ಬೆಂಗಳೂರು: ಬಸವರಾಜ ಬೊಮ್ಮಾಯಿ ( Basavaraj Bommai ) ಅವರೇ, ನಿಮ್ಮ ಸರ್ಕಾರದಲ್ಲಿ ಅಧಿಕಾರಿಗಳು ಲ್ಯಾಂಡ್ ಮಾಫಿಯಾದವರಿಗೆ ( Land Mafia ) ಬೆಂಬಲವಾಗಿದ್ದಾರೆಯೇ? IAS ಅಧಿಕಾರಿ ರೋಹಿಣಿ ಸಿಂಧೂರಿ ( IAS Officer Rohini Sindhuri ) ಅವರು ತಮ್ಮ ಪತಿಯ ಅನೈತಿಕ ಕೆಲಸಗಳಿಗೆ ಸಹಕರಿಸುತ್ತಿರುವುದನ್ನು ತನಿಖೆಗೆ ಒಳಪಡಿಸಿ. ಡಿಜಿಪಿ ಅವರೇ, ತಮ್ಮ ಇಲಾಖೆ ಕಾನೂನು ಪಾಲಿಸುತ್ತಿದೆಯೋ? ಅಥವಾ ಮಾಫಿಯಾವನ್ನು ಪಾಲನೆ ಮಾಡುತ್ತಿದೆಯೋ? ಎಂದು ಕರ್ನಾಟಕ ಕಾಂಗ್ರೆಸ್ ( Karnataka Congress ) ಪ್ರಶ್ನಿಸಿದೆ.

ಈ ಬಗ್ಗೆ ಟ್ವಿಟ್ ಮಾಡಿದ್ದು, IAS ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಪತಿಯ ಕೋಟ್ಯಂತರ ಮೌಲ್ಯದ ಆಸ್ತಿ ಕಬಳಿಕೆಯ ಕೆಲಸಗಳಿಗೆ ಸಹಕರಿಸುತ್ತಿರುವ ಆರೋಪ ಕೇಳಿ ಬಂದಿದೆ. ಬೊಮ್ಮಾಯಿ ಅವರೇ, ತಮ್ಮ ಸರ್ಕಾರ ರೌಡಿಸಂ, ಲ್ಯಾಂಡ್ ಮಾಫಿಯಾ, 40% ಕಮಿಷನ್‌ಗಳಲ್ಲೇ ಮುಳುಗಿದ್ದರೂ ಯಾವೊಂದು ಸಂಗತಿಯೂ ತಮ್ಮ ಗಮನಕ್ಕೆ ಬರಲಿಲ್ಲವೇ? ಅಥವಾ ಎಲ್ಲವೂ ನಿಮ್ಮ ಅಣತಿಯಲ್ಲೇ ನಡೆಯುತ್ತಿದೆಯೇ? ಎಂದು ಕೇಳಿದೆ.

ವಿಶ್ವ ಅಂಗವಿಕಲರ ದಿನಾಚರಣೆಗೆ ಕಾಟಾಚಾರಕ್ಕೆ ಭೇಟಿ ಕೊಟ್ಟು ತೆರಳಿದ ಸಿಎಂ ಹಾಗೂ ಸಚಿವರಿಗೆ ಕನಿಷ್ಠ ಮಾನವೀಯತೆ ಇಲ್ಲದಾಗಿದೆ. ನಿರ್ಲಕ್ಷಿಸುವ ಮೂಲಕ ಅಂಗವಿಕಲರ ಆತ್ಮಗೌರವವನ್ನು, ಸಾಧನೆಗಳನ್ನು ಅವಮಾನಿಸಿದ್ದಾರೆ. ಹೆಚ್ಚು ಹೊತ್ತು ಇದ್ದರೆ ಅಂಗವಿಕಲರ ಮಾಸಾಶನ ಹೆಚ್ಚಿಸುವ ಬೇಡಿಕೆ ಇಡಬಹುದು ಎಂಬ ಭಯವೇ ಬಸವರಾಜ ಬೊಮ್ಮಾಯಿ  ಅವರೇ? ಎಂದು ಪ್ರಶ್ನಿಸಿದೆ.

Share.
Exit mobile version