ವಿಜಯಪುರ: ರಾಜ್ಯದಲ್ಲಿ ತಲ್ಲಣ ಸೃಷ್ಠಿಸಿದ್ದಂತ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮ ( PSI Recruitment Scam ) ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ( Farmer Chief Minister ) ಕೈವಾಡವಿದೆ. ಹೀಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ( CBI Investigation ) ವಹಿಸುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ( MLA Basanagowdha Patil Yathnal ) ಒತ್ತಾಯಿಸಿದ್ದಾರೆ.
ಈ ಕುರಿತಂತೆ ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ. ಈ ವಿಷಯವನ್ನೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರೇ ( Farmer CM HD Kumaraswamy ) ಹೇಳಿದ್ದಾರೆ. ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು. ಸಿದ್ಧರಾಮಯ್ಯ ( Siddaramaiah ) ಕೂಡ ಯಾರು ಆ ಮಾಜಿ ಸಿಎಂ ಪುತ್ರ ಎಂಬುದು ಹೇಳಿ ಎಂದಿದ್ದಾರೆ. ಆದ್ರೇ ಸಿಬಿಐ ತನಿಖೆಗೆ ವಹಿಸಿದ್ರೇ ಅದೇ ತಾನಾಗಿಯೇ ಹೊರ ಬರಲಿದೆ ಎಂದಿದ್ದಾರೆ.
BIG NEWS: ಪಾಕ್ ಜೊತೆಗಿನ ಮಾತುಕತೆಯನ್ನು ತಳ್ಳಿಹಾಕಿದ ಗೃಹ ಸಚಿವ ಅಮಿತ್ ಶಾ
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಎಡಿಜಿಪಿಯೊಬ್ಬರೇ ಶಾಮೀಲಾಗಿಲ್ಲ. ಅವರಲ್ಲದೇ ಈ ಪ್ರಕರಣದ ಹಿಂದೆ ದೊಡ್ಡ ಕಳ್ಳರೇ ಇದ್ದಾರೆ. ಈ ಅಕ್ರಮದಲ್ಲಿ 70 ರಿಂದ 80 ಲಕ್ಷ ಹಣವನ್ನು ಕೊಟ್ಟಿದ್ದಾರೆ. ಕುಟಂಬವೇ ಹಾಳಾಗುವ ಹಂತಕ್ಕೆ ತಲುಪಿವೆ. ಕನಿಷ್ಠ ಪಕ್ಷ ಹಣವನ್ನು ಆ ನೊಂದ ಕುಟುಂಬಗಳಿಗೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.