ಬೆಂಗಳೂರು: ಸಂವಿಧಾನದ ಆಶಯಗಳಿಗೆ ಕೊಳ್ಳಿ ಇಟ್ಟಿದ್ದೆ ಕಾಂಗ್ರೆಸ್ ಸದನದಲ್ಲಿ ಚರ್ಚೆ ಮಾಡದೆ 40 ಸೆಕೆಂಡ್‌ನಲ್ಲಿ ಇಂದಿರಾ ಗಾಂಧಿ ಕಾನೂನು ರೂಪಿಸಿದ್ದರು. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್. ಸಂವಿಧಾನ ರಚಿಸಿದ ಡಾ. ಅಂಬೇಡ್ಕರ್ ಅವರ ಆಶಯಕ್ಕೆ ವಿರುದ್ಧವಾಗಿ ದೇಶದಲ್ಲಿ ಎರಡೆರಡು ಧ್ವಜ ಹಾರಿಸಿದ್ದು ಕಾಂಗ್ರೆಸ್ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಬಗ್ಗೆ ಸರಣಿ ಟ್ವಿಟ್ ಮಾಡಿದ್ದು, ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿಸಿದ ಕಡತಗಳು ನಾಪತ್ತೆಯಾಗಿವೆ ಎಂಬ ಸಿದ್ಧರಾಮಯ್ಯ ಅವರ ಆರೋಪ ನಿರಾಧಾರ ಮತ್ತು ಸುಳ್ಳು ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆಯಂತೆ ಸಿದ್ದರಾಮಯ್ಯ ವರ್ತಿಸುತ್ತಿರುವುದು ನಾಚಿಗೆಗೇಡಿನ ಸಂಗತಿ ಎಂದು ಕಿಡಿಕಾರಿದೆ.

ಬಿಬಿಎಂಪಿ ಜಾಹೀರಾತು ನೀತಿಗೆ ಸಂಬಂಧಿಸಿದ ಎಲ್ಲ ಕಡತಗಳು (ಮುಖ್ಯ ಕಡತ, ಭಾಗ 1, 3 ಮತ್ತು 4) ನಗರಾಭಿವೃದ್ಧಿ ಇಲಾಖೆಯಲ್ಲಿವೆ. ಕಡತಗಳು ಯಾವುದೇ ಸಚಿವರ ಕಚೇರಿ ಅಥವಾ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಾಣೆಯಾಗಿಲ್ಲ ಅಥವಾ ತಪ್ಪಿಹೋಗಿಲ್ಲ. ಕಾಂಗ್ರೆಸ್ ಜನತೆಯ ಹಾದಿ ತಪ್ಪಿಸಲು ಪ್ರಯತ್ನಿಸಿರುವುದಕ್ಕೆ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.

Share.
Exit mobile version