ದಾವಣಗೆರೆ: ಮುಂದಿನ ವರ್ಷ ಅಂದರೆ 2024ರ ಸಂಕ್ರಾಂತಿ ವೇಳೆಗೆ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಆಗಲಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.
BIGG NEWS: ದಾವಣಗೆರೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟ; ಮಗ ಸಾವು, ತಾಯಿಗೆ ಗಂಭೀರ ಗಾಯ
ನಗರದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಿದೆ. ಈಗಾಗಲೇ ಪ್ರಧಾನ ಮಂತ್ರಿಗಳ ಆಶಯದಂತೆ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಸಂಶೋಧನೆ ಮಾಡುತ್ತಿದ್ದಾರೆ. ರಾಮನವಮಿ ದಿನ ಅಯೋಧ್ಯೆಯ ರಾಮ ಮಂದಿರ ಶ್ರೀರಾಮನ ಮೂರ್ತಿಯ ಮೇಲೆ ತಿಲಕದ ರೀತಿಯಲ್ಲಿ ಸೂರ್ಯನ ಕಿರಣಗಳು ಬಿಳುವಂತೆ ಮಂದಿರ ನಿರ್ಮಾಣದ ಕೆಲಸ ನಡೆಯುತ್ತಿದೆ ಎಂದರು.
BIGG NEWS: ದಾವಣಗೆರೆಯಲ್ಲಿ ಅಡುಗೆ ಮಾಡುವ ವೇಳೆ ಸಿಲಿಂಡರ್ ಸ್ಫೋಟ; ಮಗ ಸಾವು, ತಾಯಿಗೆ ಗಂಭೀರ ಗಾಯ
ಇನ್ನು ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಿದರೆ ಒಳ್ಳೆಯದು. ಗೀತೆಯಲ್ಲಿ ಕೃಷ್ಣ ಬೋಧನೆ ಮಾಡಿದ ತತ್ವಗಳ ಅಗತ್ಯ ಇಂದು ಹೆಚ್ಚಾಗಿದೆ. ಇದೇ ಕಾರಣಕ್ಕೆ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು ಎಂದು ವಿಶ್ವಪ್ರಸನ್ನ ತೀರ್ಥಶ್ರೀ ಹೇಳಿದರು.