ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಚಳಿ ಕಂಡು ಬರುತ್ತಿದ್ದು, ಇದು ಮುಂದಿನ ಎರಡು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಚಳಿ ಮುನ್ಸೂಚನೆ ನೀಡಿದ ಬೆನ್ನಲ್ಲೇ ನ.20 ರಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ. ನವೆಂಬರ್ 20ರ ಭಾನುವಾರದ ನಂತರ ನಗರದಲ್ಲಿ ಮತ್ತೆ ಎರಡು ದಿನ ಮಳೆ ಅಬ್ಬರ ಕಂಡು ಬರಲಿದೆ. ಹಲವು ಪ್ರದೇಶಗಳಲ್ಲಿ ತುಂತುರು ಮಳೆಯಾದರೆ, ಇನ್ನು ಕೆಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಹಲವು ಕಡೆ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗುವ ಮೂಲಕ ಚಳಿ ಪ್ರಮಾಣದಲ್ಲಿ ಏರಿಕೆ ಆಗಿದೆ ಎಂದು ಹವಾಮಾನ ತಜ್ಞ ಡಾ. ಪ್ರಸಾದ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ಹವಾಮಾನ ಬದಲಾವಣೆ ವರದಿ ಪ್ರಕಾರ ಎರಡು ದಿನ ಬೆಳಗ್ಗೆ ದಟ್ಟವಾದ ಮಂಜು ಕವಿದ ಪರಿಸರ ಹಾಗೂ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಬೆಂಗಳೂರಿನಾದ್ಯಂತ ಎಲ್ಲೆಡೆ ಚಳಿ ಪ್ರಮಾಣ ಹೆಚ್ಚಾಗಿದ್ದು, . ಇಂದು ಶುಕ್ರವಾರವು ಬೆಂಗಳೂರಿನ ಜನತೆಗೆ ಭಾರೀ ಚಳಿಯ ಅನುಭವವಾಗಿದೆ. ಮುಂದಿನ 48 ಗಂಟೆ ನಂತರ ವಾತಾವರಣದಲ್ಲಿ ಮತ್ತೆ ಬದಲಾವಣೆ ಆಗುವ ಸಾಧ್ಯತೆ ಇದೆ.
BIGG NEWS: ಸಿದ್ದರಾಮಯ್ಯ ನಾಯಕರೇ ಅಲ್ಲ, ರಾಜ್ಯಕ್ಕೆ ಒಬ್ಬರೇ ಮಾಸ್ ಲೀಡರ್ ಅದು BSY: ವರ್ತೂರು ಪ್ರಕಾಶ್ ವಾಗ್ದಾಳಿ