ಬೆಂಗಳೂರು : ‘ಪಿಎಸ್ಐ’ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ 11 ಮಂದಿ ಆರೋಪಿಗಳಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.
ಜಾಮೀನು ಪಡೆದ ಆರೋಪಿಗಳಲ್ಲಿ 9 ಮಂದಿ ಅಭ್ಯರ್ಥಿಗಳಾಗಿದ್ದರೆ, ಇಬ್ಬರು ಮದ್ಯ ವರ್ತಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಗಳಾದ ದಿಲೀಪ್, ಸೋಮಶೇಖರ್, ಮಮ್ತೇಶ್ ಗೌಡ, ಜಾಗೃತ್, ರಚನಾ ಸೇರಿ 11 ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ. ಆರೋಪಿಗಳಿಗೆ ಬಾಂಡ್, ಶ್ಯೂರಿಟಿ ಸೇರಿ ಕೆಲ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಪಿಎಸ್ಐ ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಮಂದಿಯನ್ನು ಪೊಲೀಸರು ಜೈಲಿಗಟ್ಟಿದ್ದರು. ದಿನದಿಂದ ದಿನಕ್ಕೆ ಒಬ್ಬರ ಹಿಂದೆ ಒಬ್ಬರಂತೆ ಆರೋಪಿಗಳನ್ನು ಜೈಲಿಗೆ ಕಳುಹಿಸುತ್ತಿದ್ದಾರೆ.
ಮುಂದಿನ 3 ವಾರಗಳಲ್ಲಿ ‘Truecaller’ನಂತಹ ‘ಸರ್ಕಾರಿ ಸೇವೆ’ ಆರಂಭ, ಇದಕ್ಕಿದೆ ಮತ್ತಷ್ಟು ವಿಶೇಷತೆ