ಕೆಎನ್ಎನ್ ಡಿಜಿಟಲ್ ಡೆಸ್ಕ್ : ಕೆಲ ದಿನಗಳ ಹಿಂದೆ ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ರಾಹುಲ್ ಗಾಂಧಿ ಅವರನ್ನು ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ರಾಹುಲ್ ಗಾಂಧಿ ಹೇಳಿಕೆಯನ್ನು ಎಷ್ಟೇ ಖಂಡಿಸಿದರೂ ಕಡಿಮೆ, ಭಾರತೀಯ ಸೇನೆ ಶೌರ್ಯದ ಸಂಕೇತವಾಗಿದೆ. ಚೀನಾದ ಕಮ್ಯುನಿಸ್ಟ್ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ಎಂಒಯುಗೆ ಸಹಿ ಹಾಕಿದೆ ಎಂದು ನಮಗೆ ತಿಳಿದಿದೆ ಎಂದು ತಿರುಗೇಟು ನೀಡಿದ್ದಾರೆ.
#WATCH | Rahul Gandhi's statement works to demoralize our Army; no matter how much it is condemned, it is less. Indian army is a symbol of bravery and valour. We know that the Communist Party of China had signed MoU with the Congress party: BJP national president JP Nadda pic.twitter.com/qbHpAN6rfU
— ANI (@ANI) December 17, 2022
ಭಾರತೀಯ ಸೇನೆಯು ಡೋಕ್ಲಾಮ್ನಲ್ಲಿದ್ದಾಗ, ರಾಹುಲ್ ಗಾಂಧಿ ಅವರು ಚೀನಾದ ರಾಯಭಾರಿ ಕಚೇರಿಯಲ್ಲಿ ಚೀನಾದ ಅಧಿಕಾರಿಗಳನ್ನು ಸದ್ದಿಲ್ಲದೆ ಭೇಟಿಯಾಗಿದ್ದರು. ಸರ್ಜಿಕಲ್ ಸ್ಟ್ರೈಕ್ ಮತ್ತು ಪುಲ್ವಾಮಾದ ಬಗ್ಗೆ ಅವರು ಪ್ರಶ್ನೆಗಳನ್ನು ಎತ್ತಿದ್ದು ನಮಗೆ ತಿಳಿದಿದೆ. ಇಂತಹ ಹೇಳಿಕೆಗಳನ್ನು ನಾನು ಖಂಡಿಸುತ್ತೇನೆ, ಇದು ದೇಶದ ಬಗೆಗಿನ ರಾಹುಲ್ ಗಾಂಧಿಯವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಜೆಪಿ ನಡ್ಡಾ ಹೇಳಿದ್ದಾರೆ.
ಇನ್ನು ಶುಕ್ರವಾರ ರಾಹುಲ್ ಗಾಂಧಿ, ಚೀನಾ ವಿಷಯದಲ್ಲಿ ಸರ್ಕಾರ ವಿಷಯಗಳನ್ನ ಮರೆಮಾಚಲು ಪ್ರಯತ್ನಿಸುತ್ತಿದೆ. ಆದರೆ ಅದನ್ನು ಮರೆಮಾಡಲು ಸಾಧ್ಯವಿಲ್ಲ. ಚೀನಾ ಯುದ್ಧಕ್ಕೆ ತಯಾರಿ ನಡೆಸ್ತಿದೆ .ಆದ್ರೆ, ಸರಕಾರ ಇದನ್ನ ನಿರ್ಲಕ್ಷಿಸ್ತಿದೆ. ನಮ್ಮ ವಿದೇಶಾಂಗ ಸಚಿವರು ತಮ್ಮ ತಿಳುವಳಿಕೆಯನ್ನ ಆಳಗೊಳಿಸಬೇಕು ಎಂದಿದ್ದರು.
BREAKING NEWS: ಈ ಬಾರಿ ಕ್ರಿಸ್ ಮೆಸ್ ಮತ್ತು ಹೊಸ ವರ್ಷ ಆಚರಣೆಗೆ ಅನುಮತಿ ಕಡ್ಡಾಯ: ಪೊಲೀಸರಿಂದ ಆದೇಶ