ಬೆಂಗಳೂರು: ಬಿಡದಿ ಮತ್ತು ರಾಮನಗರ ರೈಲ್ವೆ ನಿಲ್ದಾಣಗಳ ನಡುವೆ ಕಾಮಗಾರಿ ಹಿನ್ನಲೆಯಲ್ಲಿ, ಜುಲೈ.5ರ ನಾಳೆ ಮತ್ತು ಜುಲೈ.6ರ ನಾಡಿದ್ದು ಬೆಂಗಳೂರು-ಮೈಸೂರು ನಡುವಿನ ಮೆಮು ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯಿಂದ ( South Western Railway ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ನಿರ್ವಹಣೆ ಕಾರಣಗಳಿಂದಾಗಿ ಈ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗಿದೆ / ಭಾಗಶಃ ರದ್ದುಗೊಳಿಸಲಾಗಿದೆ (ಎಸ್ & ಟಿ ಗೆ ಸಂಬಂಧಿಸಿದ ನಾನ್ಇಂಟರ್ಲಾಕಿಂಗ್ ಕೆಲಸಗಳು ಮತ್ತು ಬಿಡದಿ ಮತ್ತು ರಾಮನಗರಂ ನಿಲ್ದಾಣಗಳ ಕಾರ್ಯಾರಂಭ ಹಾಗು 05/06.07.2022 ರಂದು ಲೆವೆಲ್ ಕ್ರಾಸಿಂಗ್ ನಂ.34 ಮತ್ತು 35 ರ ಇಂಟರ್ಲಾಕಿಂಗ್ ಮತ್ತು ಬಿಡದಿ-ರಾಮನಗರ ನಡುವೆ 120 ಮೀಟರ್ ಲೈನ್ ಬ್ಲಾಕ್)
ರಾಜ್ಯದ ಕಾಲೇಜುಗಳಲ್ಲಿ ರಾಷ್ಟ್ರಧ್ವಜ ಅಭಿಯಾನ – ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ
ರದ್ದತಿ
1.ರೈಲು ಸಂಖ್ಯೆ.06526 ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು 05.07.2022 ರಂದು
2. ರೈಲು ಸಂಖ್ಯೆ.06559 ಕೆಎಸ್ಆರ್ ಬೆಂಗಳೂರು – ಮೈಸೂರು ಮೆಮು 06.07.2022 ರಂದು
ಭಾಗಶಃ ರದ್ದತಿ
1.05.07.2022 ರಂದು ಪ್ರಾರಂಭವಾಗುವ ರೈಲು ಸಂಖ್ಯೆ.06255 ಕೆಎಸ್ಆರ್ ಬೆಂಗಳೂರು – ಮೈಸೂರು ಮೆಮು ಪ್ರಯಾಣವನ್ನು ಕೆಂಗೇರಿ – ಮೈಸೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು ರೈಲು ಸಂಚಾರವು ಕೆಂಗೇರಿಯಲ್ಲಿ ಕೊನೆಗೊಳ್ಳುತ್ತದೆ.
Good News: ‘SC, ST ಸಮುದಾಯ’ದವರಿಗೆ ಗುಡ್ ನ್ಯೂಸ್: ಈ ಕೆಲಸಕ್ಕೆ ‘ಗ್ರಾಪಂ’ಯಿಂದ ಸಿಗುತ್ತೆ ‘5 ಸಾವಿರ ಸಹಾಯಧನ’
2.05.07.2022 ರಂದು ಪ್ರಾರಂಭವಾಗುವ ರೈಲು ಸಂಖ್ಯೆ.06560 ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ಮೈಸೂರು-ಕೆಂಗೇರಿ ನಡುವೆ ಭಾಗಶಃ ರದ್ದಾಗಲಿದೆ ಮತ್ತು ನಿಗದಿತ ನಿರ್ಗಮನದ ಸಮಯದಲ್ಲಿ ಕೆಂಗೇರಿಯಿಂದ ಹೊರಟು ಕೆಎಸ್ಆರ್ ಬೆಂಗಳೂರನ್ನು ತಲುಪುತ್ತದೆ.(05.07.22ರಂದು ಮೈಸೂರು – ಕೆಎಸ್ಆರ್ ಬೆಂಗಳೂರು ಮೆಮು ನಡುವೆ ಮಾತ್ರ ಸಂಚರಿಸುತ್ತದೆ