ತಮಿಳುನಾಡು : ಸುಪ್ರೀಂಕೋರ್ಟ್ ( Supreme Court ) ಆದೇಶದ ಒಂದು ದಿನದ ಬಳಿಕ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ( Rajiv Gandhi assassination case ) ಅಪರಾಧಿಗಳಾದಂತ ನಳಿನಿ ಶ್ರೀಹರನ್ ಸೇರಿದಂತೆ ಎಲ್ಲರನ್ನು ತುಮಿಳುನಾಡಿನ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನ 31 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡುವಂತೆ ನಿನ್ನ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಈ ಆದೇಶದ ಬಳಿಕ ಇಂದು ತಮಿಳುನಾಡಿನ ಜೈಲಿನಲ್ಲಿದ್ದಂತ ರಾಜೀವ್ ಗಾಂಧಿ ಹಂತಕರಾದಂತ ನಳಿನಿ ಶ್ರೀಹರಿಹರನ್, ರವಿಚಂದ್ರನ್, ಸಂತನ್, ಮುರುಗನ್, ಜೈಕುಮಾರ್, ರಾಬರ್ಟ್ ಪೈಸ್ ಸೇರಿ ಆರು ಆರೋಫಿಗಳನ್ನು ರಿಲೀಸ್ ಮಾಡಲಾಗಿದೆ.
ಪೆರೋಲ್ ಷರತ್ತುಗಳ ಭಾಗವಾಗಿ ತನ್ನ ಉಪಸ್ಥಿತಿಯನ್ನ ಗುರುತಿಸಲು ಆಕೆ ಇಂದು ಬೆಳಿಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು.
ಅಂದಹಾಗೆ, ಮೇ ತಿಂಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಅಸಾಧಾರಣ ಅಧಿಕಾರವನ್ನು ಬಳಸಿಕೊಂಡು ಪೆರಾರಿವಾಲನ್ ಎಂಬ ಏಳನೇ ಅಪರಾಧಿಯನ್ನ ಬಿಡುಗಡೆ ಮಾಡಿತ್ತು. ಇದೇ ಆದೇಶವು ಉಳಿದ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.