ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ( Chief Minister ) ಫೋಟೋ ತೆಗೆಸಿಕೊಳ್ಳಲೂ ಹರಸಾಹಸಪಡಬೇಕೇ? ಪ್ರಧಾನಿ ( Prime Minister ) ಪಕ್ಕ ಸ್ವತಂತ್ರವಾಗಿ ನಿಲ್ಲಲೂ ಬಸವರಾಜ ಬೊಮ್ಮಾಯಿ ( Basavaraj Bommai ) ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು. ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ #PuppetCM ಅವರ ಸ್ಥಿತಿ ಶೋಚನೀಯವಾಗಿದೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ಸಿಎಂ ಬಗ್ಗೆ ವ್ಯಂಗ್ಯವಾಡಿದೆ.
ರಾಜ್ಯದ ಮುಖ್ಯಮಂತ್ರಿ ಫೋಟೋ ತೆಗೆಸಿಕೊಳ್ಳಲೂ ಹರಸಾಹಸಪಡಬೇಕೇ?
ಪ್ರಧಾನಿ ಪಕ್ಕ ಸ್ವತಂತ್ರವಾಗಿ ನಿಲ್ಲಲೂ @BSBommai ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರೆ ಸಿಎಂ ಹುದ್ದೆಗೆ ಆಗುತ್ತಿರುವ ಅವಮಾನವಿದು.
ಜಗ್ಗೇಶ್ ಅವರ ಹಿಂದೆ ನಿಂತು ಅವರನ್ನು ತಳ್ಳಿಕೊಂಡು ಮುಖ ತೋರಿಸುವ #PuppetCM ಅವರ ಸ್ಥಿತಿ ಶೋಚನೀಯವಾಗಿದೆ!#TroubleEngineSarkara pic.twitter.com/t3hfzGP3DA
— Karnataka Congress (@INCKarnataka) November 11, 2022
ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ. ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು ಆರ್ ಅಶೋಕ್ ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ? ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ ಬಿಜೆಪಿ ನಾಯಕರಿಗೆ ( BJP Leader ) ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ ಎಂಬುದಾಗಿ ಕಿಡಿಕಾರಿದೆ.
ಸ್ವಾಮಿಜಿಗಳಿಗೆ ಅವರದ್ದೇ ಆದ ಗೌರವವಿರುತ್ತದೆ. ಘನತೆ ಇರುತ್ತದೆ.
ಹೆಗಲ ಮೇಲೆ ಕೈ ಹಾಕುವಷ್ಟು ಆದಿಚುಂಚನಗಿರಿ ಶ್ರೀಗಳು@RAshokaBJP ಅವರಿಗೆ ಸದರ ಎನಿಸಿದ್ದಾರೆಯೇ? ಇದೇ ರೀತಿ ಮೋದಿ ಹೆಗಲಿಗೆ ಕೈ ಹಾಕುವ ಧೈರ್ಯವಿದೆಯೇ?
ಧರ್ಮ, ಸಂಸ್ಕೃತಿಯ ಬಗ್ಗೆ ಮಾತಾಡುವ @BJP4Karnataka ನಾಯಕರಿಗೆ ಕನಿಷ್ಠ ಸಂಸ್ಕಾರದ ಜ್ಞಾನವಿಲ್ಲ. pic.twitter.com/28MHEiVjLF
— Karnataka Congress (@INCKarnataka) November 11, 2022
ತನ್ನ ಕ್ಷೇತ್ರ ಮುಳುಗಿದ್ದಾಗ ದೋಸೆ ಸವಿಯುತ್ತಿದ್ದ ಸಂಸದ ತೇಜಸ್ವಿ ಸೂರ್ಯ ಕರ್ನಾಟಕದ ಬದಲು ಗುಜರಾತಿನ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತಾಡುತ್ತಿದ್ದಾರೆ! ನರೇಂದ್ರ ಮೋದಿ ಅವರೇ, ನಿಮ್ಮ ಬೆಂಬಲಿಗ ಉದ್ಯಮಿಯೊಬ್ಬರು ನಿಮ್ಮ ಸಂಸದರ & #TroubleEngineSarkara ದ ಯೋಗ್ಯತೆ ತಿಳಿಸಿದ್ದಾರೆ. ನಿಮ್ಮವರ ಮಾತನ್ನೂ ನೀವು ಗಮನಿಸುವುದಿಲ್ಲವೇ? ಎಂದು ಪ್ರಶ್ನಿಸಿದೆ.
ತನ್ನ ಕ್ಷೇತ್ರ ಮುಳುಗಿದ್ದಾಗ ದೋಸೆ ಸವಿಯುತ್ತಿದ್ದ ಸಂಸದ @Tejasvi_Surya ಕರ್ನಾಟಕದ ಬದಲು ಗುಜರಾತಿನ ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಮಾತಾಡುತ್ತಿದ್ದಾರೆ!@narendramodi ಅವರೇ,
ನಿಮ್ಮ ಬೆಂಬಲಿಗ ಉದ್ಯಮಿಯೊಬ್ಬರು ನಿಮ್ಮ ಸಂಸದರ & #TroubleEngineSarkara ದ ಯೋಗ್ಯತೆ ತಿಳಿಸಿದ್ದಾರೆ.ನಿಮ್ಮವರ ಮಾತನ್ನೂ ನೀವು ಗಮನಿಸುವುದಿಲ್ಲವೇ? pic.twitter.com/wUqSx7aIVP
— Karnataka Congress (@INCKarnataka) November 11, 2022