Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉಪೇಂದ್ರ ಸಿನಿಮಾ ಮರು ಬಿಡುಗಡೆ : ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಗೆಲ್ಲುವ ಬಂಪರ್ ಆಫರ್

ವಿಜಯನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಸರಣಿ ಕಳ್ಳತನದ ಇಬ್ಬರು ಅರೆಸ್ಟ್ ; 14 ಲಕ್ಷ ಮೌಲ್ಯದ ಆಭರಣ ವಶ!

ರಾಯಚೂರು : ಆರ್ಥಿಕ ಸಂಕಷ್ಟ, ವಿಪರೀತ ಸಾಲದಿಂದ ಬೇಸತ್ತು, ಉಪನ್ಯಾಸಕ ಆತ್ಮಹತ್ಯೆಗೆ ಶರಣು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಯಚೂರು : ಆರ್ಥಿಕ ಸಂಕಷ್ಟ, ವಿಪರೀತ ಸಾಲದಿಂದ ಬೇಸತ್ತು, ಉಪನ್ಯಾಸಕ ಆತ್ಮಹತ್ಯೆಗೆ ಶರಣು!
KARNATAKA

ರಾಯಚೂರು : ಆರ್ಥಿಕ ಸಂಕಷ್ಟ, ವಿಪರೀತ ಸಾಲದಿಂದ ಬೇಸತ್ತು, ಉಪನ್ಯಾಸಕ ಆತ್ಮಹತ್ಯೆಗೆ ಶರಣು!

By ಸುರೇಶ್‌

ರಾಯಚೂರು : ರಾಯಚೂರಲ್ಲಿ ವೃತ್ತಿಯಲ್ಲಿ ಉಪನ್ಯಾಸಕರೂ ಆಗಿದ್ದ ಉದ್ಯಮಿಯೊಬ್ಬರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಿಂಧನೂರಿನಲ್ಲಿ ಸೋಮವಾರ ನಡೆದಿದೆ. ಸಿಂಧನೂರು ನಗರದ ಆದರ್ಶ ಕಾಲೋನಿಯ ಬಾಡಿಗೆ ಮನೆಯಲ್ಲಿದ್ದ ಪ್ರಾಣೇಶ್ ವರ್ಣೆಕರ್(38) ಆತ್ಮಹತ್ಯೆ ಮಾಡಿಕೊಂಡಿರುವ ಉಪನ್ಯಾಸಕ/ಉದ್ಯಮಿ ಎಂದು ಗುರುತಿಸಲಾಗಿದೆ.

ಪ್ರಾಣೇಶ್ ವರ್ಣೆಕರ್ ನಗರದ ಸಮರ್ಥ್ ಜ್ಯೂವಲೆರ್ಸ್ ಮಾಲೀಕರಾಗಿದ್ದು, ವಿಜಡಂ ಪಾರ್ಟ್ ಟೈಮ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಆರ್ಥಿಕ ಸಂಕಷ್ಟ ಹಾಗೂ ಅಧಿಕ ಸಾಲದ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಪೊಲೀಸರು ತಿಳಿಸಿದ್ದಾರೆ.‌

ಸಾಲ ಪಡೆದವರಿಗೆ ಸೋಮವಾರ (ಮೇ 11) ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರೂ, ಹಣ ಒದಗಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯ ಮೊದಲು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಸಿಂಧನೂರು ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನೆಯ ವಿವರ: ಪ್ರಾಣೇಶ್ ವರ್ಣೆಕರ್ ಅವರು ಸಿಂಧನೂರು ನಗರದ ಆದರ್ಶ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಆತ್ಮಹತ್ಯೆಗೆ ಕಾರಣ: ಪ್ರಾಥಮಿಕ ತನಿಖೆಯ ಪ್ರಕಾರ, ಪ್ರಾಣೇಶ್ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು ಎಂದು ತಿಳಿದುಬಂದಿದೆ. ಉದ್ಯಮದಲ್ಲಿ ಉಂಟಾದ ನಷ್ಟ ಹಾಗೂ ಅಧಿಕ ಸಾಲದ ಒತ್ತಡದಿಂದಾಗಿ ಅವರು ಮಾನಸಿಕವಾಗಿ ಜರ್ಜರಿತರಾಗಿದ್ದರು ಎನ್ನಲಾಗಿದೆ. ಈ ಸಾಲದ ಹೊರೆ ತಾಳಲಾರದೆ ಮನನೊಂದು ಅವರು ಈ ಅತಿರೇಕದ ನಿರ್ಧಾರ ಕೈಗೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ತನಿಖೆ: ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ಕುಟುಂಬಸ್ಥರು ಹಾಗೂ ಆಪ್ತರ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣವೇನು ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಒಬ್ಬ ಪ್ರತಿಭಾವಂತ ಉಪನ್ಯಾಸಕ ಹಾಗೂ ಯುವ ಉದ್ಯಮಿಯ ಅಕಾಲಿಕ ಸಾವು ಸಿಂಧನೂರು ನಗರದಲ್ಲಿ ಶೋಕದ ಛಾಯೆ ಮೂಡಿಸಿದೆ.

Share. Facebook Twitter LinkedIn WhatsApp Email

Related Posts

ಉಪೇಂದ್ರ ಸಿನಿಮಾ ಮರು ಬಿಡುಗಡೆ : ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಗೆಲ್ಲುವ ಬಂಪರ್ ಆಫರ್

3 Mins Read

ವಿಜಯನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಸರಣಿ ಕಳ್ಳತನದ ಇಬ್ಬರು ಅರೆಸ್ಟ್ ; 14 ಲಕ್ಷ ಮೌಲ್ಯದ ಆಭರಣ ವಶ!

1 Min Read

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

2 Mins Read
Recent News

ಉಪೇಂದ್ರ ಸಿನಿಮಾ ಮರು ಬಿಡುಗಡೆ : ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಗೆಲ್ಲುವ ಬಂಪರ್ ಆಫರ್

ವಿಜಯನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಸರಣಿ ಕಳ್ಳತನದ ಇಬ್ಬರು ಅರೆಸ್ಟ್ ; 14 ಲಕ್ಷ ಮೌಲ್ಯದ ಆಭರಣ ವಶ!

ರಾಯಚೂರು : ಆರ್ಥಿಕ ಸಂಕಷ್ಟ, ವಿಪರೀತ ಸಾಲದಿಂದ ಬೇಸತ್ತು, ಉಪನ್ಯಾಸಕ ಆತ್ಮಹತ್ಯೆಗೆ ಶರಣು!

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

State News

ಉಪೇಂದ್ರ ಸಿನಿಮಾ ಮರು ಬಿಡುಗಡೆ : ಚಿತ್ರ ವೀಕ್ಷಿಸುವ ಪ್ರೇಕ್ಷಕರಿಗೆ 1 ಕೋಟಿ ರೂಪಾಯಿ ಗೆಲ್ಲುವ ಬಂಪರ್ ಆಫರ್

By ಅವಿನಾಶ್‌ ಆರ್‌ ಭೀಮಸಂದ್ರ KARNATAKA 3 Mins Read

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ಅವರ ನಿರ್ದೇಶನದ ‘ಉಪೇಂದ್ರ’ ಸಿನಿಮಾ ಈಗ ಮತ್ತೆ…

ವಿಜಯನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ : ಸರಣಿ ಕಳ್ಳತನದ ಇಬ್ಬರು ಅರೆಸ್ಟ್ ; 14 ಲಕ್ಷ ಮೌಲ್ಯದ ಆಭರಣ ವಶ!

ರಾಯಚೂರು : ಆರ್ಥಿಕ ಸಂಕಷ್ಟ, ವಿಪರೀತ ಸಾಲದಿಂದ ಬೇಸತ್ತು, ಉಪನ್ಯಾಸಕ ಆತ್ಮಹತ್ಯೆಗೆ ಶರಣು!

ಗಮನಿಸಿ : `ಲೈಂಗಿಕತೆ’ಗೆ ಯಾವ ಸಮಯ ಸೂಕ್ತ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.