ಬೆಂಗಳೂರು : ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಶಂಕಿತನ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಮತ್ತು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಶಂಕಿತ ಬೆಂಗಳೂರಿನಿಂದ ತುಮಕೂರು, ಬಳ್ಳಾರಿ, ಕಲಬುರಗಿವರೆಗೆ ತೆರಳಿರುವ ಮಾಹಿತಿ ಸಿಕ್ಕಿದೆ. ಕಲಬುರಗಿಯಿಂದ ಆತ ಎಲ್ಲಿಗೆ ಹೋಗಿದ್ದಾನೆ ಎಂಬುದು ನಿಗೂಢವಾಗಿದೆ. ಈ ಹಿನ್ನೆಲೆಯಲ್ಲಿ ತನಿಖಾ ತಂಡಗಳು ಕಲಬುರಗಿ ಹಾಗೂ ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ಶಂಕಿತನಿಗಾಗಿ ಶೋಧ ನಡೆಸುತ್ತಿವೆ.
5, 8, 9ನೇತರಗತಿ ಮಕ್ಕಳಿಗೆ ಇಂದಿನಿಂದ ‘ಬೋರ್ಡ್ ಪರೀಕ್ಷೆ’ :69137 ಶಾಲೆಗಳ 28.14 ಲಕ್ಷ ವಿದ್ಯಾರ್ಥಿಗಳು ಭಾಗಿ
ಶಂಕಿತ ಬಳ್ಳಾರಿಯಲ್ಲಿ ಕಲಬುರಗಿ ಬಸ್ ಹತ್ತಿರುವ ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ. ಆದರೆ ಕಲಬುರಗಿ ಬಸ್ ನಿಲ್ದಾಣದಲ್ಲಿ ಬಸ್ ಇಳಿದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಆತ ಬಳ್ಳಾರಿ-ಕಲಬುರಗಿ ಮಾರ್ಗ ಮಧ್ಯೆಯೇ ಇಳಿದು ಹೈದರಾಬಾದ್ ಕಡೆಗೆ ಪರಾರಿಯಾಗಿರುವಶಂಕೆ ವ್ಯಕ್ತವಾಗಿದೆ. ಹೀಗಾಗಿ ತನಿಖಾ ತಂಡವೊಂದು ಹೈದರಾಬಾದ್‌ನಲ್ಲಿ ಶಂಕಿತನ ಪತ್ತೆಗೆ ಶೋಧ ಕಾರ್ಯ ತೀವ್ರಗೊಳಿಸಿದೆ.
‘ಶಿವಮೊಗ್ಗ’ದಲ್ಲೇ ಮನೆ ಮಾಡಿದ್ದೀನಿ, ಅಲ್ಲೇ ಇರ್ತೀನಿ: ‘ಗೆಲ್ಲುವ ಭರವಸೆ’ ಇದೆ- ಗೀತಾ ಶಿವರಾಜ್ ಕುಮಾರ್
ನಾಲ್ಕು ಶಾಖೆಗಳಸಿಸಿಟಿವಿ ದೃಶ್ಯಾವಳಿ ಸಂಗ್ರಹ:ಈಗಾಗಲೇ ಎನ್‌ಐಎ ಅಧಿಕಾರಿಗಳು ಕುಂದಲಹಳ್ಳಿಯ ದಿ ರಾಮೇಶ್ವರಂ ಕೆಫೆಯ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಆದರೆ, ಶಂಕಿತ ಬಾಂಬ್ ಸ್ಫೋಟಕ್ಕೆ ಇದೇ ಕೆಫೆಯನ್ನು ಏಕೆ ಆಯ್ಕೆ ಮಾಡಿಕೊಂಡ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ರಾಮೇಶ್ವರಂ ಕೆಫೆಯ ನಾಲ್ಕು ಶಾಖೆಗ ಳಿವೆ. ಬಾಂಬ್ ಸ್ಫೋಟಗೊಂಡ ಕುಂದಲಹಳ್ಳಿ ಸೇರಿದಂತೆ ಇಂದಿರಾನಗರ, ಜೆ.ಪಿ.ನಗರ, ರಾಜಾಜಿನಗರದಲ್ಲಿ ಈ ಶಾಖೆಗಳಿವೆ.
ಸಂವಿಧಾನವನ್ನು ಸುಟ್ಟ ಪೆರಿಯಾರ್‌ರನ್ನು ಪೂಜಿಸುವ ಕಾಂಗ್ರೆಸ್‌ಗೆ ಆ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ – ಬಿಜೆಪಿ
ಶಂಕಿತ ಕುಂದಲಹಳ್ಳಿಯ ಹೊರತುಪಡಿಸಿ ಉಳಿದ ಮೂರು ಶಾಖೆಗಳಿಗೂ ಭೇಟಿ ನೀಡಿರುವ ಶಂಕೆ ಹಿನ್ನೆಲೆಯಲ್ಲಿಎನ್‌ಐಎ ಅಧಿಕಾರಿಗಳು ಮಾ.1ರ ಹಿಂದಿನ 20 ದಿನಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ.ಪೂರ್ವ ನಿಯೋಜಿತ ಕೃತ್ಯ: ಶಂಕಿತ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಮುನ್ನ ಆ ಹೋಟೆಲ್ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಹೋಟೆಲ್ ನಲ್ಲಿ ಎಲ್ಲಿ ಬಾಂಬ್ ಇರಿಸಬೇಕು? ಸ್ಫೋಟಕ್ಕೂ ಮುನ್ನ ಹೇಗೆ ಎಸ್ಕೆಪ್ ಆಗಬೇಕು? ಎಲ್ಲಿಂದ ಎಲ್ಲಿಗೆ ತೆರಳಬೇಕು? ಪೊಲೀಸರ ಕಣ್ಣು ತಪ್ಪಿಸಲು ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಯೋಜನೆ ರೂಪಿಸಿ ತನ್ನ ಕೆಲಸವನ್ನು ಕಾರ್ಯಗತಗೊಳಿಸಿದ್ದಾನೆ.