲಾತಿ ನೀಡಿ ಎಂದು ಹೇಳಿದರು.

ಸೂರ್ಯ ಮುದ್ರೆ ಮಾಡುವುದರಿಂದಾಗುವ ಲಾಭಗಳೇನು? ಇದನ್ನು ಮಾಡುವ ಸರಿಯಾದ ವಿಧಾನ ತಿಳಿಯಿರಿ | surya mudra

ಈವರೆಗೆ ನಾವು ಸಹಿಸಿಕೊಂಡು ಬಂದಿದ್ದು ಸಾಕು, ನಮ್ಮ ಸಹಿಸುವೆಕೆಯೇ ದೌರ್ಬಲ್ಯವೆಂದು ತಿಳಿದುಕೊಂಡ್ರೇ ಸಹಿಸೋದಿಲ್ಲ. ಆದಷ್ಟು ಬೇಗ ಒಕ್ಕಲಿಗ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕು. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಎಸ್ ಎಂ ಕೃಷ್ಣ ಅವರು ನಮ್ಮ ಸಮುದಾಯದಕ್ಕೆ ಬಹಳಷ್ಟು ಕೆಲಸ ಮಾಡಿದ್ದಾರೆ. ಅವರಿಗೆ ಸಮುದಾಯದ ಪರವಾಗಿ ಗೌರವಿಸೋ ಸಂಬಂಧ ಜನವರಿ 23ರಂದು ಕಾರ್ಯಕ್ರಮ ನಿಗದಿ ಪಡಿಸಲಾಗಿದೆ. ಅಷ್ಟರೊಳಗೆ ಒಕ್ಕಲಿಗ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಬೇಕು. ಇಲ್ಲದಿದ್ದರೇ ಹೋರಾಟದ ಕಿಟ್ಟು ಹಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಎರಡು ಬೇಡಿಕೆಗಳನ್ನು ಕೇಂದ್ರ, ರಾಜ್ಯ ಸರ್ಕಾರಗಳು ಸೇರಿ ಈಡೇರಿಸಬೇಕು ಎಂಬುದಾಗಿ ಒಕ್ಕಲಿಗರ ಸಮುದಾಯದ ಮೀಸಲಾತಿ ಸಭೆಯಲ್ಲಿ ನಿರ್ಣಯವನ್ನು ನಂಜಾವಧೂತ ಶ್ರೀಗಳು ಮಂಡಿಸಿದರು. ಇದಕ್ಕೆ ಸಮುದಾಯದ ಎಲ್ಲರೂ ಒಕ್ಕೊರಲ ಅಂಗೀಕಾರವನ್ನು ನೀಡಲಾಯಿತು. ಈ ಮೂಲಕ ರಾಜ್ಯ ಸರ್ಕಾರಕ್ಕೆ ಒಕ್ಕಲಿಗ ಸಮುದಾಯದಿಂದ ಮೀಸಲಾತಿ ಹೆಚ್ಚಳದ ಡೆಡ್ ಲೈನ್ ನೀಡಲಾಗಿದೆ. ಚುನಾವಣೆಯ ಹೊತ್ತಲ್ಲೇ ಮತ್ತೊಂದು ಜ್ವಾಲಾಮುಖಿಯನ್ನು ಸ್ಪೋಟಿಸಲಾಗಿದೆ.

ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್: ಟ್ಟಿಟ್ ಮಾಡಿ ಕುಟುಕಿದ ಬಿಜೆಪಿ

Share.
Exit mobile version