ಕಲಬುರಗಿ: ಅಕ್ರಮ ನಾಡಪಿಸ್ತೂಲ್ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ಬಲಗೈ ಬಂಟ, ಬೆಂಬಲಿಗ ರಾಜು ಕಪನೂರ್ ( Raju Kapanoor) ನನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ಕಲಬುರಗಿ ಜಿಲ್ಲೆಯ ಜೇವರ್ಗಿಯ ಜೆಎಂಎಫ್ ಸಿ ಕೋರ್ಟ್ ರಾಜು ಕಪನೂರ್ ( Raju Kapanoor) ನನ್ನು 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.

ಏನಿದು ಘಟನೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸರು ರಾಜು ಕಪನೂರ್ ಬಂಧಿಸಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಗುರಲಿಂಗಪ್ಪ ಎಂಬುವರಿಂದ ಕಪನೂರ್, ಎರಡು ಕಂಟ್ರಿಮೇಡ್ ಗನ್ ಮತ್ತು 30 ಗುಂಡು ಖರೀದಿಸಿದ್ದನು . ಈ ವಿಚಾರದಲ್ಲಿ ರಾಜು ಕಪನೂರ್ ಹೆಸರು ಕೇಳಿಬಂದ ಹಿನ್ನೆಲೆ ಪೊಲೀಸರು ಎರಡು ನೋಟಿಸ್ ನೀಡಿದ್ದರು, ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ರಾಜು ಕಪನೂರ್ ಸುಮ್ಮನಾಗಿದ್ದನು.ಗ ರಾಜು ಕಪನೂರ್ನನ್ನು ಪೊಲೀಸರು ಬಂಧಿಸಿದ್ದರು.

ಅಲ್ಲದೇ ಮಣಿಕಂಠ ರಾಠೋಡ್ ತಮ್ಮ ಮೇಲೆ ಪ್ರಿಯಾಂಕ್ ಖರ್ಗೆ ಮತ್ತು ಬೆಂಬಲಿಗರಿಂದ ಕೊಲೆ ಪ್ರಯತ್ನ ನಡೆದಿದೆ, ತನ್ನನ್ನು ಕೊಲೆ ಮಾಡೋದಕ್ಕೆ ರಾಜು ಕಪನೂರ್ ಗನ್ ಕೊಂಡುಕೊಂಡಿದ್ದ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು, ಈ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಬಲಗೈ ಬಂಟ, ಬೆಂಬಲಿಗ ರಾಜು ಕಪನೂರ್ ಪೊಲೀಸರ ಅತಿಥಿಯಾಗಿದ್ದರು.

BIG NEWS: IAS ಅಧಿಕಾರಿ ರೋಹಿಣಿ ಸಿಂಧೂರಿ ಪತಿಯ ಲ್ಯಾಂಡ್ ಮಾಫಿಯಾ ಬಗ್ಗೆ ತನಿಖೆ ನಡೆಸಿ – ಕಾಂಗ್ರೆಸ್ ಒತ್ತಾಯ

ರಾಜ್ಯದ ಶಾಲಾ ಮಕ್ಕಳಿಗೆ ಬಹುಮುಖ್ಯ ಮಾಹಿತಿ: ಹೀಗಿದೆ 2022-23ನೇ ಸಾಲಿನ ‘ಬಾನ್ ದನಿ ರೇಡಿಯೋ ಪಾಠ’ ಪ್ರಸಾರ ವೇಳಾಪಟ್ಟಿ

Share.
Exit mobile version