ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಸಮುದಾಯದ ಯುವಕ ಯುವತಿಯರಿಗೆರಾಜ್ಯಾದ್ಯಂತ 28 ಸಾವಿರ ದ್ವಿಚಕ್ರ ವಾಹನಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿಕೆ ನೀಡಿದ ಈ ಬೆನ್ನಲ್ಲೇ ಪೆಟ್ರೋಲ್ ಏನು ನಿಮ್ಮಪ್ಪ ಕೊಡಿಸ್ತಾನಾ ? ಎಂಬ ಪ್ರಶ್ನೆಯ ಮೂಲಕ ನೆಟ್ಟಿಗರು ತರಾಟೆಗೈದಿದ್ದಾರೆ
ಪೆಟ್ರೋಲ್ ಏನು ನಿಮ್ಮಪ್ಪ ಕೊಡಿಸ್ತಾನಾ?, ಗಾಡಿ ಏನೋ ಒಕೆ.. ಒಂದು ಹುಡುಗಿನೂ ಕೊಡಿಸಿಬಿಡಿ!, ಕ್ವಾಟ್ರ್ ಬಾಟಲ್ ಜೊತೆ ದಿನಕ್ಕೆರಡು ಬಿರಿಯಾನಿನೂ ಕೊಡಿ!, ಕೇವಲ ಎಸ್ಸಿ/ಎಸ್ಟಿಗಳು ಮಾತ್ರ ಬಡವರಾ? ಬೇರೆ ಯಾರು ಇಲ್ವಾ?.. ಇವು.. ನಿರುದ್ಯೋಗಿ ಎಸ್ಸಿ/ಎಸ್ಟಿ ಯುವಕರಿಗೆ 28 ಸಾವಿರ ಬೈಕ್ ವಿತರಣೆಯ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಹೇಳಿಕೆಯ ಸುದ್ದಿಗೆ ಬಂದ ಪ್ರತಿಕ್ರಿಯೆಗಳು ಸುರಿಮಳೆಯಾಗಿದೆ
ಹೌದು, ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ/ಯುವತಿಯರು ಸ್ವಯಂ ಉದ್ಯೋಗ ಕೈಗೊಳ್ಳಲು 210 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ 28,000 ದ್ವಿಚಕ್ರ ವಾಹನಗಳನ್ನು ಸಮಾಜ ಕಲ್ಯಾಣ ಇಲಾಖೆಯಿಂದ ವಿತರಿಸುವ ಗುರಿ ಹೊಂದಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.
ಈ ಹೇಳಿಕೆಗೆ ಫೇಸ್ಬುಕ್ನಲ್ಲಿ ನೆಟ್ಟಿಗರು ತರಹೇವಾರಿ ಕಮೆಂಟ್ಗಳು ಬಂದಿದ್ದು, ಸಮಾಜ ಕಲ್ಯಾಣ ಇಲಾಖೆಯ ನಿರ್ಧಾರವನ್ನು ಚುನಾವಣೆಯ ಘೋಷಣೆ ಎಂದು ಕರೆದು, ಸಚಿವರು ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅದಲ್ಲದೇ ಬೈಕ್ ಕೊಡ್ತೀರಿ ಪೆಟ್ರೋಲ್ ಯಾರು ಕೊಡ್ತಾರೆ? ದ್ವಿಚಕ್ರ ವಾಹನದಲ್ಲಿ ಅದ್ಯಾವ ಘನಂದಾರಿ ಉದ್ಯೋಗ ಮಾಡೋಕಾಗುತ್ತೆ? ನಿಮಗೆ ದ್ವಿಚಕ್ರ ವಾಹನ ಕಂಪನಿ ಎಷ್ಟು ಕಮಿಷನ್ ನೀಡಿರಬಹುದು? ನಿರುದ್ಯೋಗಿಗಳು ಬೈಕ್ನಲ್ಲಿ ಭಿಕ್ಷೆ ಎತ್ತಬೇಕಾ ಎಂದು ಹಲವರು ಪ್ರಶ್ನಿಸಿದ್ದು, ಉದ್ಯೋಗ ಕೊಡಿ. ಇಲ್ಲ ಅಂದ್ರೇ ಸ್ವಯಂ ಉದ್ಯೋಗ ಅಥವಾ ವ್ಯಾಪಾರಕ್ಕೆ ಸಹಾಯಧನ ನೀಡಿ ಎಂದು ಆಗ್ರಹಿಸಿದ್ದಾರೆ.