ಬೆಂಗಳೂರು: ರಾಜ್ಯದಲ್ಲಿ ಇಂದು ಲೋಕಸಭಾ ಚುನಾವಣೆಗೆ 2ನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಿತು. ಇಂದಿನ ಲೋಕಸಭಾ ಚುನಾವಣೆಯ 2ನೇ ಹಂತದಲ್ಲಿ ಶೇ.69.30ರಷ್ಟು ಮತದಾನವಾಗಿದೆ ಎಂಬುದಾಗಿ ಚುನಾವಣಾ ಆಯೋಗ ಅಧಿಕೃತ ಮಾಹಿತಿ ನೀಡಿದೆ.

ಈ ಕುರಿತಂತೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿರುವಂತ ಚುನಾವಣಾ ಆಯೋಗವು, ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಿತು. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದಂತ ಮತದಾನ ಪ್ರಕ್ರಿಯೆಯಲ್ಲಿ ಶೇ.69.37ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.

ಹೀಗಿದೆ ಜಿಲ್ಲಾವಾರು ಮತದಾನದ ಶೇಕಡಾವಾರು ವಿವರ

  1. ಬಾಗಲಕೋಟೆ – ಶೇ.70.43
  2. ಬೆಳಗಾವಿ- ಶೇ.70.84
  3. ಬಳ್ಳಾರಿ – ಶೇ.69.74
  4. ಬೀದರ್- ಶೇ.63.65
  5. ವಿಜಯಪುರ- ಶೇ.64.71
  6. ಚಿಕ್ಕೋಡಿ- ಶೇ.74.39
  7. ದಾವಣಗೆರೆ – ಶೇ.76.23
  8. ಧಾರವಾಡ – ಶೇ.71.29
  9. ಗುಲ್ಬರ್ಗಾ- ಶೇ.61.73
  10. ಹಾವೇರಿ- ಶೇ.72.59
  11. ಕೊಪ್ಪಳ- ಶೇ.69.87
  12. ರಾಯಚೂರು- ಶೇ.60.72
  13. ಶಿವಮೊಗ್ಗ- ಶೇ.76.05
  14. ಉತ್ತರ ಕನ್ನಡ- ಶೇ.73.52

ಪ್ರಜ್ವಲ್ ‘ಪೆನ್ ಡ್ರೈವ್’ ಕೇಸಲ್ಲಿ ಹಾಸನ ಮಾಜಿ ಶಾಸಕನ ಕೈವಾಡವಿದೆ : ಶಾಸಕ ರವಿಗಣಿಗ ಗಂಭೀರ ಆರೋಪ

Share.
Exit mobile version