ಬೆಂಗಳೂರು : ಕಾಂಗ್ರೆಸ್ ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿ ಸರ್ಕಾರದಿಂದ ಪತ್ರಕರ್ತರಿಗೆ ಸ್ವೀಟ್ ಬಾಕ್ಸ್ ಜೊತೆ ಹಣ ಹೋಗಿದೆ ಎಂಬ ವಿಚಾರಕ್ಕೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಅಶೋಕ್ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದರು.
ಕಾಂಗ್ರೆಸ್ ಪತ್ರಕರ್ತರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಕೆಲಸ ಮಾಡುತ್ತಿದೆ, ಯಾವ ನೈತಿಕತೆ ಮೇಲೆ ಇಂತಹ ಆರೋಪ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಹಗರಣಗಳ ಸರಮಾಲೆಯಲ್ಲಿ ಜೈಲು ಸೇರಿದ್ದಾರೆ. ಗಿಫ್ಟ್ ಬಾಕ್ಸ್ ವಿಚಾರ ಇಟ್ಟುಕೊಂಡು ಕಾಂಗ್ರೆಸ್ ಬ್ಲ್ಯಾಕ್ ಮೇಲ್ ಮಾಡುತ್ತಿದೆ , ಕಾಂಗ್ರೆಸ್ ನಾಯಕರು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪರ್ತಕರ್ತರ ಆತ್ಮಸ್ಥೈರ್ಯ ಕುಗ್ಗಿಸುವಂತಹ ಕೆಲಸ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.
ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ, ಕಾಂಗ್ರೆಸ್ ಅವಧಿಯಲ್ಲೂ ಹಣ ಹೋಗಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಸುಧಾಕರ್ ಸರ್ಕಾರದಿಂದ ಗಿಫ್ಟ್ ಬಂದಿದೆ ಎಂದು ಯಾವ ಪರ್ತಕರ್ತರು ಹೇಳಿದ್ದಾರೆ, ಯಾರು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆಯಲ್ಲಿ ಗೊತ್ತಾಗಲಿದೆ, ಲೋಕಾಯುಕ್ತ ತನಿಖೆಯಲ್ಲಿ ಕಾಂಗ್ರೆಸ್ಸಿಗರಿಗೆ ನಂಬಿಕೆ ಇಲ್ಲವೇ ಎಂದು ಸುಧಾಕರ್ ಹೇಳಿದ್ದಾರೆ ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ, ಕಾಂಗ್ರೆಸ್ ಅವಧಿಯಲ್ಲೂ ಹಣ ಪಡೆದಿದ್ದಾರೆ. ಕಲಬುರಗಿಯಲ್ಲಿ ಒಬಿಸಿ ಸಮಾವೇಶ ಯಶಸ್ವಿಯಾಗಿದೆ. ಕಾಂಗ್ರೆಸ್ಸಿಗರಿಗೆ ಇದನ್ನು ಸಹಿಸಲು ಆಗುತ್ತಿಲ್ಲ ಎಂದು ಸುಧಾಕರ್ ಹೇಳಿದ್ದಾರೆ.
BIREAKING NEWS: : ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಇಲ್ಲಿದೆ ಸಾಧಕರ ಪಟ್ಟಿ | Rajyotsava Awards List
BREAKING NEWS ; ಬಾಲಿವುಡ್ ನಟ ಅಮೀರ್ ಖಾನ್ ತಾಯಿ ‘ಜೀನತ್ ಹುಸೇನ್’ಗೆ ತೀವ್ರ ಹೃದಯಾಘಾತ
ಹಬ್ಬದ ದಿನಗಳಲ್ಲಿ ಉಡುಗೊರೆ ನೀಡುವುದು ಹಿಂದೂ ಸಂಸ್ಕೃತಿ : ಕಾಂಗ್ರೆಸ್ ಆರೋಪಕ್ಕೆ ಸಚಿವ ಸುಧಾಕರ್ ತಿರುಗೇಟು