ಜೈಪುರ: ತನ್ನ ಹೆಂಡತಿ ಹೆಸರಿನಲ್ಲಿದ್ದ ವಿಮೆ ಹಣವನ್ನು ಪಡೆಯಲು ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿಸಿದ ಘಟನೆ ಜೈಪುರದಲ್ಲಿ ನಡೆದಿದೆ.
ಮತ್ಸ್ಯಾಶ್ರಯ ವಸತಿ, ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಅರ್ಜಿ ಆಹ್ವಾನ
ಮೃತ ಮಹಿಳೆಯನ್ನು ಶಾಲು ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಮಹೇಶ್ ಚಂದ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 5 ರಂದು ಶಾಲು, ತನ್ನ ಪತಿ ಮಹೇಶ್ ಚಂದ್ ಕೋರಿಕೆಯ ಮೇರೆಗೆ ಸೋದರಸಂಬಂಧಿ ರಾಜು ಅವರೊಂದಿಗೆ ಬೈಕ್ ನಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ವೇಳೆ ಎಸ್ಯುವಿ ಅವರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಸೋದರ ಸಂಬಂಧಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದು ರಸ್ತೆ ಅಪಘಾತದಂತೆ ಕಂಡುಬಂದಿದ್ದು, ಆಕೆಯ ಕುಟುಂಬಸ್ಥರು ಕೊಲೆ ಎಂದು ಅನುಮಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಚಂದ್ ತನ್ನ ಪತ್ನಿಯ ವಿಮೆ ಹಣಕ್ಕಾಗಿ ಹತ್ಯೆಗೆ ಸಂಚು ರೂಪಿಸಿದ್ದ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದ್ ಅವರು 40 ವರ್ಷಗಳ ಅವಧಿಗೆ ತನ್ನ ಪತ್ನಿಯ ಹೆಸರಿನಲ್ಲಿ ವಿಮೆ ಮಾಡಿಸಿದ್ದನು.ವಿಮಾ ಮೊತ್ತವು ಸಹಜ ಸಾವಿನಲ್ಲಿ 1 ಕೋಟಿ ಮತ್ತು ಅಪಘಾತದಲ್ಲಿ ಮರಣ ಹೊಂದಿದಲ್ಲಿ 1.90 ಕೋಟಿ ಬರುತ್ತದೆ ಎಂಬುದನ್ನು ತಿಳಿದ ಪತಿ, ಪತ್ನಿಯನ್ನು ಕೊಲೆ ಮಾಡಿಸಿದ್ದಾನೆ ಎನ್ನಲಾಗುತ್ತಿದೆ.
ಶಾಲುವನ್ನು ಕೊಲ್ಲಲು ಚಾಂದ್ ಶೀಟರ್ ಮುಖೇಶ್ ಸಿಂಗ್ ರಾಥೋಡ್ ಎಂಬಾತನಿಗೆ ಸುಫಾರಿ ನೀಡಿದ್ದನಂತೆ. ಈ ಕೆಲಸಕ್ಕೆ ರಾಥೋಡ್ 10 ಲಕ್ಷ ಬೇಡಿಕೆ ಇಟ್ಟಿದ್ದು, 5.5 ಲಕ್ಷ ಮುಂಗಡವಾಗಿ ನೀಡಲಾಗಿತ್ತು, ಈ ಕಾರ್ಯಕ್ಕೆ ರಾಥೋಡ್ ಇತರರೊಂದಿಗೆ ಸೇರಿಕೊಂಡು ಅಪಘಾತ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ‘ಪಿಯುಸಿ’ ಯಲ್ಲಿ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ ರಾಜ್ಯ ಸರ್ಕಾರ ಚಿಂತನೆ