ಬೆಂಗಳೂರು: ರಾಜ್ಯ ಚುನಾವಣಾ ಆಯೋಗದಿಂದ ( Karnataka State Election Commission) ನಾಳೆ ಕರಡು ಮತದಾರರ ಪಟ್ಟಿಯನ್ನು ( Voter List ) ಪ್ರಕಟಿಸಲಾಗುತ್ತಿದೆ. ಅಲ್ಲದೇ ವಿಶೇಷ ಪರಿಷ್ಕರಣೆಯ ಅಭಿಯಾನವನ್ನು ಆರಂಭಿಸಲಾಗುತ್ತಿದೆ. ಈ ವೇಳೆ ಸಾರ್ವಜನಿಕರು ತಮ್ಮ ಮತದಾರರ ಪಟ್ಟಿಗೆ ( Karnataka Voter List ) ಸಂಬಂಧಿಸಿದಂತ ಹಲವು ಸಮಸ್ಯೆಗಳನ್ನು ಸರಿ ಪಡಿಸಿಕೊಳ್ಳಬಹುದಾಗಿದೆ.
TET-2022 ಪ್ರವೇಶ ಪತ್ರದಲ್ಲಿ ಅಶ್ಲೀಲ ಚಿತ್ರ : ಶಿಕ್ಷಣ ಇಲಾಖೆಯಿಂದ ಮಹತ್ವದ ಸ್ಪಷ್ಟೀಕರಣ
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಚುನಾವಣಾ ಆಯೋಗವು ( Election Commission ), ಸಾರ್ವಜನಿಕರು ದಿನಾಂಕ 09-11-2022ರಂದು ಪ್ರಕಟಗೊಳ್ಳಲಿರುವ ಕರಡು ಮತದಾರರ ಪಟ್ಟಿಯನ್ನು ಪರೀಕ್ಷಿಸಿಕೊಳ್ಳಿ. ಹೆಸರು ಇಲ್ಲದೇ ಇದ್ದರೇ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿ ಎಂದು ತಿಳಿಸಿದೆ.
ನ್ಯಾಯಯ ಸಿಕ್ಕಿಲ್ಲ ಅಂತ ಶಿವಮೊಗ್ಗದ ಡಿಸಿ ಕಚೇರಿ ಮುಂದೆ ಬೈಕ್ಗೆ ಬೆಂಕಿ ಇಟ್ಟ ಯುವಕ
ಇನ್ನೂ ಮತದಾರರ ಪಟ್ಟಿಯಲ್ಲಿ ಏನಾದರೂ ತಪ್ಪುಗಳಿದ್ದರೇ ಸರಿಪಡಿಸಿಕೊಳ್ಳಲು ಅರ್ಜಿ ಸಲ್ಲಿಸಬಹುದು. ಹೆಸರು ತೆಗೆದುಹಾಕಲು ಅಥವಾ ವರ್ಗಾವಣೆ ಮಾಡಲು ಸಂಬಂಧ ಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಗಳ ಬಳಿ ಅವಶ್ಯಕವಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಎಂದು ಹೇಳಿದೆ.
ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಗೆಲುವು ನಿಶ್ಚಿತ : ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್
ಇದಲ್ಲದೇ Voter Helpine App ಅಥವಾ www.nvsp.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ದಿನಾಂಕ 09-11-2022ರ ನಾಳೆ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಬಗ್ಗೆ ಆಕ್ಷೇಪಣೆಗಳನ್ನು 08-12-2022ರೊಳಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದೆ.