Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತ-ಪಾಕ್ ಕದನ ವಿರಾಮ ನಿರ್ಧಾರದಲ್ಲಿ ಟ್ರಂಪ್ ಹಸ್ತಕ್ಷೇಪವಿಲ್ಲ: ವಿದೇಶಾಂಗ ಕಾರ್ಯದರ್ಶಿ

19/05/2025 7:23 PM

BIG NEWS : ಬೆಂಗಳೂರಲ್ಲಿ ಮಳೆ ಕುರಿತು, ಯಾರಾದರೂ ಚರ್ಚೆಗೆ ಬನ್ನಿ : ವಿಪಕ್ಷಕ್ಕೆ ಸವಾಲು ಹಾಕಿದ ಡಿಕೆ ಶಿವಕುಮಾರ್

19/05/2025 7:16 PM

ಕರ್ನಾಟಕದ ಇತಿಹಾದಲ್ಲಿ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ: ಬೊಮ್ಮಾಯಿ

19/05/2025 7:10 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ರಾಜ್ಯಾಧ್ಯಕ್ಷ’ರನ್ನು ಪ್ರಶ್ನಿಸುವುದು ಅಂದ್ರೆ ‘ಹೈಕಮಾಂಡ’ನ್ನೇ ಪ್ರಶ್ನಿಸಿದಂತೆ: ಮಾಜಿ ಸಚಿವ ಹರತಾಳು ಹಾಲಪ್ಪ
KARNATAKA

‘ರಾಜ್ಯಾಧ್ಯಕ್ಷ’ರನ್ನು ಪ್ರಶ್ನಿಸುವುದು ಅಂದ್ರೆ ‘ಹೈಕಮಾಂಡ’ನ್ನೇ ಪ್ರಶ್ನಿಸಿದಂತೆ: ಮಾಜಿ ಸಚಿವ ಹರತಾಳು ಹಾಲಪ್ಪ

By kannadanewsnow0903/10/2024 3:32 PM

ಬೆಂಗಳೂರು: ಹೈಕಮಾಂಡಿನಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನ್ನೇ ಪ್ರಶ್ನಿಸಿದಂತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಆಕ್ಷೇಪಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಿರಿಯರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರರ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಅನಗತ್ಯವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ಅನುಭವ ಇಲ್ಲ; ಚಿಕ್ಕವರು ಎಂದೆಲ್ಲ ಮಾತನಾಡುತ್ತಾರೆ ಎಂದು ಟೀಕಿಸಿದರು.

ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ಒಪ್ಪುವುದಿಲ್ಲ ಎನ್ನುತ್ತಾರೆ. ಯತ್ನಾಳ್‍ರಲ್ಲೇ ಒಂದಷ್ಟು ಗೊಂದಲಗಳಿವೆ. ವಿಜಯೇಂದ್ರರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿಯವರ ಸಲಹೆ ಪಡೆದು ನೇಮಕ ಮಾಡಿದ್ದಾರೆ ಎಂದು ವಿವರಿಸಿದರು. ನೇಮಕ ಮಾಡುವಾಗ ರಾಜ್ಯ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಅವರದೇ ಆದ ರೀತಿಯಲ್ಲಿ ಸರ್ವೇ ಮಾಡಿಸಿ ಅಭಿಪ್ರಾಯ ಪಡೆದಿದ್ದಾರೆ. ಸ್ವಲ್ಪ ಮಟ್ಟಿಗೆ ಪರಿವಾರದ ಸಲಹೆಯನ್ನೂ ಕೇಳಿರುತ್ತಾರೆ ಎಂದರು.

ಈಗಿನ ರಾಜ್ಯಾಧ್ಯಕ್ಷರು ಕಿರಿಯರಾಗುವುದು ಹೇಗೆ?

ಭಿನ್ನಾಭಿಪ್ರಾಯ ಇದ್ದರೆ ದೆಹಲಿಗೆ ಹೋಗಿ ಹೈಕಮಾಂಡನ್ನು ಭೇಟಿ ಮಾಡಿ ಸಲಹೆ, ಸೂಚನೆ ಕೊಡಬೇಕು. ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಆಗ್ರಹಿಸಿದರು. ಹೀಗೆ ರಸ್ತೆಯಲ್ಲಿ, ಹೋದಲ್ಲಿ ಬಂದಲ್ಲಿ ಯಾವ್ಯಾವುದೋ ಸಭೆಗೆ ಹೋದಲ್ಲಿ ಮಾತನಾಡುವುದು ಸರಿಯಲ್ಲ. ಅವರು ನಮ್ಮ ಪಕ್ಷದ ಮುಖಂಡರು. ಈಶ್ವರಪ್ಪನವರು ನಮ್ಮ ಪಕ್ಷ ಬಿಟ್ಟು ಹೋದವರು. ಅವರನ್ನು ಪಕ್ಷವು ಉಚ್ಚಾಟಿಸಿದೆ. ಬಿಜೆಪಿಯಲ್ಲಿ ಇದ್ದುಕೊಂಡು ಈಶ್ವರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಾರೆ ಎಂದು ಆರೋಪಿಸಿದರು.

ರಾಜ್ಯಾಧ್ಯಕ್ಷರಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುವ ಉದ್ದೇಶ ಯತ್ನಾಳರದು. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದರು. ಹಿಂದೆ 42-44 ವರ್ಷದ ಎ.ಕೆ.ಸುಬ್ಬಯ್ಯನವರು ಅಧ್ಯಕ್ಷರಾಗಿದ್ದರು. ಸ್ವತಃ ಯಡಿಯೂರಪ್ಪನವರು ಅಧ್ಯಕ್ಷರಾದಾಗ ಅವರಿಗೆ 48 ವರ್ಷ; ಈಗ ವಿಜಯೇಂದ್ರರಿಗೆ 49-50 ವರ್ಷ. ಇವರು ಕಿರಿಯರಾಗುವುದು ಹೇಗೆ ಎಂದು ಹರತಾಳು ಹಾಲಪ್ಪ ಅವರು ಪ್ರಶ್ನೆಯನ್ನು ಮುಂದಿಟ್ಟರು.

ಯತ್ನಾಳರು ಕೇಂದ್ರ ಸಚಿವರಾದಾಗ ಅವರಿಗೆ ಎಷ್ಟು ವರ್ಷ? ಅವರು ಆಗ 40 ವರ್ಷದ ಆಸುಪಾಸಿನಲ್ಲಿದ್ದರು. ಆಗ ಹಿರಿಯರು ಇರಲಿಲ್ಲವೇ? ಒಂದು ಸಾರಿ ತಾವೇನು ಎಂದು ತಮ್ಮ ಬಗ್ಗೆ ಯೋಚಿಸುವುದಿಲ್ಲ. ವಿಜಯೇಂದ್ರ ಒಬ್ಬ ಯುವ ಮುಖಂಡ, ಬೆಳೆಯುತ್ತಿದ್ದಾರೆ; ಯಾಕೆ ಆ ಥರ ತಿಳಿದುಕೊಳ್ಳಬಾರದು ಎಂದು ವಿನಂತಿಸುವುದಾಗಿ ಹೇಳಿದರು. ಇದೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತಿದೆ. ಮುಂದೆ ಅಗತ್ಯವಿದ್ದರೆ ಅಧಿಕೃತವಾಗಿ ನಾವು ಹೋಗಿ ಭೇಟಿ ಮಾಡಿ ಮಾತನಾಡುತ್ತೇವೆ ಎಂದರು.

ಲಕ್ಷಾಂತರ ಜನರು ಭಾಗವಹಿಸಿದ್ದ ಪಾದಯಾತ್ರೆ..

ವಿಜಯೇಂದ್ರರು ರಾಜ್ಯಾಧ್ಯಕ್ಷರಾದ ಬಳಿಕ ಈ ಸರಕಾರ, ಸಿದ್ದರಾಮಯ್ಯರಂಥ ದೊಡ್ಡ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದಾರೆ. ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಹೈಕಮಾಂಡಿನ ಮಾರ್ಗದರ್ಶನ- ಸಲಹೆ ಪಡೆದು ಪಕ್ಷ ಸಂಘಟಿಸಿದ್ದಾರೆ. ವಿಪಕ್ಷ ನಾಯಕರು ಲೋಕಸಭಾ ಸದಸ್ಯರು, ಪ್ರಮುಖರ ಸಲಹೆ ಪಡೆದು, ಸಮಯ ಕೊಟ್ಟು ಪಾದಯಾತ್ರೆ ನಡೆಸಿದ್ದಾರೆ. ಲಕ್ಷಾಂತರ ಜನರು ಭಾಗವಹಿಸಿದ್ದ ಅಭೂತಪೂರ್ವ ಹೋರಾಟ ಅದಾಗಿತ್ತು ಎಂದು ಹರತಾಳು ಹಾಲಪ್ಪ ಅವರು ವಿಶ್ಲೇಷಣೆಯನ್ನು ಮುಂದಿಟ್ಟರು.

ಹಗಲು ರಾತ್ರಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೇನು ಬೇಕು? ವಿಜಯೇಂದ್ರರು ಅಧ್ಯಕ್ಷರಾದ ಬಳಿಕ ಯುವಪೀಳಿಗೆ ಯಾವ ರೀತಿ ಪಾದಯಾತ್ರೆಯಲ್ಲಿ ಭಾಗವಹಿಸಿದೆ ಎಂಬುದನ್ನು ಜನರು, ಹೈಕಮಾಂಡ್ ಗಮನಿಸಿದ್ದಾರೆ ಎಂದರು.

ನಳಿನ್‍ಕುಮಾರ್ ಕಟೀಲ್ ಅವರು 52-53 ವರ್ಷವಿದ್ದಾಗ ಅಧ್ಯಕ್ಷರಾದರು. ಫಡ್ನವೀಸ್ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಈಗ ಡಿಸಿಎಂ ಆಗಿದ್ದಾರೆ. ಆಗ ಅವರಿಗೆ 40ರ ಆಸುಪಾಸು ವರ್ಷ ಇತ್ತು ಎಂದು ಗಮನ ಸೆಳೆದರು. ಗೋವಾದ ಸಿಎಂ ಸಾವಂತ್ ಅವರು ಹಿಂದೆ ರಾಜ್ಯ ಅಧ್ಯಕ್ಷರಾಗಿದ್ದಾಗ 45ರ ಆಸುಪಾಸು ಇದ್ದವರು ಎಂದು ತಿಳಿಸಿದರು. ಇದನ್ನು ಅರ್ಥ ಮಾಡಿಕೊಳ್ಳಬೇಕು. ತಾವು ಕಿರಿಯ ಪ್ರಾಯದಲ್ಲಿ ಕೇಂದ್ರ ಸಚಿವರಾಗಿದ್ದು ಮರೆತುಹೋಯಿತೇ ಎಂದು ಪ್ರಶ್ನಿಸಿದರು. ಅವರ ಇಲ್ಲಸಲ್ಲದ ಮಾತಿನಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತಿದೆ ಎಂದು ತಿಳಿಸಿದರು.

ಹೈಕಮಾಂಡ್ ಇದನ್ನು ಸರಿಪಡಿಸಲು ಪ್ರಯತ್ನ ಮಾಡಿರಬಹುದು ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಯತ್ನಾಳ್ ಅವರೊಬ್ಬ ಹಿರಿಯ ನಾಯಕ. ಹಿಂದೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ, ಕಟೀಲ್ ಅವರ ಬಗ್ಗೆ ಮಾತನಾಡಿದ್ದರು. ಈಗಲೂ ಅದೇ ಚಾಳಿ ಮುಂದುವರೆಸಿದ್ದಾರೆ. ಆಗ ಕರೆದು ಬುದ್ಧಿ ಹೇಳಿದರೆ ಆಗುತ್ತಿತ್ತು. ಮುಂದೆ ಒಳ್ಳೆಯದಾಗಿ ಹೋಗದಿದ್ದರೆ ಕ್ರಮ ಆಗಬಹುದು ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಅವರ ಭಾಷೆಯಲ್ಲೇ ಉತ್ತರ ಕೊಡುತ್ತೇವೆ…

ರಸ್ತೆಯಲ್ಲಿ ಮಾತನಾಡಬೇಡಿ; ನಾವೂ ರಸ್ತೆಯಲ್ಲಿ ಹೇಳಬೇಕಾಗುತ್ತದೆ. ಅವರ ಭಾಷೆಯಲ್ಲೇ ಉತ್ತರ ನೀಡಬೇಕಾಗುತ್ತದೆ; ಹೈಕಮಾಂಡಿಗೆ ದೂರು ಕೊಡಬೇಕಾದೀತು ಎಂದು ಎಚ್ಚರಿಸಿದರು. ನಾವು ಒಟ್ಟಾಗಿ ಹೋಗಬೇಕು. ಯತ್ನಾಳ್ ಮತ್ತು ಅವರ ಜೊತೆಗಿನ 3-4 ಹಿರಿಯ ಸಂಗಡಿಗರು ಅವರ ಸಮಸ್ಯೆಗಳನ್ನು ಹಿರಿಯರ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಲಿ. ಈ ಥರ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ತ್ರಿಪುರದಲ್ಲಿ 41-42 ವರ್ಷದ ವಿಪ್ಲವಕುಮಾರ್ ಸಿಎಂ ಆಗಿದ್ದರು. ಯಾರಾದರೂ ಆಗ ಪ್ರಶ್ನಿಸಿದ್ದರೇ? ವಯಸ್ಸು ಪ್ರಮುಖವಲ್ಲ; ಸಾಮಥ್ರ್ಯ ಮುಖ್ಯ. ಈಗಿನ ರಾಜಸ್ಥಾನ ಸಿಎಂ ಮೊದಲ ಬಾರಿ ಶಾಸಕರಾಗಿ ಆಯ್ಕೆ ಆದವರು; ನಾವು 5 ಸಾರಿ ಆಯ್ಕೆ ಆದವರೆಂದು ಅಲ್ಲಿ ಜಗಳ ಶುರು ಮಾಡಿಲ್ಲ ಎಂದು ವಿವರಿಸಿದರು.

ನಾವು ಅವರನ್ನು ಬೈಯುತ್ತಿಲ್ಲ. ವಿನಂತಿ ಮಾಡುತ್ತಿದ್ದೇವೆ. ಅವರಿಗೂ ಈಗ 60-62 ವರ್ಷ. ಅವರು ಮಾಡುವುದು ಸರಿಯಲ್ಲ ಎಂದು ನಾವೂ ಹೇಳಬೇಕಿದೆ. ಬೇರೆಬೇರೆಯವರು ಹೇಳುತ್ತಿದ್ದೇವೆ. ಇದು ಮನವಿ ಮತ್ತು ಆಗ್ರಹ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಮಾಧ್ಯಮದ ಮುಂದೆ ಅನಿವಾರ್ಯವಾಗಿ ಬಂದಿದ್ದೇನೆ ಎಂದರು.

ಲಿಂಬಾವಳಿಯವರೂ ವೆಲ್ ವಿಷರ್ ಇದ್ದರು. ಅವರು ಯಾವ ವಯಸ್ಸಿನಲ್ಲಿ ಎಷ್ಟು ಬಾರಿ ಪ್ರಧಾನ ಕಾರ್ಯದರ್ಶಿ ಆಗಿದ್ದರು? ಅವರು ಕಟ್ಟಿದ ಕಚೇರಿಗೆ ಬಂದು ಸಲಹೆ ಸೂಚನೆ ಕೊಡಲಿ; ಯಡಿಯೂರಪ್ಪ, ಅನಂತಕುಮಾರರ ಜೊತೆ ಕಚೇರಿ, ಪಕ್ಷ ಕಟ್ಟಿಲ್ಲವೇ? ಎಬಿವಿಪಿಯಲ್ಲೂ ಇದ್ದವರು. ಈಗ್ಯಾಕೆ ಹಾಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಸಲಹೆ ಕೊಡುವ ಸ್ಥಾನ ಅವರದು. ಇಲ್ಲಿ ಬಂದು ಹೇಳಲಿ ಎಂದರು. ಇವತ್ತು ಪ್ರೆಸ್ ಮೀಟ್ ಬಗ್ಗೆ ರಾಜ್ಯಾಧ್ಯಕ್ಷರಿಗೆ ಹೇಳಿಲ್ಲ. ಇದೆಲ್ಲ ನನ್ನ ಅನಿಸಿಕೆಗಳು ಎಂದು ಸ್ಪಷ್ಟಪಡಿಸಿದರು.

ಪಟಾಕಿ, ಪಟಾಕಿ ಬಾಂಬ್ ಹಚ್ಚುವುದನ್ನು ನಿಲ್ಲಿಸಬೇಕು..

ಒಂದು ಸಾವಿರ ಕೋಟಿ ಇಟ್ಕೊಂಡಿದ್ದಾರೆ ಎಂದೆಲ್ಲ ಬಾಂಬ್ ಹಾಕುತ್ತಾರೆ. ಇದರಿಂದ ಪಕ್ಷದ ಕಾರ್ಯಕರ್ತರಿಗೆ ಇರಿಸುಮುರಿಸು ಆಗುತ್ತದೆ. ಈಶ್ವರಪ್ಪ ಅವರ ಜೊತೆ ಖಾಸಗಿ ಕಾರ್ಯಕ್ರಮದಲ್ಲೂ ಬಾಂಬ್ ಹಾಕಿ ಹೋಗಿದ್ದಾರೆ. ಅಲ್ಲಲ್ಲಿ ಪಟಾಕಿ, ಪಟಾಕಿ ಬಾಂಬ್ ಹಚ್ಚುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಪ್ರಬಲ ಸಮುದಾಯದ ನಾಯಕರು ಎಂದೇನಿಲ್ಲ. ಇವತ್ತಲ್ಲ ನಾಳೆ ಸರಿ ಮಾಡಬಹುದೆಂದು ಭಾವನೆ ಕೆಲವರದು. ಆದರೆ, ಅದೊಂದು ಚಟವಾಗಿದೆ; ಈ ಸ್ವಭಾವವನ್ನು ತಿದ್ದಿಕೊಳ್ಳಬೇಕು ಎಂದು ತಿಳಿಸಿದರು. ಯತ್ನಾಳ್ ಮತ್ತು ಜೊತೆಗಿರುವವರು ಹಿರಿಯರು; ಅನುಭವಿಗಳು; ಕಂಡಲ್ಲಿ ಗುಂಡು ಹೊಡೆದು ಅಭಾಸಕ್ಕೆ ಕಾರಣ ಆಗಬಾರದು ಎಂದು ತಿಳಿಸಿದರು.

ರಾಜ್ಯ ವಕ್ತಾರ ಡಾ.ನರೇಂದ್ರ ರಂಗಪ್ಪ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಉಪಸ್ಥಿತರಿದ್ದರು.

BIG BREAKING: ಸಿಎಂ ಸಿದ್ಧರಾಮಯ್ಯ ಬೆನ್ನಲ್ಲೇ ಪುತ್ರನಿಗೂ ಸಂಕಷ್ಟ: ಯತೀಂದ್ರ ವಿರುದ್ಧ ದೂರು ದಾಖಲು

ಶಿವಮೊಗ್ಗ: ಅ.5ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

Share. Facebook Twitter LinkedIn WhatsApp Email

Related Posts

BIG NEWS : ಬೆಂಗಳೂರಲ್ಲಿ ಮಳೆ ಕುರಿತು, ಯಾರಾದರೂ ಚರ್ಚೆಗೆ ಬನ್ನಿ : ವಿಪಕ್ಷಕ್ಕೆ ಸವಾಲು ಹಾಕಿದ ಡಿಕೆ ಶಿವಕುಮಾರ್

19/05/2025 7:16 PM1 Min Read

ಕರ್ನಾಟಕದ ಇತಿಹಾದಲ್ಲಿ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ: ಬೊಮ್ಮಾಯಿ

19/05/2025 7:10 PM1 Min Read

2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ

19/05/2025 7:06 PM3 Mins Read
Recent News

ಭಾರತ-ಪಾಕ್ ಕದನ ವಿರಾಮ ನಿರ್ಧಾರದಲ್ಲಿ ಟ್ರಂಪ್ ಹಸ್ತಕ್ಷೇಪವಿಲ್ಲ: ವಿದೇಶಾಂಗ ಕಾರ್ಯದರ್ಶಿ

19/05/2025 7:23 PM

BIG NEWS : ಬೆಂಗಳೂರಲ್ಲಿ ಮಳೆ ಕುರಿತು, ಯಾರಾದರೂ ಚರ್ಚೆಗೆ ಬನ್ನಿ : ವಿಪಕ್ಷಕ್ಕೆ ಸವಾಲು ಹಾಕಿದ ಡಿಕೆ ಶಿವಕುಮಾರ್

19/05/2025 7:16 PM

ಕರ್ನಾಟಕದ ಇತಿಹಾದಲ್ಲಿ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ: ಬೊಮ್ಮಾಯಿ

19/05/2025 7:10 PM

2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ

19/05/2025 7:06 PM
State News
KARNATAKA

BIG NEWS : ಬೆಂಗಳೂರಲ್ಲಿ ಮಳೆ ಕುರಿತು, ಯಾರಾದರೂ ಚರ್ಚೆಗೆ ಬನ್ನಿ : ವಿಪಕ್ಷಕ್ಕೆ ಸವಾಲು ಹಾಕಿದ ಡಿಕೆ ಶಿವಕುಮಾರ್

By kannadanewsnow0519/05/2025 7:16 PM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಮಳೆಯಿಂದ ಭಾರಿ ಅವಾಂತರಗಳು ಸೃಷ್ಟಿಯಾಗಿದ್ದು, ಹಲವಾರು ಪ್ರದೇಶಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ನದಿಯಂತೆ ಆಗಿವೆ. ಈ ವಿಚಾರವಾಗಿ…

ಕರ್ನಾಟಕದ ಇತಿಹಾದಲ್ಲಿ ಅತಿ ಹೆಚ್ಚು ಸಾಲ ಪಡೆದ ಖ್ಯಾತಿ ಸಿಎಂ ಸಿದ್ದರಾಮಯ್ಯಗೆ ಸಲ್ಲುತ್ತದೆ: ಬೊಮ್ಮಾಯಿ

19/05/2025 7:10 PM

2 ಸಾವಿರ ಕೊಟ್ಟಂತೆ ಮಾಡಿ 20 ಸಾವಿರ ರೂ. ದರೋಡೆ: ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ

19/05/2025 7:06 PM

GOOD NEWS: ರಾಜ್ಯದ ಜನತೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್: ‘ಭೂ ಗ್ಯಾರಂಟಿ ಯೋಜನೆ’ ಜಾರಿ

19/05/2025 7:02 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.