ಮಂಡ್ಯ : ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯ ನಮ್ಮನ್ನು ಒಂದು ಕಡೆ ಸೇರಿಸಿ ಸ್ನೇಹ-ಸೌಹಾರ್ದತೆಯಿಂದ ಬಾಳಲು ಸಹಕಾರಿಯಾಗುವುದಲ್ಲ ಮುಂದಿನ ತಲೆಮಾರಿಗೆ ಆಚರಣೆಗಳು ಪರಿಚಯ ಮತ್ತು ಅನುಸರಣೆಗೆ ಸಹಕಾರಿಯಾಗಲಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಆತಗೂರು ಹೋಬಳಿ ನಿಡಘಟ್ಟ ಗ್ರಾಮದಲ್ಲಿ ಗುರುವಾರ ಶ್ರೀ ಛಾಯಾದೇವಿ ಮತ್ತು ಶ್ರೀ ಶನೇಶ್ವರಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ಛಾಯಾದೇವಿ ಮತ್ತು ಶ್ರೀ ಶನೇಶ್ವರಸ್ವಾಮಿ ದೇವಾಲಯದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲದೆ, ದೈವಿಕ ಶಕ್ತಿ, ಸನಾತನ ಸಂಸ್ಕೃತಿ, ಮತ್ತು ವಾಸ್ತುಶಿಲ್ಪದ ಕೇಂದ್ರಗಳಾಗಿವೆ. ಭಕ್ತರಿಗೆ ಮಾನಸಿಕ ಶಾಂತಿ, ಆಧ್ಯಾತ್ಮಿಕ ಜ್ಞಾನ, ಮತ್ತು ಧನಾತ್ಮಕ ಶಕ್ತಿಯನ್ನು ನೀಡುವುದರೊಂದಿಗೆ, ಸಮಾಜದಲ್ಲಿ ಧರ್ಮ, ಶಿಸ್ತು, ಮತ್ತು ಒಗ್ಗಟ್ಟನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ಇತಿಹಾಸ, ಕಲೆ ಮತ್ತು ಧಾರ್ಮಿಕ ಪರಂಪರೆಯ ಸಂಕೇತಗಳಾಗಿವೆ ಎಂದರು.
ದೇಗುಲದ ಪ್ರಧಾನ ಅರ್ಚಕ ದೊರೆಸ್ವಾಮಿ ಅವರು ಸುಮಾರು ಎರಡುವರೆ ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಲು ಮುಂದಾಗಿರುವುದು ಪ್ರಶಂಸನೀಯ ಸಂಗತಿಯಾಗಿದ್ದು, ದೇಗುಲ ನಿರ್ಮಾಣಕ್ಕೆ ಭಕ್ತಾಧಿಗಳು, ದಾನಿಗಳು ಅಗತ್ಯ ಸಹಕಾರ ನೀಡಬೇಕು. ನಾನು ಕೂಡ ದೇಗುಲ ನಿರ್ಮಾಣಕ್ಕೆ ಸಹಾಯ ಮಾಡುತ್ತೆನೆಂದು ವಿಶ್ವಾಸ ವ್ಯಕ್ತಪಡಿಸಿದರು.

ದೇವಾಲಯಗಳಲ್ಲಿ ಹಬ್ಬಗಳು, ಉತ್ಸವಗಳು ಮತ್ತು ಧಾರ್ಮಿಕ ಸಮಾರಂಭಗಳ ಮೂಲಕ ಜನರನ್ನು ಒಂದುಗೂಡಿಸಿ ಸಮಾಜದಲ್ಲಿ ಭಕ್ತಿ ಮತ್ತು ಸಹಬಾಳ್ವೆ ಉತ್ತೇಜಿಸುವ ಕೇಂದ್ರಗಳಾಗಿವೆ ಎಂದರು.
ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ದೇಗುಲದ ಆವರಣದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು ಹಾಗೂ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ದೇಗುಲದ ಪ್ರಧಾನ ಅರ್ಚಕ ದೊರೆಸ್ವಾಮಿ, ಸಣ್ಣ ಕೈಗಾರಿಕಾಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್, ಮನ್ಮುಲ್ ಮಾಜಿ ಅಧ್ಯಕ್ಷ ಕದಲೂರು ರಾಮಕೃಷ್ಣ, ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಎ.ನಾರಾಯಣಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಎನ್.ಎಂ.ಪ್ರಕಾಶ್, ಮುಖಂಡರಾದ ಚಿಕ್ಕಣ್ಣ, ಮಹದೇವಯ್ಯ, ಕೆ.ಎಂ.ರವಿ, ಪುಟ್ಟಣ್ಣ, ಕುಮಾರ್, ಆನಂದ್ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಕರ್ನಾಟಕ SSLC ಪರೀಕ್ಷೆ ಫಲಿತಾಂಶ: ಇವರೇ ನೋಡಿ ರಾಜ್ಯಕ್ಕೆ ಟಾಪರ್ ಆದ ವಿದ್ಯಾರ್ಥಿಗಳು








