ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಲ್ಲಿ ಒತ್ತಡ, ಆಹಾರ ಶೈಲಿ, ದಿನಚರಿಗಳಿಂದ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಇಂತಹ ಸಮಸಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.ಇದರಲ್ಲಿ ಉತ್ತಮ ಆಹಾರ, ಯೋಗಾಭ್ಯಾಸ, ವಾಕಿಂಗ್ ಮುಖ್ಯವಾಗಿದೆ.

BIGG NEWS : ಸಿದ್ರಾಮುಲ್ಲಾಖಾನ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಹತ್ಯೆಯಾಗುತ್ತವೆ : ಸಿ.ಟಿ.ರವಿ ವಾಗ್ದಾಳಿ

ಆಯುರ್ವೇದ ಮತ್ತು ಯೋಗವು ಸದೃಢ ಆರೋಗ್ಯಕ್ಕೆ ಹಲವು ಆಸನ ಮತ್ತು ಮುದ್ರೆಗಳ ಬಗ್ಗೆ ಹೇಳುತ್ತದೆ. ಒಂದೊಂದು ಮುದ್ರೆಯು ಒಂದೊಂದು ವೈಶಿಷ್ಟ್ಯತೆ ಹೊಂದಿದೆ. ಒಂದು ಮುದ್ರೆ ಮಾಡಿದ್ರೆ ಹಲವು ಕಾಯಿಲೆಗಳನ್ನು ಹೊಡೆದೋಡಿಸಬಹುದು ಎಂದು ಹೇಳಲಾಗುತ್ತದೆ. ಮುದ್ರೆಗಳು ವಿಭಿನ್ನ ಪ್ರಯೋಜನ ನೀಡುತ್ತವೆ. ಅವುಗಳಲ್ಲಿ ಒಂದು ಸೂರ್ಯ ಮುದ್ರೆ ಆಗಿದೆ.

ಸೂರ್ಯ ಮುದ್ರೆಯ ಪ್ರಯೋಜನಗಳು

ಸೂರ್ಯ ಮುದ್ರೆ ಎಂಬುದು ಒಂದು ಕೈ ಭಂಗಿಯಾಗಿದೆ. ಅದು ಬೆಂಕಿಯ ಅಂಶವನ್ನು ವಿಸ್ತರಿಸಿ ಹೇಳುತ್ತೆ. ಹಾಗೆಯೇ ದೇಹದಿಂದ ಭೂಮಿಯ ಅಂಶ ತೆಗೆದು ಹಾಕುತ್ತದೆ.

ಇದನ್ನು ಅಗ್ನಿ ಮುದ್ರೆ ಎಂದೂ ಸಹ ಕರೆಯುತ್ತಾರೆ. ಸೂರ್ಯ ಮುದ್ರೆಯನ್ನು ಎರಡೂ ಉಂಗುರದ ಬೆರಳು ಮಡಚಿ ಮತ್ತು ಅವುಗಳ ತುದಿಗಳನ್ನು ಹೆಬ್ಬೆರಳಿನ ತಳದಲ್ಲಿ ಇರಿಸುವ ಮೂಲಕ ಭಂಗಿ ಹಾಕಲಾಗುತ್ತದೆ.

ಉಂಗುರದ ಬೆರಳಿನ ಮೇಲ್ಭಾಗದಲ್ಲಿ ಹೆಬ್ಬೆರಳಿನ ಸ್ವಲ್ಪ ಒತ್ತಡ ಬಿದ್ದಾಗ ಇದು ಬೆಂಕಿಯ ಅಂಶದಿಂದ ಭೂಮಿಯ ಅಂಶದ ವಿನಾಶ ಸೂಚನೆ ನೀಡುತ್ತದೆ. ಸೂರ್ಯ ಮುದ್ರೆ ಭಂಗಿ ಮಾಡುವ ಜನರು ಅನೇಕ ಆರೋಗ್ಯ ಪ್ರಯೋಜನ ಪಡೆಯಬಹುದು.

ಸೂರ್ಯ ಮುದ್ರೆ ಮಾಡುವ ವಿಧಾನ 

ಮೊದಲು ನೆಲಕ್ಕೆ ಚಾಪೆ ಹಾಕಿ, ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ಕೈಗಳನ್ನು ನಿಮ್ಮ ತೊಡೆಗಳು ಅಥವಾ ಮೊಣಕಾಲುಗಳ ಮೇಲೆ ಇರಿಸಿ. ಅಂಗೈಗಳನ್ನು ಮೇಲಕ್ಕೆ ತಿರುಗಿಸಿ. ಕಣ್ಣುಗಳನ್ನು ಮುಚ್ಚಿ ಮತ್ತು ಒಂದೆರಡು ಬಾರಿ ಆಳವಾಗಿ ಉಸಿರಾಡಿ.

ನಂತರ ಉಂಗುರದ ಬೆರಳನ್ನು ಬಗ್ಗಿಸಿ ಮತ್ತು ಅದನ್ನು ನಿಮ್ಮ ಹೆಬ್ಬೆರಳಿನಿಂದ ಒತ್ತಿ ಹಿಡಿಯಲು ಪ್ರಯತ್ನಿಸಿ. ಹೊಸಬರು ಮುದ್ರೆ ಮಾಡುವಾಗ ಅಸ್ವಸ್ಥತೆ ಅಥವಾ ನೋವು ಉಂಟಾಗುತ್ತದೆ. ಹಾಗಾಗಿ ನೀವು ಉಂಗುರದ ಬೆರಳನ್ನು ಅದರ ತುದಿಯು ನಿಮ್ಮ ಹೆಬ್ಬೆರಳಿನ ಮೂಲ ಸ್ಪರ್ಶಿಸುವ ರೀತಿಯಲ್ಲಿ ಇರಿಸಿ. ಉಳಿದ ಮೂರು ಬೆರಳುಗಳನ್ನು ಹರಡಿ.

ಉಂಗುರದ ಬೆರಳಿಗೆ ಸಹನೀಯ ಒತ್ತಡ ಅನ್ವಯಿಸಲು ನಿಮ್ಮ ಹೆಬ್ಬೆರಳು ಬಳಸಿ. ನೀವು ಹೆಚ್ಚು ನಿಗ್ರಹಿಸಿದಷ್ಟೂ ನಿಮಗೆ ಪ್ರಯೋಜನ ಸಿಗತ್ತದೆ. ಅದನ್ನು ಅತಿಯಾಗಿ ಮಾಡಬೇಡಿ. ಅದೇ ಪ್ರಕ್ರಿಯೆಯನ್ನು ಇನ್ನೊಂದು ಬದಿಯಲ್ಲಿಯೂ ಪುನರಾವರ್ತಿಸಿ.

ಸೂರ್ಯ ಮುದ್ರೆ ಮಾಡುವಾಗ ಈ ವಿಷಯ ನೆನಪಿಡಿ

ಈ ಮುದ್ರೆಯನ್ನು ಪ್ರತಿದಿನ ಸುಮಾರು 30 ರಿಂದ 45 ನಿಮಿಷ ಅಭ್ಯಾಸ ಮಾಡಲು ಹೇಳಲಾಗುತ್ತದೆ. ನೀವು ಒಂದೇ ಬಾರಿಗೆ ಅಥವಾ 10 ರಿಂದ 15 ನಿಮಿಷದಂತೆ ದಿನಕ್ಕೆ ಮೂರು ಬಾರಿ ಮಾಡಿ.

ಸೂರ್ಯ ಮುದ್ರೆ ಭಂಗಿಯನ್ನು ನಿಯಮಿತವಾಗಿ ಮಾಡಿದರೆ ತೂಕ ಇಳಿಕೆಗೆ ಸಹಕಾರಿ. ಮಧುಮೇಹ ನಿಯಂತ್ರಿಸಬಹುದು. ಥೈರಾಯ್ಡ್ ಕಾರ್ಯ ಸುಧಾರಿಸುತ್ತದೆ. ಚಯಾಪಚಯ, ಮಲಬದ್ಧತೆ, ಪಿಸಿಓಎಸ್, ಕೆಮ್ಮು ಮತ್ತು ಶೀತ, ಉಬ್ಬುವುದು ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆ ನಿವಾರಿಸಲು ಸೂರ್ಯ ಮುದ್ರೆ ಸಾಕಷ್ಟು ಸಹಾಯ ಮಾಡುತ್ತದೆ

ಈ ಭಂಗಿಯನ್ನು ಮಾಡಿದ್ರೆ ಏಕಾಗ್ರತೆ, ಆತ್ಮವಿಶ್ವಾಸ ಮತ್ತು ಮಾನಸಿಕ ಸ್ಥಿರತೆ ಕೂಡ ಸುಧಾರಿಸುತ್ತದೆ. ಸೂರ್ಯ ಮುದ್ರೆ ಭಂಗಿ ಆತಂಕ ಮತ್ತು ಖಿನ್ನತೆ ಕಡಿಮೆ ಮಾಡುತ್ತದೆ.

BIG NEWS: ʻಜಿ-20 ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಕ್ಕ ದೊಡ್ಡ ಅವಕಾಶʼ: ʻಮನ್ ಕಿ ಬಾತ್‌ʼನಲ್ಲಿ ಪ್ರಧಾನಿ ಮೋದಿ ಮಾತು

Share.
Exit mobile version