ಬೆಂಗಳೂರು: ಮಲ್ಲಿಕಾರ್ಜು ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಗೆ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ.
ಈ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ ಸಿ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವ ಬಿಜೆಪಿ ನಡೆ ಕೇವಲ ಕಣ್ಣೊರೆಸುವ ಕೆಲಸ ಮಾಡುತ್ತಿದೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನ್ಯಾ. ನಾಗಮೋನ್ ದಾಸ್ ಕಮಿಷನ್ ಮಾಡಿದ್ದು ಯಾರು ? ನಮ್ಮ ಸರ್ಕಾರ. ಅವರು ವರದಿ ಕೊಟ್ಟ ಮೇಲೆ ಎಷ್ಟು ದಿನ ಪೆಂಡಿಂಗ್ ಇತ್ತು? ಸ್ವಾಮೀಜಿ 250 ದಿನ ಪ್ರತಿಭಟನೆ ಯಾಕೆ ಮಾಡಿದ್ರು? ಎಂದು ಪ್ರಶ್ನೆ ಮಾಡಿದ್ದಾರೆ. ನಾವು 3-4 ಬಾರಿ ಸದನದ ಬಾವಿಗಿಳಿದು ನಮ್ಮ ಶಾಸಕರು ಧರಣಿ ಮಾಡಿದ ಮೇಲೆ ಅತ್ತು ಕರೆದು ಈಗ ಮಾಡಿದ್ದಾರೆ ಎಂದರು.