ಮಂಡ್ಯ: ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಹೊಸ ಆನಂದೂರು ಗ್ರಾಮದ ಕಿರಣ್(22) ಮೃತ ಯುವಕ. ಶನಿವಾರ ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿ, ಅನ್ನಸಂತರ್ಪಣೆ ಕೂಡ ನಡೆಸಿದ್ದದ ಬಳಿಕ ಕಿರಣ್, ರಾತ್ರಿ 10 ಮನೆಗೆ ಗಂಟೆಯಲ್ಲಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಕೆ.ಆರ್.ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.